ಉದಯವಾಹಿನಿ, ದಿಂಡಿಗಲ್ : ಪದೇ ಪದೇ ವಿವಾದಾತ್ಮಕ ಹೇಳಿಕೆ ನೀಡಿ ಸದಾ ವಿವಾದ ಮೈಮೇಲೆ ಹಾಕಿಕೊಳ್ಳುತ್ತಾ ಇರುವ
ಬಹುಭಾಷಾ ನಟ ಪ್ರಕಾಶ್ ರಾಜ್ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬರುತ್ತಿದೆ.
ವಿಲಪಟ್ಟಿ ಪಂಚಾಯತ್ ಅಡಿಯಲ್ಲಿ, ಕೊಡೈಕೆನಾಲ್, ದಿಂಡುಗಲ್ ಜಿಲ್ಲೆ, ತಮಿಳುನಾಡು ಕೊಡೈಕೆನಲ್ ವಲಯ ಉಪ ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್ ನಟರಾದ ಪ್ರಕಾಶ್ ರಾಜ್ ಮತ್ತು ಬಾಬಿ ಸಿನ್ಹಾ ಅವರಿಗೆ ಬಂಗಲೆ ನಿರ್ಮಿಸಲು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದಕ್ಕಾಗಿ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ನಟರಾದ ಪ್ರಕಾಶ್ ರಾಜ್ ಮತ್ತು ಬಾಬಿ ಸಿನ್ಹಾ ಅವರು ತಮ್ಮ ಬಂಗಲೆಗಳನ್ನು ನಿರ್ಮಿಸಲು ಪೇತುಪರೈ ಮತ್ತು ಭಾರತಿಪುರಂ ಅಣ್ಣಾನಗರ ಬಳಿಯ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿದ್ದಾರೆ ಎಂದು ರೈತ ಕೂಡ ಆಗಿರುವ ಪೇತುಪರೈ ಗ್ರಾಮದ ಅಧ್ಯಕ್ಷ ಕೆ.ವಿ.ಮಹೇಂದ್ರನ್ ಆರೋಪಿಸಿದ್ದಾರೆ.
