
ಉದಯವಾಹಿನಿ, ಶಿಡ್ಲಘಟ್ಟ : ಸ್ವತಂತ್ರ್ಯ ಭಾರತದಲ್ಲಿ ಸ್ವ-ಇಚ್ಚೆಯಿಂದ ಏನಾದರೂ ಸಾಧನೆ ಮಾಡಬೇಕು ಎಂದು ಛಲ ಹಿಡಿದು ಎಲೆಮರೆ ಕಾಯಿಯಂತೆ ನಿರಂತರ ಸೇವೆ ಮಾಡುತ್ತಾ ಯಾವುದೇ ಫಲಾಪೇಕ್ಷೆ ಇಲ್ಲದೆ ನಾವು ಮಾಡುವ ನಿಸ್ವಾರ್ಥ ಸೇವೆಯನ್ನು ಎಲ್ಲೊ ಒಂದು ಕಡೆ ಗುರುತಿಸಿ ಪೋತ್ಸಾಹ ನಿಡುವರಿರುತ್ತಾರೆ ಎಂಬುದಕ್ಕೆ ಈ ಅಭೂತಪೂರ್ವ ಪೂರ್ವ ಕಾರ್ಯಕ್ರಮ ಒಂದು ಉದಾಹರಣೆಯಾಗಿದೆ.
ಆ, 25 ಶುಕ್ರವಾರ ಶುಭ ಸಂಜೆ ಬೆಂಗಳೂರು ಜೆ.ಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರ ಆವರಣದ ಕನ್ನಡ ಭವನದ ಸಭಾಂಗಣದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮಾಚರಣೆಯಲ್ಲಿ “ಭಾರತ ಸೇವಾ ರತ್ನ ಪ್ರಶಸ್ತಿ” “ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ಪ್ರಶಸ್ತಿ” ಹಾಗೂ ಸೇವಾ ಚಕ್ರ ಪುರಸ್ಕಾರ್ ಪ್ರಶಸ್ತಿ ಪ್ರದಾನ ನಡೆಯಿತು.
ಭಾರತ ಸರ್ಕಾರದ ನೆಹರೂ ಯುವ ಕೇಂದ್ರ ಬೆಂಗಳೂರು ನಗರ ಜಿಲ್ಲೆ, ಹಾಗೂ ಸ್ವಾನ್ ಸಾಮಾಜಿಕ- ಆರ್ಥಿಕ ಅಭಿವೃದ್ಧಿ ಸಂಸ್ಥೆ (ರಿ)ಸ್ವರ್ಣ ಮುಖಿ ಮಾಸ ಪತ್ರಿಕೆ, ಇಂದು ಸಂಜೆ ದಿನಪತ್ರಿಕೆ, ಕನ್ನಡ ತಿಲಕ ದಿನಪತ್ರಿಕೆ, ಮೂಡಲ ಕಿರಣ ಟಿವಿ ವೆಬ್ ಚಾನೆಲ್, ಎಸ್ ಬಿ ನ್ಯೂಸ್ ವೆಬ್ ಚಾನೆಲ್ ಹಾಗೂ ವಿ ನಾಗರಾಜು ಪ್ರತಿಷ್ಠಾನ (ರಿ) ಅಡಿಗ ಆರ್ಟ್ಸ್ ಅಕಾಡೆಮಿ ಇವರ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಶಿಡ್ಲಘಟ್ಟ ತಾಲೂಕಿನ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಅಧ್ಯಕ್ಷರಾದ ಎಂ ಎನ್ ನಾಗಭೂಷಣ್ ರವರಿಗೆ ಸೇವಾ ಚಕ್ರ ಪುರಸ್ಕಾರ್ ಪ್ರಶಸ್ತಿ ನೀಡಿ ಗೌರವ ಸನ್ಮಾನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಮಾಜಿ ಮಂತ್ರಿಗಳಾದ ಬಿ.ಬಿ ನಿಂಗಯ್ಯರವರು ವಹಿಸಿದ್ದು ಡಾ. ಎಂ. ಸಿದ್ದಪ್ಪ ನೇಗಲಾಲ, ಲೆಫ್ಟಿನೆಂಟ್ ಕರ್ನಲ್ ಸಿ. ವಿವೇಕ್ ಮುತ್ತಣ್ಣ, ಕ್ಯಾಪ್ಟನ್ ಬಲದೇವ್ ಸಿಂಗ್, ಮಹೇಂದ್ರ ಮನ್ನೋತ್, ಶ್ರೀಮತಿ ಜಿ.ವೈ ಪದ್ಮ ನಾಗರಾಜು, ಬೆಂಗಳೂರು ಯುನಿವರ್ಸಿಟಿಯ ಸಮಾಜಶಾಸ್ತ್ರ ವಿಭಾಗದ ಪ್ರೊ.ಸಮತಾ ಬಿ ದೇಶಮಾನೆ ಮತ್ತು ನೀಲಕಂಠ ಅಡಿಗ, ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
