ಉದಯವಾಹಿನಿ ಮಸ್ಕಿ: ಬಡ ಜನರ ಕೂಲಿ ಕಾರ್ಮಿಕರ ಹಸಿವನ್ನು ನಿಗಿಸಲು ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನಿ ಆರಂಭಿಸಬೇಕೆ0ದು ಭಾರತ ವಿದ್ಯಾರ್ಥಿ ಪೆಡರೇಷನ್ ಮಸ್ಕಿ ತಾಲೂಕ ಘಟಕ ಅಧ್ಯಕ್ಷ ಬಸವಂತ ಹೀರೆಕಡಬೂರು ಅವರು ಹೇಳಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಂದಿರಾ ಕ್ಯಾಂಟಿನಿ ಆರಂಭಿಸುವAತೆ ಈಗಾಗಲೇ ಪಟ್ಟಣದಲ್ಲಿ ಪ್ರತಿಭಟಿಸಿ ಶಾಸಕ ಆರ್.ಬಸನಗೌಡ ತರುವಿಹಾಳ ಹಾಗೂ ತಹಶೀಲ್ದಾರ ಅರಮನೆ ಸುಧಾ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈವೆರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರದೇ ಇರುವುದು ಬೇಸರ ತಂದಿದೆ. ಪಟ್ಟಣ ತಾಲೂಕ ಕೇಂದ್ರವಾಗಿರುವುದರಿ0ದ ಸುತ್ತಮುತ್ತಲಿನ ಹಳ್ಳಿಗಳಿಂದ ಕೂಲಿ ಕಾರ್ಮಿಕರು, ರೈತರು, ಹಮಾಲರು, ವಿದ್ಯಾರ್ಥಿಗಳು, ಸಾರ್ವಜನಿಕರು ಪಟ್ಟಣಕ್ಕೆ ಪ್ರತಿನಿತ್ಯ ಬರುತ್ತಾರೆ, ಹೊಟೇಲ್‌ಗಳಲ್ಲಿ ಊಟ, ಉಪಹಾರ ಸೇವಿಸಿದರೆ ಹೆಚ್ಚಿನ ದುಡ್ಡು ಕೊಡಬೇಕಾಗುತ್ತದೆ, ಇಂದಿರಾ ಕ್ಯಾಂಟಿನಿ ಆರಂಭವಾದರೆ ಕಡಿಮೆ ದುಡ್ಡಿನಲ್ಲಿ ಗುಣಮಟ್ಟದ ಊಟ ದೊರೆಯುತ್ತದೆ. ಹೀಗಾಗಿ ಶಾಸಕರು ಅಧಿಕಾರಿಗಳು ಸರ್ಕಾರದ ಮೇಲೆ ಒತ್ತಡ ಹೇರಿ ಇಂದಿರಾ ಕ್ಯಾಂಟಿನಿ ಆರಂಭಿಸಬೇಕು ಇಲ್ಲದೇ ಹೋದರೆ ಎಸ್‌ಎಫ್‌ಐ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಎಸ್‌ಎಫ್‌ಐ ಸಂಘಟನೆ ಉಪಾಧ್ಯಕ್ಷ ರಮೇಶ ಉಸ್ಕಿಹಾಳ, ಪರಶುರಾಮ, ನಾಗರಾಜ, ದೇವರಾಜ, ಪ್ರಮೋದ, ಭಗೀರಥ, ಪ್ರಕಾಶ, ಮೌನೇಶ ಸೇರಿದಂತೆ ಇನ್ನಿತರಿದ್ದರು.

Leave a Reply

Your email address will not be published. Required fields are marked *

error: Content is protected !!