ಉದಯವಾಹಿನಿ ಸಿಂಧನೂರು : ರಾಜ್ಯದಲ್ಲಿರುವ ಮಹಿಳೆಯರು ಆರ್ಥಿಕ ಸಬಲೀಕರಣ ಉದ್ದೇಶದಿಂದ ಕುಟುಂಬದ ಯಜಮಾನಿಗೆ ಮಹಿಳೆಗೆ ಪ್ರತಿ ತಿಂಗಳ ತಲಾ 2, ಸಾವಿರಗಳನ್ನು ನೀಡಲಾಗುತ್ತದೆ ಎಂದು ಕಳೆದ ಚುನಾವಣೆಯಲ್ಲಿ ಮಾನ್ಯಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು  ಈ ನಾಡಿನ ಜನರಿಗೆ ಏನು ಭರವಸೆ ನೀಡಿದರು ಐದು ಗ್ಯಾರಂಟಿ ಬಗ್ಗೆ ನುಡಿದಂತೆ ನಡೆದಿದ್ದು ಸರ್ಕಾರ ಯಾವುದಾದರೂ ಇದ್ದರೆ ಅದು ನಮ್ಮ ಸರಕಾರ ನಮ್ಮ ಸಿದ್ದರಾಮಯ್ಯನವರ ಸರ್ಕಾರ ಎದೆ ತಟ್ಟಿಕೊಂಡು ಹೇಳಿದರು
ನಗರದ ಟೌನ್ ಹಾಲ್ ನಲ್ಲಿ “ಗೃಹ ಲಕ್ಷ್ಮಿ” ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಹಂಪನಗೌಡ ಬಾದರ್ಲಿ ಅವರು “ನಾನು ಯಜಮಾನಿ” ನಾನು ಗ್ರಹ ಲಕ್ಷ್ಮಿ”
ಯೋಜನೆ ಮಹಿಳೆಯರ ಸಬಲೀಕರಣದತ್ತ ಮತ್ತೊಂದು ದಿಕ್ಕು ಹೆಜ್ಜೆ” ಗ್ರಹಲಕ್ಷ್ಮಿ ಯೋಜನೆ ಅಡಿಯಲ್ಲಿ ಬರುವ ಲಾಭಗಳನ್ನು ಫಲಾನುಭವಿಗಳಾದ ಮಹಿಳೆಯರು
ಸರಿಯಾದ ರೀತಿಯಲ್ಲಿ ಪಡೆದುಕೊಳ್ಳಬೇಕೆಂದು ಶಾಸಕ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ಕರ್ನಾಟಕದ ಗ್ರಹಲಕ್ಷ್ಮೀ ಯೋಜನೆಯಡಿಯಲ್ಲಿ ಒಟ್ಟು 1.33.61.915 ರಷ್ಟು ಫಲಾನುಭವಿಗಳು ಇದ್ದು ಇದರಲ್ಲಿ ನೊಂದಣಿಯಾದ ಫಲಾನುಭವಿಗಳ ಒಟ್ಟು 1.08.04.725 ರಷ್ಟು ಲಾಭವನ್ನು ಪಡೆಯುತ್ತಿದ್ದು
ಸಿಂಧನೂರು ತಾಲ್ಲೂಕಿನಲ್ಲಿ ಸಹ 78.424 ರಷ್ಟು ಫಲಾನುಭವಿಗಳು ಇದ್ದು ಇದರಲ್ಲಿ ನೊಂದಣಿಯಾದ ಫಲಾನುಭವಿಗಳ 67.630 ಲಾಭವನ್ನು ಪಡೆಯುತ್ತಿದ್ದು ದಿ.19-7-2023 ರಂದು ಅರ್ಜಿಗಳು ಗ್ರಾಮ -1 ಕರ್ನಾಟಕ -1 ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹಾಗೂ ಪ್ರಜಾಪ್ರತಿನಿಧಿಗಳ ನೋಂದಾಯಿಸುವ ಪ್ರಕ್ರಿಯೆಯನ್ನು ಹೊಂದಿದ್ದು. ಇನ್ನು ಅರ್ಜಿಗಳನ್ನು 10794  ಫಲಾನುಭವಿಗಳು ನೊಂದಾಯಿಸುವ ಪ್ರಕ್ರಿಯ ಚಾಲ್ತಿಯಲ್ಲಿ ಇರುತ್ತದೆ  ಮತ್ತು ನೇರ ನಗದು ವರ್ಗಾವಣೆ ಬ್ಯಾಂಕ್ ಖಾತೆ ಪಾಸ್ ಬುಕ್ ಗೆ ನಿಮ್ಮ ಆಧಾರ್ ಕಾರ್ಡ ಜೋಡಣೆ ಆಗಿರಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಮ್ ದೊಡ್ಡ ಬಸವರಾಜ ಅವರು ಗ್ರಹ ಲಕ್ಷ್ಮಿ ಯೋಜನೆಯ ಎಲ್ಲಾ ಮಹಿಳೆಯರು ಸದುಪಯೋಗ ಪಡೆದು ಕೊಳ್ಳಬೇಕೆಂದು ಹೇಳಿದರು.
ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಿ ದೇವಿ ಭಂಗಿ ರಾಜ್ಯ ಮಹಿಳಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷ ಶ್ರೀದೇವಿ ಶ್ರೀನಿವಾಸ್ ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ಅರುಣ್ ಕುಮಾರ್ ಎಚ್ ದೇಸಾಯಿ ಮಾತನಾಡಿದರು ಹಾಗೂ ಪೌರಾಯುಕ್ತರು ಮಂಜುನಾಥ್ ಗುಂಡೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಮತ್ತು ನಗರ ಸಭೆ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಅತಿ ಹೆಚ್ಚು ಗೃಹಲಕ್ಷ್ಮೀ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *

error: Content is protected !!