ಉದಯವಾಹಿನಿ, ಕುಶಾಲನಗರ: ಇದೆ ಆಗಸ್ಟ್ 21 ರಂದು ಸಕಾ೯ರಿ ಬಸ್ ಡಿಕ್ಕಿಯಾಗಿ ಹಾನಿಗೊಳಗಾಗಿದ್ದ
ಜನರ ತಿಮ್ಮಯ್ಯ ಪ್ರತಿಮೆಯನ್ನು ದುರಸ್ತಿಗಾಗಿ ಮೈಸೂರಿಗೆ ರವಾನೆ.
ಬಸ್ ಡಿಕ್ಕಿ ಯ ನಂತರ 50 ವಷ೯ ಪರಂಪರೆಯುಳ್ಳ ವೀರಸೇನಾನಿ ಪ್ರತಿಮೆಯನ್ನು ಮಡಿಕೇರಿಯ ತಿಮ್ಮಯ್ಯ ಮ್ಯೂಸಿಯಂ ಆವರಣದಲ್ಲಿಡಲಾಗಿತ್ತು
ಆದರೆ ಇದೀಗ ಪ್ರತಿಮೆಗೆ ಆದ ಹಾನಿಯನ್ನು ಸರಿಪಡಿಸಿ, ಸೂಕ್ತ ರೀತಿಯಲ್ಲಿ ದುರಸ್ಥಿಪಡಿಸುವ ನಿಟ್ಟಿನಲ್ಲಿ ಪ್ರತಿಮೆಯನ್ನು ಮೈಸೂರಿಗೆ ಸಾಗಾಣೆ ಮಾಡಲಾಗುತ್ತಿದೆ
ಪ್ರತಿಮೆ ಸ್ಥಾಪಿಸಿದ್ದ ಹಿರಿಯರಾದ ಎಂ.ಸಿ.ನಾಣಯ್ಯ ಸಲಹೆ ಮೇರೆಗೆ ಇದೇ ಪ್ರತಿಮೆಯನ್ನು ದುರಸ್ಥಿಪಡಿಸಲು ಕ್ರಮ ಕೈಗೊಳ್ಳಲಾಗಿದೆ
ಶಾಸಕರಾದ ಡಾ.ಮಂಥರ್ ಗೌಡ, ಎ.ಎಸ್.ಪೊನ್ನಣ್ಣ, ಜಿಲ್ಲಾಧಿಕಾರಿ ವೆಂಕಟರಾಜು ಅವರ ಪ್ರಯತ್ನದ ಫಲವಾಗಿ ಪ್ರತಿಮೆಗೆ ಶೀಘ್ರ ದುರಸ್ಥಿಭಾಗ್ಯ
ದೊರಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಕೂಡ ಪ್ರತಿಮೆಯನ್ನು ಶೀಘ್ರ ಮರುಪ್ರತಿಷ್ಟಾಪನೆ ಮಾಡುವಂತೆ ಸೂಚಿಸಿದ್ದರು.
