ಉದಯವಾಹಿನಿ, ಸಿಂಧನೂರು: ನಗರದ ಅಮರ ಶ್ರೀ ಆಲದ ಮರದ ಹತ್ತಿರ ವನಸಿರಿ ಫೌಂಡೇಶನ್ ವತಿಯಿಂದ ನ್ಯಾಯವಾದಿ ಅನಿಲಕುಮಾರ ಅವರ ಹುಟ್ಟು ಹಬ್ಬದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ. ಸಂ. ಮಾತನಾಡಿದ ನ್ಯಾಯವಾದಿ ಅನಿಲಕುಮಾರ ಅವರು ವನಸಿರಿ ಫೌಂಡೇಶನ್ ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉತ್ತಮವಾದ ಕಾರ್ಯನಿರ್ವಹಿಸುತ್ತಿದೆ ಪ್ರತಿಯೊಬ್ಬರ ಹುಟ್ಟು ಹಬ್ಬದ ಕಾರ್ಯಕ್ರಮಗಳನ್ನು ವಿಶಿಷ್ಟವಾಗಿ ಇಲ್ಲಿ ಆಚರಿಸಲಾಗುತ್ತಿದೆ ಒಬ್ಬೊಬ್ಬರ ಒಂದೊಂದು ಸಸಿ ನೆಟ್ಟರೆ ಅವರ ಜೀವನದುದ್ದಕ್ಕೂ ನೆನಪು ಮಾಡಿಕೊಳ್ಳಬಹುದು ಜೊತೆಗೆ ಈ ಒಂದು ಸಸಿ ಗಿಡವಾಗಿ ಮರವಾಗಿ ಬೆಳೆದು ನಮ್ಮ ಮುಂದಿನ ಪೀಳಿಗೆಗೆ ಶುದ್ಧವಾದ ಗಾಳಿಯನ್ನು ನೀಡುತ್ತದೆ,ಆಹಾರ ನೀಡುತ್ತದೆ.ಇಂತಹ ಉತ್ತಮವಾದ ಕಾರ್ಯದಲ್ಲಿ ನಾನು ಕೂಡಾ ನನ್ನ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಇವರ ಜೊತೆಗೆ ಆಚರಿಸುವ ಮೂಲಕ ಭಾಗಿಯಾಗಿದ್ದೇನೆ.ಇದು ನನ್ನ ಜೀವನದ ಒಂದು ಅದ್ಭುತವಾದ ಕ್ಷಣ.ನಾನು ಎಂದಿಗೂ ಮರೆಯುವುದಿಲ್ಲ.

ಇಂತಹ ಕಾರ್ಯಗಳ ಮೂಲಕ ಸಮಾಜಕ್ಕೆ ಒಂದು ಮಾದರಿ ಈ ಸಂ. ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ವೈ ಅವರು ಶಾಸಕರಾದ ಹಂಪನಗೌಡ ಬಾದರ್ಲಿ ಅವರು ನೇತೃತ್ವದಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಈ ಸಂ.ವನಸಿರಿ ಫೌಂಡೇಶನ್ ಸಂಸ್ಥಾಪಕಅದ್ಯಕ್ಷ ಅಮರೇಗೌಡ ಮಲ್ಲಾಪುರ, ನ್ಯಾಯವಾದಿಗಳಾದ ಅನಿಲಕುಮಾರ,ಮುತ್ತು ಪಾಟೀಲ ಸಮಾಜ ಸೇವಕರು, ಅಮರಯ್ಯಸ್ವಾಮಿ ಪತ್ರಿಮಠ ಶಿಕ್ಷಕರು,ಚಂದ್ರಶೇಖರ ಹಿರೇಮಠ,ರಂಜಾನ್ ಸಾಬ್,ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ವೆಂಕಟರಡ್ಡಿ ಹೆಡಗಿನಾಳ,ಗಿರಿಸ್ವಾಮಿ ಹೆಡಗಿನಾಳ,ಅಮರೇಶ ಗುಂಜಳ್ಳಿ,ಬಸವರಾಜ ಪಾಟೀಲ,ಚನ್ನಪ್ಪ ಕೆ.ಹೊಸಹಳ್ಳಿ ಇನ್ನಿತರರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!