ಉದಯವಾಹಿನಿ ಕುಶಾಲನಗರ: ಭಾವೈಕ್ಯತೆಯ ಪ್ರತೀಕ ಓಣಂ ಹಬ್ಬವನ್ನು ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಮಲಯಾಳಿ ಭಾಷಿಕರು ಸಡಗರ ಮತ್ತು ಸಂಭ್ರಮದಿಂದ ಆಚರಿಸಿದರು ಮನೆಯ ಮುಂಭಾಗದ ಅಂಗಳದಲ್ಲಿ ಹೂವಿನ ರಂಗೋಲಿ  (ಪೋಕಳಂ) ಮಧ್ಯೆ ಬೆಳಗುವ ಹಣತೆ ಸುಣ್ಣ ಬಣ್ಣ ಬಳಿದು ಸಿಂಗರಿಸಿದ ಮನೆ ಅಡುಗೆ ಮನೆಯಲ್ಲಿ ಘಮ್ನಿನೆಸುವ ಭಕ್ಷ್ಯ ಭೋಜನ ಸಾಂಪ್ರದಾಯಿಕ ಉಡುಗೆ ಧರಿಸಿದ ಮಹಿಳೆಯರ ಹೊಸ ಹುರುಪು ಇವು ಓಣಂ ಹಬ್ಬದ ದಿನ ಕಂಡುಬಂದ ವಿಶೇಷತೆಗಳು. ಓಣಂ ಹಬ್ಬದ ಅಂಗವಾಗಿ ಕೊಡಗಿನಲ್ಲಿ ವಾಸಿಸುವ ಮಳಿಯಾಳಿ ಕೇರಳಿ ಯನ್ನರು ಹೊಸ ಉಡುಗೆ ತೊಡುಗೆ ಧರಿಸಿ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದು ಪೂಜ್ಯ ಸಲ್ಲಿಸಿದರು ಪರಸ್ಪರ ಸಿಹಿ ವಿತರಿಸುವ ಮೂಲಕ ಓಣಂ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಸಿಂಹ ಮಾಸದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ ಕೇಳಿಯರಿಗೆ ಈ ಸಿಂಹ ಮಾಸ ಚಿನ್ನದ ಮಾಸವಾಗಿದ್ದು ಸಿಂಹ ಮಾಸದಲ್ಲಿ ಹಸ್ತ ನಕ್ಷತ್ರದಿಂದ 10 ದಿನಗಳ ಕಾಲ ಹಬ್ಬ ಆಚರಿಸಲಾಗುತ್ತದೆ.
ಹಾಗೆ ಉದ್ಯಮಿ ಭಾಸ್ಕರ್ ಅವರು ಓಣಂ ಹಬ್ಬದ ವಿಶೇಷ ಖಾಧ್ಯ ಮತ್ತು ತಿನಿಸುಗಳ ಮಿಶ್ರಣ ಓಣಂಖಾಧ್ಯವನ್ನು ತಮ್ಮ ಹೋಟೆಲ್ ನ ಪ್ರವಾಸಿಗರಿಗೂ ಬಡಿಸಿ ಅತಿಥ್ಯ ಮೆರೆದರು.
ಕೇರಳದ ಈ ನಾಡ ಹಬ್ಬವನ್ನು ಕೇರಳದಲ್ಲಿ ಮಾತ್ರವಲ್ಲದೆ ಕೇರಳಿಗರು ಎಲ್ಲೆಲ್ಲಿ ನೆಲೆಸಿದ್ದಾರೋ ಅಲ್ಲೆಲ್ಲ ಆಚರಿಸಲಾಗುತ್ತದೆ ಜಾತಿ ಮತ ಬಡವ ಬಲ್ಲಿದ ಎಂಬ ಬೇದಲ್ಲದೆ
ಮಲಯಾಳಿ ಬಾಷಿಗರಾದ ಹಿಂದು ಮುಸ್ಲಿಂ  ಮತ್ತು ಕ್ರೈಸ್ತರು ಕೇರಳದ ಹೊನ್ನಿನ ಓಣಂ ಹಬ್ಬವನ್ನು ಸಂಭ್ರಮ ಮತ್ತು ಸಡಗರದಿಂದ ಕುಶಾಲನಗರ ತಾಲೂಕು ವ್ಯಾಪ್ತಿಯ ಗುಡ್ಡೆ ಹೊಸೂರು. 7ನೇ ಹೊಸ ಕೋಟೆ. ಹಾರಂಗಿ. ಚಿಕ್ಕತೂರು. ಕೂಡಿಗೆ. ಸಿದ್ದಲಿಂಗಪುರ. ಅರಸಿನಕುಪ್ಪೆ. ನಂಜರಾಯ ಪಟ್ಟಣ ಇತರ ಕಡೆಗಳಲ್ಲಿ ಆಚರಿಸಿದರು

Leave a Reply

Your email address will not be published. Required fields are marked *

error: Content is protected !!