
ಉದಯವಾಹಿನಿ,ಚಿಂಚೋಳಿ: ಕಲಬುರ್ಗಿ ಜಿಲ್ಲೆಯಾದ್ಯಂತ ಉದ್ದು,ಸೋಯಾಬಿನ್ ಬೆಳೆಗಳು ಹಾನಿಯಾಗಿದ್ದು ರೈತರಿಗೆ ಮದ್ಯಂತರ ಪರಿಹಾರ ಕೊಡುವಂತೆ ಕೃಷಿ ಇಲಾಖೆ ವತಿಯಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಜಿಲ್ಲೆಯ ಅಂದಾಜು 14000 ಸಾವಿರ ರೈತರಿಗೆ ಅನುಕೂಲವಾಗುತ್ತದೆ ಎಂದು ತಾಪಂ.ಆಡಳಿತಾಧಿಕಾರಿ ಹಾಗೂ ಕಲ್ಬುರ್ಗಿ ಜಿಲ್ಲೆಯ ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ ಹೇಳಿದರು. ಪಟ್ಟಣದ ಚಂದಾಪೂರ ತಾಪಂ.ಸಭಾಂಗಣದಲ್ಲಿ 2022-23ರ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ತಾಲ್ಲೂಕಿನಲ್ಲಿ ಬಿಎ,ಬಿಕಾಂ,ಎಂಎ,ಬಿಎಡ್,ಬಿಪಿಎಡ್,ಟಿ ಸಿಎಚ್,ವಿಧ್ಯಾಭ್ಯಾಸ ಮಾಡಿದ ವಿಧ್ಯಾರ್ಥಿಗಳ ಪಟ್ಟಿ ಸಿದ್ದಪಡಿಸಿಕೊಳ್ಳಿ ನಾನು ಜಿಲ್ಲಾ ಮಟ್ಟದ ಅಧಿಕಾರಿಗಳ ಜೋತೆ ಮಾತನಾಡಿ ಕೆಕೆಆರ್ ಡಿಬಿ ಅನುದಾನದಲ್ಲಿ ಒಳ್ಳೆಯ ಕೊಚೀಂಗ್ ಸೆಂಟರ್ ಚಿಂಚೋಳಿಯಲ್ಲಿಯೇ ಪ್ರಾರಂಭಿಸೋಣ ಆಗ ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಶಿಕ್ಷಕರ ಕೊರತೆ ಆಗುವುದಿಲ್ಲಾ ಎಂದು ಶಿಕ್ಷಣಾಧಿಕಾರಿ ಹಣಮಂತ ರಾಠೋಡಗೆ ಸೂಚಿಸಿದರು. 46 ಅಂಗನವಾಡಿ ಕೇಂದ್ರಗಳು ಡಿಎಮ್ಎಫ್ ಹಾಗೂ ಕೆಕೆಆರ್ ಡಿಬಿ ಅನುದಾನದಲ್ಲಿ ಕಟ್ಟಡ ನಿರ್ಮಿಸಲು ಜಿಲ್ಲಾ ಅಧಿಕಾರಿಗಳ ಮಾತನಾಡುತ್ತೇನೆ ಬಾಡಿಗೆ ಅಂಗನವಾಡಿ ಕೇಂದ್ರಗಳ ಪಟ್ಟಿ ತಯ್ಯಾರಿಸಿ ಕೊಡಿ ಎಂದು ಸಿಡಿಪಿಒಗೆ ಸೂಚಿಸಿದರು. ಸಿಡಿಪಿಒ ಯೋಜನಾಧಿಕಾರಿ ಗುರುಪ್ರಸಾದ ಮಾತನಾಡಿ ತಾಲ್ಲೂಕಿನಲ್ಲಿ 375ಅಂಗನವಾಡಿ ಕೇಂದ್ರಗಳಿದ್ದು 33 ಅಂಗನವಾಡಿ ಕೇಂದ್ರಗಳು ಬಾಡಿಗೆ ರೂಪದಲ್ಲಿವೆ,46 ಕೇಂದ್ರಗಳು ಸರ್ಕಾರಿಯ ಬೇರೆ ಕಟ್ಟಡಗಳಲ್ಲಿ ಇವೆ,22ಅಂಗನವಾಡಿ ಕೇಂದ್ರಗಳು ಕ್ರೀಯಾಯೋಜನೆ ಸಿದ್ದಪಡಿಸಿದ್ದು ಟೆಂಡರ್ ಹಂತದಲ್ಲಿವೆ,51ಮಕ್ಕಳು ಅಪೌಷ್ಟಿಕತೆವುಳ್ಳ ಮಕ್ಕಳಿದ್ದಾರೆ,1992ಫಲಾನುಭವಿಗಳು ಭಾಗ್ಯಲಕ್ಷ್ಮಿ ಯೋಜನೆ,ಗೃಹಲಕ್ಷ್ಮಿ ಯೋಜನೆಗೆ ತಾಲ್ಲೂಕಿನಿಂದ ಇಲ್ಲಿಯವರೆಗೆ 45441 ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು. ಕೃಷಿ ಸಹಾಯಕ ನಿರ್ದೇಶಕ ವೀರಶೇಟ್ಟಿ ರಾಠೋಡ್ ಮಾತನಾಡಿ ಜೂನ್ ಹಾಗೂ ಜುಲೈ ತಿಂಗಳಲ್ಲಿ ವಾಡಿಕೆಯಂತೆ 172ಪ್ರತಿಶತಃ ಹೆಚ್ಚು ಮಳೆಯಾಗಿದ್ದು,ಅಗಷ್ಟ್ ತಿಂಗಳಲ್ಲಿ ಕೇವಲ 20ಪ್ರತಿಶತಃ ಮಳೆಯಾಗಿ 8೦ಪ್ರತಿಶತಃ ಮಳೆ ಆಗಿರುವುದಿಲ್ಲಾ ಇದರಿಂದ ರೈತರ ಬೆಳೆಗಳು 6347ಹೇಕ್ಟರ್ ಅತಿವೃಷ್ಟಿಯಿಂದ ಬೆಳೆ ಹಾನಿ ಆಗಿದ್ದು,ಇದರಿಂದ ತಾಲ್ಲೂಕಾವನ್ನು ಬಲಗಾಲ ಘೋಷಣೆ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಪಂ ಇಓ ಶಂಕರ ರಾಠೋಡ್,ಟಿಹೆಚ್ಓ ಮಹ್ಮುದ್ ಗಫಾರ,ಬಿಇಓ ಹಣಮಂತ ರಾಠೋಡ್,ಜಾವೀದ್ ಪಟೇಲ,ಶಿವಶಂಕರಯ್ಯ ಸ್ವಾಮಿ,ಮುಖ್ಯಾಧಿಕಾರಿ ಕಾಶಿನಾಥ ಧನ್ನಿ,ಬಿಸಿಯೂಟ ಅಧಿಕಾರಿ ಜಯಪ್ಪ ಚಾಪಲ್,ತೋಟಗಾರಿಕೆ ರಾಜಕುಮಾರ,ಜನ್ನತಬಿ,ಸಿದ್ದರೂಢ,ನಟರಾ ಜ,ಅನೇಕ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
