ಉದಯವಾಹಿನಿ,ನವದೆಹಲಿ –ಮಣಿಪುರ ಗಲಭೆ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡವಿದೆ ಎಂದು ಮುಖ್ಯಮಂತ್ರಿ ಬೀರೆನ್ ಸಿಂಗ್ ಆರೋಪಿಸಿದ್ದಾರೆ. ರಾಜ್ಯದಲ್ಲಿ ಶಾಂತಿ ಮರುಸ್ಥಾಪಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಮಾರ್ಗದರ್ಶನವೇ ಕಾರಣ ಎಂದು ಅವರು ಉಲ್ಲೇಖಿಸಿದ್ದಾರೆ.ಸಂಸತ್ತಿನಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಹೇಳಿಕೆಗಳನ್ನು ಆಲಿಸಿದ ನಂತರ ಮಣಿಪುರದಲ್ಲಿ ಶಾಂತಿ ನೆಲೆಸಿದೆ. ಇದು ನಿರಾಶ್ರೀತ ಜನರ ಪುನರ್ವಸತಿ ಮತ್ತು ಇತ್ಯರ್ಥಕ್ಕಾಗಿ ನಿತ್ಯದ ಕೆಲಸವಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಮಣಿಪುರ ಹಿಂಸಾಚಾರದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂ„ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ರಾಹುಲ್ ಅವರು ಲಡಾಖ್‍ನಲ್ಲಿದ್ದರೆ, ಅವರು ಲಡಾಖ್ ಬಗ್ಗೆ ಮಾತನಾಡಬೇಕು ಎಂದು ಕಾಲೇಳೆದರು.
ರಾಹುಲ್ ಗಾಂ„ಯವರು ಲಡಾಖ್‍ನಲ್ಲಿರುವಾಗ ಮಣಿಪುರದ ಬಗ್ಗೆ ಹೇಗೆ ಯೋಚಿಸಿದರು? ನೀವು ಲಡಾಖ್‍ಗೆ ಹೋಗುವುದಾದರೆ ಲಡಾಖ್‍ನ ಬಗ್ಗೆ ಮಾತನಾಡಿ. ಮಣಿಪುರದಲ್ಲಿ ಇಂದು ಏನಾಗುತ್ತಿದೆ, ಇಂದು ಮಣಿಪುರದಲ್ಲಿ ಏನಾಗುತ್ತಿದೆ, ಅದು ಕಾಂಗ್ರೆಸ್‍ತ ತಂತ್ರವಾಗಿದೆ. ಮಾನವ ಜೀವನದ ಮೇಲೆ ರಾಜಕೀಯ ಮಾಡಬಾರದು ಎಂದು ಅವರು ತಿವಿದಿದ್ದಾರೆ. ಇಡೀ ದೇಶವು ಮಣಿಪುರದ ಜನರೊಂದಿಗೆ ನಿಂತಿದೆ. ಎಲ್ಲಾ ವಿವಾದಗಳನ್ನು ಪರಿಹರಿಸಲು ಶಾಂತಿಯೊಂದೇ ಏಕೈಕ ಮಾರ್ಗವಾಗಿದೆ. ಕೇಂದ್ರ ಮತ್ತು ಮಣಿಪುರ ಸರ್ಕಾರವು ರಾಜ್ಯಕ್ಕೆ ಶೀಘ್ರವಾಗಿ ಶಾಂತಿ ಮರಳುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
