
ಉದಯವಾಹಿನಿ ಸಿಂಧನೂರು: ಬಿಜೆಪಿ ಸರ್ಕಾರ ಮಾಜಿ ಸಿಎಂ ಬೊಮ್ಮಾಯಿ ತಮ್ಮ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನು ಮಾಡಿದೆ ಬರೀ ಸುಳ್ಳು ಹೇಳುವುದರಲ್ಲಿ ಬಿಜೆಪಿ ನಾಯಕರು ನಂಬರ್ ಒನ್ ಸ್ಥಾನದಲ್ಲಿದ್ದಾರೆಂದು ಟಾಂಗ್ ಕೊಟ್ಟರು .ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಸಿಂಧನೂರು ಘಟಕ ರಾಯಚೂರು ವಿಭಾಗದ ವತಿಯಿಂದ ಕಲ್ಯಾಣ ರಥ ಲೋಕಾರ್ಪಣೆ ಕಾರ್ಯಕ್ರಮವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟನೆ ಮಾಡಿದರು ನಂತರ ಮಾತನಾಡಿದ ಅವರು ಸುಮಾರು 01 ಕೋಟಿ 73 ಲಕ್ಷರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು ಈ ವೋಲ್ವೋ ಮೆಲ್ಟಿ ಆಕ್ಸಲ್ ಬಿಎಸ್ ವಿ ಐ-9600 ಸ್ಲೀಪರ್ ಇದ್ದು ಉಲ್ಲಾಸದಿಂದ ಪ್ರಯಾಣ ಮಾಡುಬಹುದು. ಈಗಾಗಲೇ ಮಾನ್ಯ ಮುಖ್ಯಮಂತ್ರಿ ಗಳಿಗೆ ಮನವಿ ಮಾಡಿದ್ದೇನೆ ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶವಾಗಿದ್ದು ಈ ಕಲ್ಯಾಣ ಭಾಗಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಹಿಂದೆ ಬಿಜೆಪಿ ಸರ್ಕಾರ ಮಾಜಿ ಸಿಎಂ ಬೊಮ್ಮಾಯಿ ಅಭಿವೃದ್ಧಿ ಕಾರ್ಯಕ್ರಮಗಳ.ಯೋಜನೆಗಳು ಜನರಿಗೆ ತಲುಪಿಸುವಂತ ಕೆಲಸ ಎಂದಿಗೂ ಮಾಡಿಲ್ಲ ಈಗ ನಮ್ಮ ಸರ್ಕಾರದ ಏನು ನೈತಿಕತೆ ಇದೆ ಬಿಜೆಪಿ ನಾಯಕರ ವಿರುದ್ಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹಂಪನಗೌಡ ಬಾದರ್ಲಿ ಅವರು ಸರ್ಕಾರದಿಂದ ಪ್ರಥಮವಾಗಿ ವೋಲ್ವೋ ಮೆಲ್ಟಿ ಆಕ್ಸಲ್ ಚಾಲನೆ ಮತ್ತು ಪ್ರಾರಂಭ ಯಾಗಿದ್ದು. ಗುಲ್ಬರ್ಗ 132 ಸ್ಥಾನ ಹಿಂದುಳಿದ 689 ಜಿಲ್ಲೆಯ ಸೇರಿದಂತೆ ಸಿಂಧನೂರು ಪ್ರಾರಂಭ ವಾಗಿದೆ.ಸಾರಿಗೆ ಇಲಾಖೆ ದೊಡ್ಡ ಇಲಾಖೆ ಪ್ರತಿ ನಿತ್ಯ ಕೊಟ್ಯಾಂತರ ಜನರು ಪ್ರಯಾಣ ಮಾಡುತ್ತಾರೆ
ಜನ ಸಾಮಾನ್ಯರಿಗೆ ಬಹಳಷ್ಟು ಅನುಕೂಲವಾಗಿದೆ ಎಂದರು.
ಸರ್ಕಾರ 100 ದಿನಗಳನ್ನು ಪೂರೈಸಿದ ನಾನು ಶಾಸಕನಾಗಿ ನನ್ನ ಅವಧಿಯಲ್ಲಿ ಎರಡು ವೋಲ್ವೋ ಬಸ್ ಉದ್ಘಾಟನೆ 02 ಪ್ರೌಢ ಶಾಲೆಗಳ ಉದ್ಘಾಟನೆ ಮತ್ತು 02 ಏತ ನೀರಾವರಿ ಹಾಗೂ ಪ್ರತಿಯೊಂದು ಇಲಾಖೆಯ ಶಿಕ್ಷಣ ಆರೋಗ್ಯ ಸಾರಿಗೆ ಇಲಾಖೆಗಳು ಅಭಿವೃದ್ಧಿ ಪಡಿಸಲು ಅನುದಾನ ಬಿಡುಗಡೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಮಸ್ಕಿ ಶಾಸಕ ಆರ್ ಬಸನಗೌಡ ತುರ್ವಿಹಾಳ ಶರಣಗೌಡ ಪಾಟೀಲ್ ಬಯ್ಯಾಪುರ ಎಂ ರಾಚಪ್ಪ ಕೆ ಎ.ಎಸ್ ವ್ಯವಸ್ಥಾಪಕ. ಚಂದ್ರಶೇಖರ್ ಎಂ ಎಸ್ ರಾಯಚೂರು ವಿಭಾಗ ತಾಲ್ಲೂಕು ತಹಶೀಲ್ದಾರ್ ಅರುಣ್ ಕುಮಾರ್ ಹೆಚ್ ದೇಸಾಯಿ ಮಂಜುನಾಥ್ ಗುಂಡೂರು ಪೌರಾಯುಕ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.
