ಉದಯವಾಹಿನಿ, ಮುಂಬೈ: ಗದರ್ ೨ ಸಿನಿಮಾ ಯಶಸ್ವಿಯಾಗಿ ಒಂದು ವಾರವೂ ಸಹ ಆಗಿರಲಿಲ್ಲ ಬಾರ್ಡರ್ ೨ ಸಿನಿಮಾದ ಕುರಿತು ಸುದ್ದಿ ಬಂದಿತ್ತು. ಆದರೆ ಮರುದಿನವೇ ನಿರ್ದೇಶಕ ಜೆ.ಪಿ. ದತ್ತಾ ಅಂತಹ ಯಾವುದೇ ಯೋಜನೆ ಇಲ್ಲ ಎಂದು ದತ್ತಾ ಹೇಳಿದ್ದರು. ಬಾರ್ಡರ್ ೨ ಮಾಡಲಾಗುತ್ತಿದೆ ಎಂಬ ವದಂತಿ ಸುಳ್ಳು ಎಂದಿದ್ದರು.
ಆದರೆ ಇದೀಗ ಬಾರ್ಡರ್ ಚಿತ್ರದ ಹೀರೋ ಸನ್ನಿ ಡಿಯೋಲ್ ಚಿತ್ರದ ಬಗ್ಗೆ ಅಪ್ ಡೇಟ್ ನೀಡಿದ್ದಾರೆ. ಸನ್ನಿ ಡಿಯೋಲ್ ಸಧ್ಯಕ್ಕೆ ತನ್ನ ಹೊಸ ಚಿತ್ರ ಗದರ್ ೨ ನ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಬಾರ್ಡರ್ ೨ ಚಿತ್ರ ನಿರ್ಮಾಣದ ಬಗ್ಗೆ ಪ್ರತಿಕ್ರಿಯಿಸಿರುವ ಸನ್ನಿ ಸಂದರ್ಶನವೊಂದರಲ್ಲಿ ಹೇಳಿದ್ದು ಎಲ್ಲವೂ ಸರಿಯಾಗಿ ನಡೆದಿದ್ದರೆ ೨೦೧೫ರಲ್ಲೇ ಬಾರ್ಡರ್ ೨ ಮಾಡಬೇಕಿತ್ತು. ಬಾರ್ಡರ್ ೨ ಈ ಮೊದಲೇ ನಿರ್ಮಾಣ ಮಾಡಲು ಯೋಜಿಸಲಾಗಿದ್ದು ಎಂದು ಸನ್ನಿ ಬಹಿರಂಗಪಡಿಸಿದರು, ಆದರೆ ನಂತರ ಅವರ ಚಿತ್ರಗಳು ಒಂದರ ನಂತರ ಒಂದರಂತೆ ವಿಫಲವಾದಾಗ ಅದನ್ನು ಸ್ಥಗಿತಗೊಳಿಸಲಾಯಿತು. ಈ ಸಿನಿಮಾವನ್ನು ಮೊದಲೇ ಮಾಡಬೇಕೆಂದಿದ್ದೆವು ೨೦೧೫ರಲ್ಲಿ ನನಗೆ ನೆನಪಿದೆ. ಆಗ ನನ್ನ ಚಿತ್ರಗಳು ಓಡುತ್ತಿರಲಿಲ್ಲ. ಆದ್ದರಿಂದ ಆತಂಕಕ್ಕೊಳಗಾಗಿ ಬಾರ್ಡರ್‌ನ ಮುಂದುವರಿದ ಭಾಗವನ್ನು ಮಾಡದಿರಲು ನಿರ್ಧರಿಸಲಾಯಿತು ಎಂದು ಸನ್ನಿ ಹೇಳಿದ್ದು, ಈಗ ಎಲ್ಲರೂ ಅದನ್ನು ಮಾಡಲು ಬಯಸುತ್ತಾರೆ, ಸದ್ಯಕ್ಕೆ ಬಾರ್ಡರ್ ೨ ಗಾಗಿ ಮಾತುಕತೆ ನಡೆಯುತ್ತಿದೆ ಎಂದು ಸನ್ನಿ ಗುಡ್ ನ್ಯೂಸ್ ನೀಡಿದ್ದಾರೆ. ಅಂದರೆ ಈ ಯೋಜನೆಯನ್ನು ಸಂಪೂರ್ಣವಾಗಿ ಕೈ ಬಿಡಲಾಗಿಲ್ಲ.
