
ಉದಯವಾಹಿನಿ, ಬೀದರ್ : ಸಮಾಜಕ್ಕಾಗಿ ಬದುಕುವುದರಲ್ಲಿ ಇರುವ ಸಂತೋಷ ಇನ್ನಾವುದರಲ್ಲು ಇಲ್ಲ ಎಂಬ ಮಾತನ್ನು ನಾವು ಕೇಳಿರುತ್ತೇವೆ ಈ ಮಾತು ಸತ್ಯ ಈ ನಿಟ್ಟಿನಲ್ಲಿ ಅರಿವು ಮೂಡಿಸುವುದಕ್ಕಾಗಿ ಸೂರ್ಯ ಫೌಂಡೇಶನ್ ಕಳೆದ ಇಪ್ಪತ್ತೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ ಎಂದು ಸೂರ್ಯ ಫೌಂಡೇಶನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಅನಂತ ಬಿರಾದಾರ ಅವರು ತಿಳಿಸಿದರು. ಬೀದರ ನಗರದ ಸರಸ್ವತಿ ಶಾಲೆಯ ಗಿರಿಜಾ ಸಭಾಭವನದಲ್ಲಿ ಸೂರ್ಯ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ಶೈಕ್ಷಣಿಕ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಿಸ್ವಾರ್ಥ ಸೇವಾ ಮಾನೋಭಾವನೆಯ ಜೊತೆಗೆ ಸಾಮಾಜಿಕ ಕಾಳಜಿಯನ್ನಿಟ್ಟುಕೊಂಡು ಸೂರ್ಯ ಫೌಂಡೇಶನ್ ವತಿಯಿಂದ ಶಿಕ್ಷಣ, ಸಂಸ್ಕಾರ, ಆರೋಗ್ಯ, ಸಾಮರಸ್ಯ, ಸ್ವಾವಲಂಬನೆ ಹೀಗೆ ಈ ಐದು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಸೇವೆ ಸಲ್ಲಿಸಲಾಗುತ್ತಿದೆ ಭಾರತ ದೇಶವು ಈಗ ಎಲ್ಲ ಕ್ಷೇತ್ರದಲ್ಲಿ ಸಾಧನೆಗೈಯುತ್ತಿದೆ ಚಂದ್ರಯಾನ ಯಶಸ್ವಿ, ಕೋವಿಡ್ ಲಸಿಕೆ ತಯಾರಿಸಿರುವುದು ಮತ್ತು ಆರ್ಥಿಕವಾಗಿಯು ಭಾರತ ದೇಶವು ಬೆಳೆಯುತ್ತಿದೆ ಇದು ಪ್ರತಿಯೊಬ್ಬ ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗಿದೆ ಬರುವ ದಿನಗಳಲ್ಲಿ ಎಲ್ಲರು ಪ್ರಜ್ಞಾವಂತಿಕೆಯಿಂದ ಬದುಕಿದರೆ ಭಾರತ ವಿಶ್ವಗುರು ಆಗುವುದರಲ್ಲಿ ಸಂದೇಹವೆ ಇಲ್ಲ.ಭಾರತದ ಪ್ರತಿಯೊಬ್ಬ ನಾಗರಿಕನು ತನ್ನ ದೈನಂದಿನ ಕಾರ್ಯದ ಜೊತೆಗೆ ಸಾಮಾಜಿಕ ಕಾರ್ಯದಲ್ಲಿಯು ತೊಡಗಿಸಿಕೊಳ್ಳಬೇಕು ಈ ದಿಶೆಯಲ್ಲಿ ಸೂರ್ಯ ಫೌಂಡೇಶನ್ ಮಕ್ಕಳಿಗೆ ಹಾಗೂ ಯುವ ಸಮೂಹಕ್ಕೆ ಉತ್ತಮ ಸಂಸ್ಕಾರ ನೀಡುವ ಮೂಲಕ ಸಮಾಜದ ಬಗ್ಗೆ ಕಾಳಜಿ ವಹಿಸುವ ನಿಟ್ಟಿನಲ್ಲಿ ಸಿದ್ದಗೊಳಿಸುತ್ತಿದೆ ಎಂದು ಅನಂತ ಬಿರಾದಾರ ಅವರು ಅಭಿಪ್ರಾಯಪಟ್ಟರು.
ಸೂರ್ಯ ಫೌಂಡೇಶನ್ ಸಂಯೋಜಕರಾದ ಗುರುನಾಥ ರಾಜಗೀರಾ ಮಾತನಾಡಿ ನಾವು ನಮಗಾಗಿ ಬದುಕುವುದಕ್ಕಿಂತ ಸಮಾಜಕ್ಕಾಗಿ ಬದುಕಿದಾಗ ಸಮಾಜ ನಮ್ಮನ್ನು ಸದಾ ಗೌರವಿಸುತ್ತದೆ ಮತ್ತು ಸ್ಮರಿಸುತ್ತದೆ ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗು ಸಮಾಜದ ಬಗ್ಗೆ ಕಾಳಜಿ ಇರಬೇಕು ಮಕ್ಕಳಿಗೆ ಬಾಲ್ಯದಿಂದಲೆ ಒಳ್ಳೆಯ ಸಂಸ್ಕಾರ ನೀಡಿದರೆ ಸಮಾಜದ ಮೇಲಿನ ಕಾಳಜಿ ಮತ್ತು ಸೇವಾ ಮನೋಭಾವನೆಯನ್ನು ರೂಢಿಸಿಕೊಳ್ಳಲು ಪ್ರೋತ್ಸಾಹ ನೀಡುವುದಂತಾಗುತ್ತದೆ ಈ ನಿಟ್ಟಿನಲ್ಲಿ ಸೂರ್ಯ ಫೌಂಡೇಶನ್ ಪದ್ಮಶ್ರೀ ಜಯಪ್ರಕಾಶ್ ಅಗ್ರವಾಲ ಅವರ ಮಾರ್ಗದರ್ಶನದಲ್ಲಿ ದೇಶದ ಹದಿನೆಂಟು ರಾಜ್ಯಗಳ ಸೂಮಾರು ಐನೂರಕ್ಕು ಹೆಚ್ಚು ಹಳ್ಳಿಗಳಲ್ಲಿ ಸೇವಾ ಚಟುವಟಿಕೆ ಕಾರ್ಯ ನಡೆಯುತ್ತಿವೆ ಈ ನಿಟ್ಟಿನಲ್ಲಿ ಫೌಂಡೇಶನ್ ಉಪಾಧ್ಯಕ್ಷರಾದ ಅನಂತ ಬಿರಾದರ ಅವರ ನೇತೃತ್ವದಲ್ಲಿ ಬೀದರ ಜಿಲ್ಲೆಯಾದ್ಯಂತ ಸೂಮಾರು ಐವತ್ತು ಹಳ್ಳಿಗಳಲ್ಲಿ ವಿವಿಧ ರೀತಿಯ ಸೇವಾ ಚಟುವಟಿಕೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ವಿನೋದ ಪಾಟೀಲ, ಲೋಕೆಶ ಮೊಳಕೆರೆ, ಈಶ್ವರ ರುಮ್ಮಾ ಸೇರಿದಂತೆ ಫೌಂಡೇಶನ್ ಶಿಕ್ಷಕಿಯರಿದ್ದರು.
