
ಉದಯವಾಹಿನಿ, ಚಿಂಚೋಳಿ: ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ,ಚಿಂಚೋಳಿ ಬ್ಯಾಂಕಿನ 14ಕ್ಷೇತ್ರಗಳ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ಚುನಾವಣೆಗೆ ಒಟ್ಟಾರೆ 35ನಾಮಪತ್ರ ಸಲ್ಲಿಕೆಯಾಗಿದ್ದು ನಾಮಪತ್ರ ಪರಿಶೀಲನೆ ವೇಳೆಯಲ್ಲಿ 04ನಾಮಪತ್ರಗಳು ತಿರಸ್ಕಾರ ಮಾಡಲಾಗಿದ್ದು 31ನಾಮಪತ್ರ ಕ್ರಮಬದ್ಧವಾಗಿವೆ ಎಂದು ಬ್ಯಾಂಕಿನ ರಿಟರ್ನಿಂಗ್ ಆಫೀಸರ್ ರವೀಂದ್ರ ತಿಳಿಸಿದ್ದಾರೆ.
ಸೆಪ್ಟೆಂಬರ್ 03ರಂದ್ದು ನಡೆಯುವ ಚನಾವಣೆಗೆ ಅ.27ರಂದು ನಾಮಪತ್ರಗಳು ಪರಿಶೀಲನೆ ನಂತರ ಸದರಿ ಅಭ್ಯರ್ಥಿಗಳು ಎರಡು ನಾಮಪತ್ರಗಳನ್ನು ಸಲ್ಲಿಸಿದ್ದು ಮೊದಲ ಸಲ್ಲಿಸಿದ ನಾಮಪತ್ರ ಅಂಗಿಕರಿಸಿ ಎರಡನೇಯ 4 ನಾಮಪತ್ರವನ್ನು ತಿರಸ್ಕಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇಂದು ಅ.28ರಂದ್ದು ಬೆಳಿಗ್ಗೆ 11ರಿಂದ 03ಗಂಟೆವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ,ಅಭ್ಯರ್ಥಿಗಳು ಅಪೇಕ್ಷಿಸಿದಲ್ಲಿ ಚಿಹ್ನೆಗಳ ಹಂಚಿಕೆ,ಅ.30ರಂದ್ದು 11ಗಂಟೆಯ ನಂತರ ಚಿಹ್ನೆಯ ಸಹಿತ ಕ್ರಮಬದ್ದವಾಗಿ ಸ್ವರ್ಧೆಯಲ್ಲಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಅವಿರೋಧ ಆಯ್ಕೆ ಖಚಿತ,ಘೋಷಣೆ ಮಾತ್ರ ಬಾಕಿ : 1)ಚಿಮ್ಮಾಯಿದ್ಲಾಯಿ ಸಾಲಗಾರರ ಸಾಮಾನ್ಯ ಮತಕ್ಷೇತ್ರಕ್ಕೆ ಮಲ್ಲಿಕಾರ್ಜುನ ರಾಚಪ್ಪ ಒಂದೇ ನಾಮಪತ್ರ ಸಲ್ಲಿಕೆಯಾಗಿ ಕ್ರಮಬದ್ಧವಾಗಿದೆ.
2)ರಟಕಲ್ ಸಾಲಗಾರರ ಸಾಮಾನ್ಯ ಮತಕ್ಷೇತ್ರಕ್ಕೆ ಮಹಾದೇವಪ್ಪ ಸೋಮಶೇಖರ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದು ಕ್ರಮಬದ್ಧವಾಗಿದೆ.
3)ಪೋಲಕಪಳ್ಳಿ ಸಾಲಗಾರರ ಹಿಂದುಳಿದ ವರ್ಗ ‘ಅ’ ಮತಕ್ಷೇತ್ರಕ್ಕೆ ಜಗದೀಶಸಿಂಗ್ ಠಾಕೂರ್ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದು ಕ್ರಮಬದ್ಧವಾಗಿದೆ.
4)ಗರಗಪಳ್ಳಿ ಸಾಲಗಾರರ ಪರಿಶೀಷ್ಟ ಜಾತಿ ಮತಕ್ಷೇತ್ರಕ್ಕೆ ಅಮರಜೀವನ ರಮೇಶ ಯಾಕಾಪೂರ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದು ಕ್ರಮಬದ್ಧವಾಗಿದೆ.
5)ಸುಲೇಪೇಟ ಸಾಲಗಾರರ ಪರಿಶೀಷ್ಟ ಪಂಗಡ ಮತಕ್ಷೇತ್ರಕ್ಕೆ ಕಾಶಿನಾಥ ರಾಯಪ್ಪ ಒಂದೇ ನಾಮಪತ್ರ ಸಲ್ಲಿಕೆಸಿದ್ದು ಕ್ರಮಬದ್ಧ ಆಗಿರುವುದರಿಂದ 5ಜನ ಅವಿರೋಧ ಆಯ್ಕೆ ಖಚಿತ,ರಿಟರ್ನಿಂಗ್ ಆಫೀಸರನಿಂದ ಘೋಷಣೆ ಮಾತ್ರ ಬಾಕಿಯಿದೆ.
ನಾಮಪತ್ರ ಪರಿಶೀಲನೆ ವೇಳೆ ತಿರಸ್ಕಾರಗೊಂಡ ಪಟ್ಟಿ: ಸದರಿ ಅಭ್ಯರ್ಥಿಗಳು ಎರಡು ನಾಮಪತ್ರಗಳನ್ನು ಸಲ್ಲಿಸಿದ್ದು ಮೊದಲು ಸಲ್ಲಿಸಿದ ನಾಮಪತ್ರ ಅಂಗಿಕರಿಸಿ ಎರಡನೇ ನಾಮಪತ್ರವನ್ನು ತಿರಸ್ಕಾರ ಮಾಡಿದ ಪಟ್ಟಿ
1) ಚಂದನಕೇರಾ ಕ್ಷೇತ್ರ: ಸುಭಾಷ್ ಗುಂಡಪ್ಪ.
2) ಚಿಮ್ಮಾಯಿದ್ಲಾಯಿ: ಮಲ್ಲಿಕಾರ್ಜುನ ರಾಚಪ್ಪ.
3) ಚಿಂಚೋಳಿ: ಶ್ರೀನಿವಾಸ ನಾಗೇಂದ್ರ ಬಂಡಿ.
4) ಕಾಶಿನಾಥ ರಾಯಪ್ಪ ಇವೆಲ್ಲವೂ ನಾಮಪತ್ರಗಳು ತಿರಸ್ಕಾರಗೊಂಡಿವೆ.ಪಿಎಲ್.ಡಿ ಬ್ಯಾಂಕ್ ಚುನಾವಣೆ ಅತಿಹೆಚ್ಚು ನಾಮಪತ್ರ ಸಲ್ಲಿಕೆ ಕ್ಷೇತ್ರಚಿಂಚೋಳಿ ಸಾಲಗಾರರಲ್ಲದ ಸಾಮಾನ್ಯ ಮತಕ್ಷೇತ್ರಕ್ಕೆ ಅತಿ ಹೆಚ್ಚು 5ಜನ ನಾಮಪತ್ರ ಸಲ್ಲಿಸಿದ್ದು ಕ್ರಮಬದ್ಧವಾಗಿವೆ.
1) ಶ್ರೀಹರಿ ಕಾಟಾಪೂರ,2) ಶಬ್ಬೀರ ಅಹಮದ,3) ಶಾಮರಾವ ಧೂಳಪ್ಪ,4) ಅಬ್ದುಲ್ ರಜಾಕ್,5) ಸುವರ್ಣ ಬಸವರಾಜ ನಾಮಪತ್ರಗಳು ಸಲ್ಲಿಸಿದ್ದು ಕ್ರಮಬದ್ಧವಾಗಿವೆ.
