ಉದಯವಾಹಿನಿ ,ಕುಶಾಲನಗರ: ಕೊಡಗು ವಿಶ್ವವಿದ್ಯಾಲಯ, ಕೊಡಗು ಮತ್ತು ಬಹು ಶಾಸ್ತ್ರೀಯ ವಿಕಾಸ ಸಂಶೋಧನಾ ಕೇಂದ್ರ, ಧಾರವಾಡ (CMDR) ಈ ಎರಡೂ ಸಂಸ್ಥೆಗಳ ಮಧ್ಯೆ 21 ಆಗಸ್ಟ್ 2023 ರಂದು ಒಡಂಬಡಿಕೆಗೆ ಸಹಿ ಹಾಕಲಾಯಿತು.
ಪ್ರಸ್ತುತ ಈ ಒಡಂಬಡಿಕೆಯು ಕೇಂದ್ರ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತಿರುವ ಬಹು ಶಾಸ್ತ್ರೀಯ ವಿಕಾಸ ಸಂಶೋಧನಾ ಕೇಂದ್ರ, ಧಾರವಾಡ (CMDR) ಹಾಗೂ ರಾಜ್ಯ ಸರ್ಕಾರದ ಅಂಗ ಸಂಸ್ಥೆಯಾಗಿರುವ ಕೊಡಗು ವಿಶ್ವವಿದ್ಯಾಲಯವು ಮುಂಬರುವ ಮೂರು ವರ್ಷಗಳಲ್ಲಿ ಜಂಟಿಯಾಗಿ ಕೆಲಸ ಮಾಡುವ ಮುಖ್ಯ ಉದ್ದೇಶವನ್ನು ಹೊಂದಿದೆ. ಈ ಎರಡೂ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರಿಗೆ ತರಬೇತಿಗಳನ್ನು ಹಮ್ಮಿಕೊಳ್ಳವುದು, ಅವರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಕಾರ್ಯಕ್ರಮಗಳನ್ನು ಏರ್ಪಡಿಸುವುದು, ವಿವಿಧ ರೀತಿಯ ಕಾರ್ಯಗಾರಗಳು, ವಿಚಾರ ಸಂಕಿರಣಗಳು, ಸಮ್ಮೇಳನಗಳನ್ನು ಆಯೋಜಿಸುವುದು, ನೀತಿ ನಿಯಮಗಳಿಗೆ ಸಂಬಂಧಿಸಿದ ವಿಷಯಗಳ ಮೇಲೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಇದರ ಜೊತೆಗೆ ಜಂಟಿಯಾಗಿ ಸಂಶೋಧನಾ ಯೋಜನೆಗಳನ್ನು ತಯಾರು ಮಾಡುವುದು. ಹಾಗೆಯೇ ವಿದ್ಯಾರ್ಥಿಗಳಿಗೆ ಪರಸ್ಪರ ಈ ಯೋಜನಾ ಕಾರ್ಯಗಳಲ್ಲಿ ಕೆಲಸ ನಿರ್ವಹಿಸಲು ಇಂಟರ್ನ್‌‌ಶಿಪ್ ಕೊಡುವುದು. ಇದನ್ನು ಹೊರತು ಪಡಿಸಿ ಇನ್ನಾವುದೇ ವಿಷಯಗಳಲ್ಲಿ ಪರಸ್ಪರ ಅಭಿರುಚಿ ಹೊಂದಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು.
ಇದೇ ಸಂದರ್ಭದಲ್ಲಿ ಬಹು ಶಾಸ್ತ್ರೀಯ ವಿಕಾಸ ಸಂಶೋಧನಾ ಕೇಂದ್ರ, ಧಾರವಾಡ ಇಲ್ಲಿನ ನಿರ್ದೇಶಕರಾದ ಡಾ. ಬಸವಪ್ರಭು ಜಿರ್ಲಿ ಮತ್ತು ಕೊಡಗು ವಿಶ್ವವಿದ್ಯಾಲಯದ ಕುಲತಿಗಳಾದ ಪ್ರೊ. ಅಶೋಕ ಸಂ. ಆಲೂರ ಅವರು ಜಂಟಿಯಾಗಿ 21 ಆಗಸ್ಟ್ 2023 ರಂದು ಬೆಂಗಳೂರಿನಲ್ಲಿ ಒಡಂಬಡಿಕೆಯನ್ನು ಮಾಡಿಕೊಳ್ಳಲಾಯಿತು.

Leave a Reply

Your email address will not be published. Required fields are marked *

error: Content is protected !!