ಉದಯವಾಹಿನಿ ದೇವದುರ್ಗ : ರಾಜಕೀಯ ಪಕ್ಷಗಳು ಚುನಾವಣಾ ಪೂರ್ವದಲ್ಲಿ ಮತದಾರರಿಗೆ ನೀಡಿದ ಭರವಸೆಗಳು ಜಾರಿಗೊಳ್ಳಬೇಕು. ಅದೇ ರೀತಿ ರಾಜ್ಯ ಸರಕಾರ ಕೂಡ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿರುವದು ಸ್ವಾಗತಾರ್ಹ. ಆದರೆ ಯೋಜನೆಗಳ ಜಾರಿಯಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದು ಶಾಸಕಿ ಕರೆಮ್ಮ ಗೋಪಾಲಕೃಷ್ಣ ನಾಯಕ ತಿಳಿಸಿದರು.
 ಅವರು ಪಟ್ಟಣದ ಬಿ.ಎಚ್.ಕಲ್ಯಾಣಮಂಟಪದಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತ, ಪುರಸಭೆ,ಸ್ತ್ರೀಶಕ್ತಿ ಸಂಘಗಳ ಒಕ್ಕೂಟ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬುಧವಾರ ಆಯೋಜಿಸಿದ್ದ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡುತ್ತ, ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಯ ಮೂಲ ಉದ್ದೇಶ  ಸದುಪಯೋಗವಾಗಬೇಕು ಎಂದರು.
ತಾಲೂಕಿನಲ್ಲಿ ಈಗಾಗಲೇ  ಶೇ.80ರಷ್ಟು ಮಹಿಳೆಯರು(ಮನೆ ಯಜಮಾನಿಯರು) ನೊಂದಣಿ ಮಾಡಿಸಿದ್ದಾರೆ. ಮುಂದುವರೆದು ಶೇ.100ರಷ್ಟು ಫಲಾನುಭವಿಗಳಿಗೆ ಸರಕಾರದ ನೆರವು ದೊರಕಿಸಿಕೊಡಬೇಕು.
ಪಂಚರತ್ನ ಕಾರ್ಯಕ್ರಮದಲ್ಲೂ ಕೂಡ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ರಾಜ್ಯದ ಮಹಿಳೆಯರಿಗೆ, ರೈತರಿಗೆ ಹಲವಾರು ಕಾರ್ಯಕ್ರಮಗಳನ್ನು ಪ್ರಕಟಿಸಿದ್ದರು.
ನಾನೂ ಕೂಡ ಕ್ಷೇತ್ರದಲ್ಲಿ ಗ್ರಾ.ಪಂವಾರು ಜನಸಂಪರ್ಕ ಸಭೆಗಳ ಮೂಲಕ ಮೂಲಸೌಕರ್ಯಗಳನ್ನು ಕಲ್ಪಿಸಲು ಕಾರ್ಯಕ್ರಮಗಳನ್ನು ರೂಪಿಸಿರುವೆ.ಕ್ಷೇತ್ರದ ಮತದಾರರು ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ಸಂಪರ್ಕಿಸಬಹುದಾಗಿದ್ದು,ಸದಾ ಕಾಲ ನಿಮ್ಮೊಂದಿಗೆ ಸೇವೆ ಸಲ್ಲಿಸಲು ಸಿದ್ದ ಎಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು.
ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮಲ್ಲನಗೌಡ ಪಾಟೀಲ್ ಗುಂಡಗುರ್ತಿ ಮಾತನಾಡಿ,ರಾಜ್ಯ ಸರಕಾರ ಅಧಿಕಾರಕ್ಕೆ ಬರುವ ಮುಂಚೆ ನೀಡಿದ ಗ್ಯಾರಂಟಿ ಯೋಜನೆಗಳನ್ನು ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ.ಶಿವುಕುಮಾರ ನೇತೃತ್ವದ ಸರಕಾರ ಈಗಾಗಲೇ ಸಾಕಾರಗೊಳಿಸಿ ಕೊಟ್ಟ ಮಾತನ್ನು ಉಳಿಸಿಕೊಂಡಿದೆ.ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಏನಾದರೂ ಒಂದು ಜನುಪಯೋಗಿ ಯೋಜನೆ ಜಾರಿ ತಂದಿರುವ ಇತಿಹಾಸವಿದೆ.ಬಡವರ,ರೈತರ,ಮಹಿಳೆಯರು ಒಳಗೊಂಡಂತೆ ಜಾತ್ಯಾತೀತ ಮತ್ತು ಪಕ್ಷ ಬೇಧಗಳಿಲ್ಲದೆ ಅನೇಕ ಆರ್ಥಿಕ ಜನಪರ ಯೋಜನೆಗಳ ಮೂಲಕ ನೆರವು ನೀಡುತ್ತಾ ಬಂದಿದೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಚನ್ನಮಲ್ಲಪ್ಪ ಘಂಟಿ,ತಾ.ಪಂ ಇಓ ರಾಮರೆಡ್ಡಿ ಪಾಟೀಲ್,ಪುರಸಭೆ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ್ ಬಕ್ರಿ,ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಜೀಜ್,ಜೆಡಿಎಸ್ ಮುಖಂಡರಾದ ಶರಣಪ್ಪ ಬಳೆ,ದಾವುದಸಾಬ್ ಆವಂಟಿ,ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ತಾಲೂಕು ಸಮಿತಿ ಅಧ್ಯಕ್ಷೆ ಶರಣಮ್ಮ ಹಾಗೂ ಪುರಸಭೆ ಸದಸ್ಯರು,ಇತರೆ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು,
ಪುರಸಭೆ ಮುಖ್ಯಧಿಕಾರಿ ಕೆ.ಹಂಪಯ್ಯ,  ಶಿಶುಅಭಿವೃಧ್ಧಿ ಯೋಜನಧಿಕಾರಿ ವೆಂಕಟಪ್ಪ, ಶಿಕ್ಷಕಿ ನಾಗರತ್ನ  ಪಾಟೀಲ್ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!