
ಉದಯವಾಹಿನಿ ,ನವದೆಹಲಿ: ಭಾರತವನ್ನು “ಆತ್ಮನಿರ್ಭರ್” ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹೆಜ್ಜೆ ಇಟ್ಟಿದೆ ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ
ದೇಶದ ಎಲ್ಲಾ ದೇಶೀಯ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಯಾಗಬೇಕಾಗಿದೆ. ಆಗ ಮಾತ್ರ ಭಾರತ ಸ್ವಾವಲಂಭನೆಯಾಗಲು ಸಾಧ್ಯ ಎಂದು ಹೇಳಿದ್ದಾರೆ.
ಜೈವಿಕ ಇಂಧನ ಎಥೆನಾಲ್‌ನಲ್ಲಿ ಚಲಿಸುವ ಟೊಯೊಟಾ ಇನ್ನೋವಾ ಆವೃತ್ತಿ ಅನಾವರಣ ಮಾಡಿ ಮಾತನಾಡಿದ ಅವರು ಜೈವಿಕ ಇಂಧನ, ಪೆಟ್ರೋಲಿಯಂ ಆಮದಿಗೆ ಸಂಬಂಧಿಸಿದ ವೆಚ್ಚ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪರ್ಯಾಯ ಇಂಧನ ಚಾಲಿತ ಮತ್ತು ಹಸಿರು ವಾಹನಗಳನ್ನು ತಯಾರಿಸಲು ಕಾರು ತಯಾರಕರನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ತಿಳಿಸಿದ್ದಾರೆ.
ಪೆಟ್ರೋಲಿಯಂಗೆ ಪ್ರಸ್ತುತ ಆಮದು ವೆಚ್ಚ ೧೬ ಲಕ್ಷ ಕೋಟಿ ರೂ. ಆಗುತ್ತಿದೆ. ಇದನ್ನು ಕಡಿಮೆ ಮಾಡಲು ಹಸಿರು ಇಂಧನ ಪ್ರೋತ್ಸಾಹಿಸಲು ಒತ್ತು ನೀಡಲಾಗಿದೆ ಎಂದು ಹೇಳಿದ್ದಾರೆ.
ಪರ್ಯಾಯ ಇಂಧನಗಳನ್ನು ಬಳಸುವ ವಾಹನಗಳನ್ನು ವಿನ್ಯಾಸಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ಕಾರು ತಯಾರಕರನ್ನು ಪ್ರೋತ್ಸಾಹಿಸಲಾಗುತ್ತಿದೆ. ಈ ಮಾದರಿ ಹೆಚ್ಚು ಪರಿಸರ ಸ್ನೇಹಿಯಾಗಿದೆ ಮತ್ತು ಹೀಗಾಗಿ, ಸಣ್ಣ ಇಂಗಾಲದ ಹೆಜ್ಜೆಗುರುತನ್ನು ಹೊಂದಿದೆ. ಕಳೆದ ವರ್ಷ, ಅವರು ಟೊಯೊಟಾ ಮಿರೈ ಇಗಿ ಅನ್ನು ಪರಿಚಯಿಸಿದರು, ಇದು ಸಂಪೂರ್ಣವಾಗಿ ಹೈಡ್ರೋಜನ್-ಉತ್ಪಾದಿತ ವಿದ್ಯುಚ್ಛಕ್ತಿಯಿಂದ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.
