ಉದಯವಾಹಿನಿ ಮುದ್ದೇಬಿಹಾಳ ; ನಮ್ಮ ಕಾಂಗ್ರೆಸ್ ಸರಕಾರ ನುಡಿದಂತೆ ಮಾಡಿ ತೋರಿಸಿದೆ ಚುನಾವಣೆಯಲ್ಲಿ ನೀಡಿದ ಪ್ರಮುಖ ಬೇಡಿಕೆಗಳನ್ನು ಈಡೇರಿಸಿದೆ ಎಂದು ಶಾಸಕ ಸಿ.ಎಸ್ ನಾಡಗೌಡ ಅಪ್ಪಾಜಿ ಹೇಳಿದರು ಅವರು ಬುಧುವಾರ ಮುದ್ದೇಬಿಹಾಳ ಪಟ್ಟಣದ ಮದರಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೂಳ್ಳಲಾಗಿದ್ದ ಸರಕಾರದ ಗೃಹ ಲಕ್ಷ್ಮೀ ಯೋಜನೆಗೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು ಬಡ ಜನರಿಗೆ ಬಡ ರೈತರಿಗೆ ನಮ್ಮ ಯೋಜನೆ ಅನುಕೂಲ ಆಗದಿದ್ದರೆ ಅದು ಪ್ರಜಾಪ್ರಭುತ್ವವಲ್ಲಾ ದೇಶದ ಕಟ್ಟ ಕಡೆಯ ವ್ಯಕ್ತಿಗೆ ಬಡವರಿಗೆ ಅವರು ಯಾವ ಜಾತಿ ಸಮಾಜವೆಂದು ಕೇಳದೆ ಸರ್ಕಾರದ ಯೋಜನೆ ತಲುಪಿದಾಗ ದೇಶ ಬಲಿಷ್ಠವಾಗುತ್ತದೆ , ರಕ್ಷಾ ಬಂಧನ ಹಬ್ಬದ ದಿನದಂದು ರಾಜ್ಯ ಕಾಂಗ್ರೆಸ್ ಸರಕಾರ ದೇಶದಲ್ಲಿ ಪ್ರಥಮಬಾರಿಗೆ ಬಹುದೊಡ್ಡ ಯೋಜನೆಯನ್ನು ಜಾರಿಗೆ ಮಾಡಿದೆ ಇದು ಯಾವ ರಾಜ್ಯದಲ್ಲಿ ಇಲ್ಲ ,ಮಹಿಳೆಯರ ಖಾತೆಗೆ ನೇರವಾಗಿ ಪ್ರತಿ ತಿಂಗಳು ಎರಡು ಸಾವಿರ ರೂ ಜಮೆಯಾಗುತ್ತದೆ ಇನ್ಮೂಂದೆ ಮಹಿಳೆಯರು ಕೇವಲ ಗೃಹಲಕ್ಷ್ಮೀಯರು ಮಾತ್ರವಲ್ಲ ನೀವು ಭಾಗ್ಯ ಲಕ್ಷ್ಮೀಯರು ಎಂದರು. ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಉಳುವವನೇ ಭೂಮಿ ಒಡೆಯ ಜಾರಿಗೆ ಬಂತು, ಗಂಗಾ ಕಲ್ಯಾಣ ಯೋಜನೆ, ಗೃಹಜ್ಯೋತಿಯಿಂದ ಉಚಿತ ವಿದ್ಯುತ್, ಗೃಹ ಲಕ್ಷ್ಮೀ ಯೋಜನೆಯಿಂದ ಮಹಿಳೆಯರಿಗೆ 2 ಸಾವಿರ ರೂ ಹೀಗೆ ಅನೇಕ ಜನಪರ ಯೋಜನೆ ಬಂದದ್ದು ಕಾಂಗ್ರೆಸ್ ಸರ್ಕಾರದಲ್ಲಿ ಇಂತಹ ಯೋಜನೆಯಿಂದ ಬಡವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಇದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು. ಕಾರ್ಯಕ್ರಮ ಉದ್ದೇಶಿಸಿ ಕಾಂಗ್ರೆಸ್ ಮಹಿಳಾ ಮುಖಂಡೆ‌ ಗಿರಿಜಾ ಕಡಿ ಮಾತನಾಡಿದರು, ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 6 ಜನ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಹೂ ಮಾಲೆ ಹಾಕಿ ಗೌರವಿಸಲಾಯಿತು, ಈ ವೇಳೆ ತಹಶಿಲ್ದಾರ ಸಿ.ಎ ಗುಡದಿನ್ನಿ, ತಾಪಂ‌ ಎಡಿ ಖೋಬಾಸಿಂಗ್ ಜಾಧವ,ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಸಿಡಿಪಿಓ ಮಂಜುನಾಥ ಹೊಸಮನಿ, ತಾಲೂಕ ವೈದ್ಯಾಧಿಕಾರಿ ಸತೀಶ್ ತಿವಾರಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ,ಸಮಾಜ ಕಲ್ಯಾಣ ಅಧಿಕಾರಿ ಉಮೇಶ ಲಮಾಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ನಿಕಟಪೂರ್ವ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಶಹಜಾದಬಿ ಹುಣಚಗಿ, ವಿರೇಶ ಹಡಲಗೇರಿ, ಶಿವು ಶಿವಪುರ,ಹಣಮಂತ ಭೋವಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಶೋಭಾ ಶೆಳ್ಳಗಿ, ಶರಣು ಸಜ್ಜನ ,ಅಂಬರೀಶ್ ಗೂಳಿ, ಎಂ.ಬಿ ನಾವದಗಿ, ಹಾಗೂ ತಾಲೂಕಿನ ಅನೇಕ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು
ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆ ಚಾಲನೆ ನೀಡಿದ ಮುಖ್ಯಮಂತ್ರಿಗಳ ಕಾರ್ಯಕ್ರಮದ‌ ನೇರ ಪ್ರಸಾರವನ್ನು ಮಹಿಳೆಯರು ವೀಕ್ಷಣೆ ಮಾಡಿದರು. ಕಾರ್ಯಕ್ರಮ ನಿರೂಪಣೆ ಶಿಕ್ಷಕ ಸಿದ್ದನಗೌಡ ಬಿಜ್ಜೂರ ವಂದನಾರ್ಪಣೆ ವೈ ಹೆಚ್ ವಿಜಯಕರ ಮಾಡಿದರು.

ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳು 30.573 ಹಾಗೂ ತಾಳಿಕೋಟೆ ತಾಲೂಕಿನಲ್ಲಿ 29.116 ಒಟ್ಟು 59.689 ಜನ ಮಹಿಳೆಯರು ಫಲಾನುಭವಿಗಳಾಗಿದ್ದಾರೆ. 

ಇಂದು ಕೇಂದ್ರ ಬಿಜೆಪಿ ಸರಕಾರ ಗ್ಯಾಸ್ ಬೆಲೆ 200 ರೂ ಕಡಿಮೆ ಮಾಡಿದೆ ಕಾರಣ ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ ಬೆಲೆ ಏರಿಕೆ ವಿರುದ್ಧ ದೇಶದ ಜನರು ರೂಚ್ಚಿಗೆ ಎದ್ದಿದ್ದಾರೆ ಈಗ ಚುನಾವಣಾ ಹತ್ತಿರ ಬಂದ ಕಾರಣ ಗ್ಯಾಸ್ ಬೆಲೆ 200 ರೂ ಕಡಿಮೆ ಮಾಡಿದ್ದಾರೆ; ಅಪ್ಪಾಜಿ ನಾಡಗೌಡ ( ಶಾಸಕರು)

Leave a Reply

Your email address will not be published. Required fields are marked *

error: Content is protected !!