ಉದಯವಾಹಿನಿ, ಲಾಹೋರ್: ಐಎಸ್, ಆಲ್-ಕೈದಾ ಸೇರಿದಂತೆ ನಿಷೇಧಿತ ಉಗ್ರ ಸಂಘಟನೆಯ ಎಂಟು ಮಂದಿ ಶಂಕಿತ ಉಗ್ರರನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.ಪಂಜಾಬ್‌ನ ವಿವಿಧ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಭಯೋತ್ಪಾದಕರ ಪ್ರಮುಖ ಸಂಚನ್ನು ವಿಫಲಗೊಳಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ಘಟಕದ ಭಯೋತ್ಪಾದನಾ ನಿಗ್ರಹ ದಳ (ಸಿಟಿಡಿ) ತಿಳಿಸಿದೆ.
