ಉದಯವಾಹಿನಿ ಕೊಪ್ಪಳ: ತಾಲೂಕಿನ ಬೂದಗುಂಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಮಾಡಲು ಮತ್ತು ಶಾಲೆಗೆ ಬರಬೇಕಾದ ಹೆಚ್ಚುವರಿ ಜಾಗವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತ್ವರಿತವಾಗಿ ಬೂದುಗುಂಪ ಪ್ರಾಥಮಿಕ ಶಾಲೆಯ ಹೆಸರಿಗೆ ಮಾಡಿಕೊಡಲು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಫೋನ್ ಮುಖಾಂತರ ಸಂಪರ್ಕಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು,ಶಾಲೆಗೆ ಮೂರು ಕೊಠಡಿಗಳ ಅವಶ್ಯಕತೆ ಇರುವುದನ್ನು ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗೋವಿಂದರಾಜ್ ಬೂದಗುಂಪ ಕೆ ಆರ್ ಪಿ ಪಿ ಮುಖಂಡರಾದ ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಆದಪ್ಪ ಕುಂಬಾರ್ ಯುವ ಮುಖಂಡ ಹುಲಗಪ್ಪ ಬೋವಿ, ಶಾಸಕ ಜನಾರ್ದನ ರೆಡ್ಡಿ ಅವರಿಗೆ ಮನವರಿಕೆ ಮಾಡುವ ಮೂಲಕ ಮನವಿ ಮಾಡಿದರು, ಕೂಡಲೇ ಪ್ರತಿಕ್ರಿಯಿಸಿದ ಶಾಸಕ ಜನಾಾರ್ದನ ರೆಡ್ಡಿ ಅವರು ಇನ್ನು ಕೆಲವೇ ದಿನಗಳಲ್ಲಿ ಬೂದಗುಂಪ ಪ್ರಾಥಮಿಕ ಶಾಲೆಗೆ ಅಭಿವೃದ್ಧಿ ಮಾಡಲು ಅವಶ್ಯಕತೆ ಇರುವ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು, ಅಲ್ಲದೆ ಮೊದಲ ಹಂತದಲ್ಲಿಯೇ ಬೂದಗುಂಪ ಪ್ರಾಥಮಿಕ ಶಾಲೆಗೆ ಮೂರು ಶಾಲಾ ಕೊಠಡಿಗಳನ್ನು ನೀಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಮಾರುತಿ ನಾಯಕ್ ಸದಸ್ಯರಾದ ಕರಿಯಪ್ಪ ಬಾವಿಕಟ್ಟಿ, ರಂಗನಾಥ್ ಇಳಿಗೇರ್, ಕವಿತಾ ಹಿರೇಮಠ್, ಮಲ್ಲಪ್ಪ ಗೋಸಲದೊಡ್ಡಿ, ಜಗದೀಶ್ ಮಂಗಳೂರು, ರಾಮಪ್ಪ ದೊಡ್ಡಮನಿ, ಮುದುಕೇಶ್ ಅಡಪದ, ವೆಂಕಟೇಶ್ ಕಮ್ಮಾರ್, ಕರಿಯಪ್ಪ ತಾವರಗೇರಾ, ಈ ಸಮಯದಲ್ಲಿ ಹಾಜರಿದ್ದರು

Leave a Reply

Your email address will not be published. Required fields are marked *

error: Content is protected !!