
ಉದಯವಾಹಿನಿ ರಾಮನಗರ: ಸೋಮವಾರ ಬೆಳ್ಳಂ ಬೆಳಗ್ಗೆ ಸರ್ಕಾರಿ ಬಾಲಕಿಯರ ಕಾಲೇಜು ಮುಂಭಾಗ ಯುವತಿಯೋರ್ವಳಿಗೆ ಚಾಕುವಿನಿಂದದ ಯುವಕ ಇರಿದಯ ನಂತರ ಯುವತಿಯನ್ನು ಕಿಡ್ನಾಪ್ ಮಾಡಿ ಸಿನಿಮಿಯ ಶೈಲಿಯಲ್ಲಿ ಪರಾರಿಯಾಗಿರುವ ಘಟನೆ ರಾಮನಗರದ ಬಿಇಓ ಕಾಲೇಜು ಪಕ್ಕದಲ್ಲಿರುವ ಬಾಲಕೀಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಳಿ ನಡೆದಿದೆ. ಸೋಮವಾರ ಬೆಳಿಗ್ಗೆ 9 ಗಂಟೆಗೆ ಕಾಲೇಜಿಗೆ ಬಂದ ಯುವತಿಗೆ ಯುವಕನೋರ್ವ ಚಾಕು ಹಿರಿದು ನಂತರ ಆಕೆಯನ್ನು ಇನ್ನೋವಾ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿದ್ದಾನೆ. ಚಾಕು ಹಿರಿತಕ್ಕೆ ಒಳಗಾದ ಯುವತಿ ಸಂಜನಾ(16) ಎನ್ನಲಾಗಿದ್ದು ಈಕೆ ಪ್ರಥಮ ಪಿಯುಸಿ ಓದುತ್ತಿದ್ದಾಳೆ. ಈಕೆಯು ಕನಕಪುರ ಮೂಲದ ದಾಳಿಂಬ ಗ್ರಾಮದ ಯುವತಿಯಾಗಿದ್ದು ಸಂಬಂಧಿಕರ ಮನೆಯಲ್ಲಿ ರಾಮನಗರದಲ್ಲಿ ಕಾಲೇಜು ಶಿಕ್ಷಣ ಪಡೆಯುತ್ತಿದ್ದಳು ಎನ್ನಲಾಗಿದೆ.ಬೆಳ್ಳಂ ಬೆಳಗ್ಗೆ ಘಟನೆ ನಡೆದಿರುವುದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಅದರಲ್ಲಿಯೂ ಜನನಿಭೀಡ ಪ್ರದೇಶದಲ್ಲಿನ ಕಾಲೇಜಿನ ಸಮೀಪದಲ್ಲಿ ಇಂತಹ ದುರ್ಘಟನೆ ನಡೆದಿರುವುದು ಪೋಷಕರಲ್ಲಿ ಆತಂಕವನ್ನು ಉಂಟು ಮಾಡಿದೆ.ಘಟನೆ ನಡೆದ ತಕ್ಷಣ ಸ್ಥಳದಲ್ಲಿದ್ದ ಕೆಲವರು ಕಾರಿಗೆ ಕಲ್ಲು ಹೊಡೆದರು ಪ್ರಯೋಜನವಾಗಿಲ್ಲ. ತಕ್ಷಣ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದು ಪೊಲೀಸರು ಸಹ ಕಿಡ್ನಾಪ್ ಮಾಡಿದ ಕಾರಿನ ಮಾಹಿತಿ ಪಡೆದು ಹುಡುಕಾಟ ನಡೆಸುತ್ತಿದ್ದಾರೆ ಕಿಡ್ನಾಪ್ ಮಾಡಿದ ಯುವಕನನ್ನು ಕಾರು ಸಮೇತ ಹಿಡಿಯುವಲ್ಲಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದು ತೀವ್ರವಾಗಿ ಗಾಯಗೊಂಡಿರುವ ಯುವತಿ ಸಂಜನಾ ಅವರನ್ನು ರಾಮನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಿಡ್ನಾಪ್ ಮಾಡಿದ ಯುವಕ ಚೇತನ್ ಎಂದು ಗುರುತಿಸಲಾಗಿದ್ದು ಆತನನ್ನು ಕಾರು ಸಮೇತ ವಶಕ್ಕೆ ಪಡೆದಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
