
ಉದಯವಾಹಿನಿ ಅಥಣಿ : ಕಾಂಗ್ರೆಸ್ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮವನ್ನು ಪಟ್ಟಣದ ಗಚ್ಚಿನಮಠದ ಆವರಣದಲ್ಲಿ ಶಾಸಕ ಲಕ್ಷ್ಮಣ ಸವದಿ ಪುತ್ರ, ಯುವ ಮುಖಂಡ ಚಿದಾನಂದ ಸವದಿ ಹಾಗೂ ಪುರಸಭೆ ಸದಸ್ಯರು ಸೇರಿ ಉದ್ಘಾಟನೆ ನೆರವೇರಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಚಿದಾನಂದ ಸವದಿ ಕಾಂಗ್ರೆಸ್ ಸರ್ಕಾರದ ಈ ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಶಕ್ತಿ ನೀಡಿದೆ. ಅಲ್ಲದೆ ಆರ್ಥಿಕ ಸಂಕಷ್ಟದಲ್ಲಿದ್ದ ಮಹಿಳೆಯರಿಗೆ ಈ ಗೃಹ ಲಕ್ಷ್ಮಿ ಯೋಜನೆ ಸಹಾಯವಾಗಲಿದೆ. ಸ್ವಾವಲಂಬಿ ಬದುಕಿಗೆ ಈ ಗೃಹ ಲಕ್ಷ್ಮಿ ಯೋಜನೆ ಇಂದು ರಕ್ಷಾ ಬಂಧನ ದಿನ ಸಾಕ್ಷಿಯಾಗಿದೆ ಎಂದು ತಿಳಿಸಿದ್ರು. ಕಾರ್ಯಕ್ರಮದಲ್ಲಿ ಉಪ ತಹಶಿಲ್ದಾರ ಎಮ್ ವಿ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಅಶೋಕ ಕಾಂಬಳೆ ಹಾಗೂ ತಾಲೂಕಾಡಳಿತದ ಇತರ ಅಧಿಕಾರಿಗಳು ವರ್ಚುವಲ್ ಮೂಲಕ ವೀಕ್ಷಣೆ ಮಾಡಿದರು.
