ಉದಯವಾಹಿನಿ, ಇಂಡಿ : ಡಾ. ಫ.ಗು.ಹಳಕಟ್ಟಿಯವರು ವಚನ ಸಾಹಿತ್ಯ ಎಂಬ ಹುತಿಟ್ಟ ಹೊನ್ನಿನ ಗಣಿಯನ್ನು ಸಂಶೋಧಿಸಿದರು. ಬಾಡಿಗೆ ಮನೆ, ಸಾವು, ಬಡತನ, ಅವರ ಮೂರು ಸಂಗಾತಿಗಳಾಗಿದ್ದವು. ತಮ್ಮ ಬದುಕಿನ ಅರ್ಥಿಕತೆ ಬಡವಾಗಿದ್ದರೂ ವಚನ ಸಾಹಿತ್ಯವೆಂಬ ಶ್ರೀಮಂತಿಕೆಯನ್ನು ಸರ್ವರಿಗೂ ನೀಡಿದರು. ಕಷ್ಟಗಳನ್ನೇ ತಮ್ಮ ಅಹಾರ ಮಾಡಿಕೊಂಡು ವಚನ ಸಾಹಿತ್ಯ ಸಂಶೋಧಿಸಿ ವಚನಗಳ ತಾತ್ವಿಕ ಫಲವನ್ನು ಜಗತ್ತಿಗೆ ನೀಡಿದರು ಎಂದು ಸಾಲೋಟಗಿಯ ಕವಿಗಳಾದ ಗೀತಯೋಗಿ ಹೇಳಿದರು.
ಇಂಡಿಯ ಭೀಮಾಂತರoಗ ಜಗಲಿ ಆನ್ ಲೈನ್ ಸಾಹಿತ್ಯಿಕ ಸಾಂಸ್ಕೃತಿಕ ಸಂಸ್ಥೆಯಿoದ ಹಮ್ಮಿಕೊಂಡ ಉಪನ್ಯಾಸ ಮಾಲಿಕೆ 2 ರಲ್ಲಿ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿಯವರ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ಬಸವಾದಿ ಶರಣರ ವಚನ ಸಾಹಿತ್ಯವನ್ನು ಬೆಳಕಿಗೆ ತಂದ ಹಳಕಟ್ಟಿ ಅವರು ಒಂದು ವಿಶ್ವವಿದ್ಯಾಲಯ ಸಾಧಿಸಿದಷ್ಟು ಕೆಲಸವನ್ನು ಏಕಾಂಗಿಯಾಗಿ ವೀರನಾಗಿ ಸಾಧಿಸಿದರು. ಅವರು ಒಂದು ವ್ಯಕ್ತಿಯಾಗಿರದೆ ಒಂದು ಸಂಸ್ಥೆಯಾಗಿ ಒಂದು ಸಮಾಜವಾಗಿ ಮತ್ತು ಒಂದು ಶಕ್ತಿಯಾಗಿ ಬದುಕಿದರು. ಶ್ರೀ ಸಿದ್ದೇಶ್ವರ ಸಂಸ್ಥೆ,ಶ್ರೀ ಸಿದ್ದೇಶ್ವರ ಬ್ಯಾಂಕು,ಬಿ.ಎಲ್.ಡಿ.ಈ ಶಿಕ್ಷಣ ಸಂಸ್ಥೆ ಕಟ್ಟಿದರು ಎಂದು ಹೇಳಿದರು. ಲಾಭ ಕೊಡುವ ವಕೀಲ ವೃತ್ತಿಯನ್ನು ತ್ಯಜಿಸಿ ವಚನಗಳ ಸಂಶೋಧನೆಗೆ ಇಳಿದು ಶರಣರ ತತ್ವಾದರ್ಶ ಹಾಗೂ ವಚನಗೊಳಗಿದ್ದ ವೈಚಾರಿಕ ಮಾನವ ಪ್ರಜ್ಞೆಯನ್ನು ಎತ್ತಿ ತೋರಿಸಿದ ಕೀರ್ತಿಗೆ ಭಾಜನರಾಗಿದ್ದಾರೆ ಎಂದರು. ಚಡಚಣದ ಸಾಹಿತಿಗಳಾದ ಡಾ. ರಾಜಶೇಖರ ಮಠಪತಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ ಡಾ. ಫ.ಗು.ಹಳಕಟ್ಟಿಯವರದು ವೈವಿದ್ಯಮಯ ವ್ಯಕ್ತಿತ್ವ ,
ಶಿಕ್ಷಣ,ಸಾಹಿತ್ಯ, ಮತ್ತು ಸಹಕಾರ ಕ್ಷೇತ್ರಗಳಿಂದ ಬಾಳು ಬಂಗಾರ ಎಂದು ತಿಳಿದವರು. ವಚನ ಸಾಹಿತ್ಯವು ಕನ್ನಡ ಮತ್ತು ಕರ್ನಾಟಕ ಜೀವನದ ಉಸಿರಾಗಿತ್ತು. ಶರಣರ ಜೀವನದ ಮೌಲ್ಯಗಳು ಕಾಲಾತೀತವಾದ ಕಾಲ ಗರ್ಭದಲ್ಲಿ ಶರಣರ ಜೀವನ ಮೌಲ್ಯಗಳು ಮತ್ತು ಅವರ ವಚನ ಸಾಹಿತ್ಯವು ಹುದುಗಿ ಹೋಗಿತ್ತು. ಇದನ್ನು ಸಂಶೋಧಿಸಿ, ಸಂಗ್ರಹಿಸಿ,ಸoಪಾದಿಸಿ, ಪ್ರಕಟಿಸಿ, ವಚನ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ಕಸಾಪಅಧ್ಯಕ್ಷರಾಘವೇಂದ್ರಕುಲಕರ್ಣಿ,ಶಿಕ್ಷಕಬಸವರಾಜಕಿರಣಗಿ,ಶಿಕ್ಷಕಿಬಿ.ಸಿ.ಭಗವoತಗೌಡರಮಾತನಾಡಿದರು. ಡಾ. ಡಿ.ಎಸ್.ಅಕ್ಕಿ,ಡಾ. ನಿವೃತ್ತ ಪ್ರಾಚಾರ್ಯ ಚನ್ನಪ್ಪ ಕಟ್ಟಿ, ಚಿದಂಬರ ಬಂಡಗರ, ಸಂತೋಷ ಬಂಡೆ, ಶ್ರೀಧರ ಹಿಪ್ಪರಗಿ,ವೈ.ಜಿ.ಬಿರಾದಾರ, ಸರೋಜಿನಿ ಮಾವಿನಮರ, ರಾಚು ಕೊಪ್ಪ, ಸಂಗನಗೌಡ ಹಚಡದ,ಸಿದ್ದು ಹೊಸಪೇಠೆ,ಮೋಹನ್ ಕಟಕದೊಂಡ,ಸದಾನoದ ಈರನಕೇರಿ,ಅಂಬಣ್ಣ ಸುಣಗಾರ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!