ಉದಯವಾಹಿನಿ ಬೆಂಗಳೂರು: ಬೆಂಗಳೂರುದಕ್ಷಿಣ ತಾಲೂಕು 17 ಗ್ರಾಮ ಪಂಚಾಯಿತಿಗಳಿಗೂ ಭೇಟಿ ನೀಡಿ ಯಶಂತಪುರ ವಿಧಾನಸಭಾ ಕ್ಷೇತ್ರಕ್ಕೆ ಫಲಾನುಭವಿಗಳಿಗೆ ಚಾಲನೆ ನೀಡಿದರು. ಮಾಜಿ ಸಚಿವರು ಹಾಲಿ ಶಾಸಕರಾದ ಎಸ್ ಟಿ ಸೋಮಶೇಖರಗಳು ಗೌಡರು ಹತ್ತಾರು ಹಿತ ನುಡಿಗಳನ್ನು ಮಾತನಾಡಿ ಈ ಕಾರ್ಯಕ್ರಮ ಸರ್ಕಾರದ ಕಾರ್ಯಕ್ರಮವಾಗಿದ್ದು ವಿವಿಧ ಯೋಜನೆ ಅಡಿಯಲ್ಲಿ ಗೃಹಲಕ್ಷ್ಮಿ ಭಾಗ್ಯವ ಅತಿ ಶ್ರೇಷ್ಠವಾದ ಭಾಗ್ಯವೆಂದು ನುಡಿದರು ಯಾವುದೇ ತಾರತಮ್ಯವಿಲ್ಲದೆ ನನ್ನ ಕ್ಷೇತ್ರಕ್ಕೆ ನನ್ನ ಮತದಾರ ಬಂಧುಗಳಿಗೆ ಒಳ್ಳೆಯ ಕೆಲಸವನ್ನು ಮಾಡಬೇಕಾಗಿದೆ ಹಾಗೂ ಈ ದಿನದಂದು ಸುಮಾರು 20. ಸಾವಿರ ಮಹಿಳೆಯರಿಗೆ ನೇರವಾಗಿ ಬ್ಯಾಂಕ್ ಖಾತೆಗೆ ರೂ.2000 ಜಮಾ ವಾಗಿರುತ್ತದೆ 17 ಗ್ರಾಮ ಪಂಚಾಯತಿ ಅಲ್ಲಲ್ಲಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಗೃಹಲಕ್ಷ್ಮಿ ಚಾಲನೆ ನೀಡಿದರು. ಹಾಗೂ ಚುಂಚನಕಟ್ಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಪಂಕಜ ಚಂದ್ರಶೇಖರ್ ಉಪಾಧ್ಯಕ್ಷರಾದ ರಾಮಾಂಜನೇಯ ಗೌಡ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಪುರುಷೋತ್ತಮ್. ಸದಸ್ಯರಾದ ಸುಕುಮಾರ್. ಮಾಜಿ ಅಧ್ಯಕ್ಷರು ತೆಂಗು ಮತ್ತು ನಾರು ಮಂಡಳಿ ಶ್ರೀ ಪ್ರಸನ್ನ ರುದ್ರ ರವರು ಮಾಜಿ ಅಧ್ಯಕ್ಷರಾದ ಗಂಗಾ ರೇವಣ್ಣ. ಮಾಜಿ ಅಧ್ಯಕ್ಷರಾದ ಶಿವಣ್ಣನವರು. ರೇಣುಕಾ ಕುಮಾರ್ ಹೇಮಾವತಿ ನಾರಾಯಣಪ್ಪ ಬಸವರಾಜ್ ಮಾಜಿ ಅಧ್ಯಕ್ಷರಾದ ಪ್ರಭಾವತಿ ಮಾಜಿ ಅಧ್ಯಕ್ಷರಾದ ಕಾಂತಮ್ಮನವರು ಎಲ್ಲಾ ಸದಸ್ಯರುಗಳು ಎಲ್ಲಾ ಕಾರ್ಯಕರ್ತರು ಗ್ರಾಮ ಪಂಚಾಯಿತಿಯ ಎಲ್ಲಾ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಗೃಹಲಕ್ಷ್ಮಿ ಭಾಗ್ಯಕ್ಕೆ ಹೆಚ್ಚು ಮೆರಗು ತಂದುಕೊಟ್ಟು ಸರ್ಕಾರದಿಂದ ಬರುವ ಎಲ್ಲಾ ಭಾಗ್ಯಗಳಿಗೂ ಜನ ಸಾಮಾನ್ಯರಿಗೆ ಸಿಗಲೆಂದು ಹಾರೈಸುತ್ತೇವೆ.
