ಉದಯವಾಹಿನಿ, ಶಹಾಪುರ : ರಾಜ್ಯದ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಗಳಲ್ಲಿ ಒಂದಾದ ಗೃಹಲಕ್ಷ್ಮಿ ಯ ಯೋಜನೆಯು ರಾಜ್ಯದಾದ್ಯಂತ ಚಾಲನೆ ನೀಡಲಾಯಿತು. ಗ್ರಾಮ ಪಂಚಾಯತ ಮಟ್ಟದಲ್ಲಿ ಕಾರ್ಯಕ್ರಮ ಮಾಡಿ ಗ್ರಾಮದ ಜನರಿಗೆ ಯೋಜನೆಯ ಲಾಭ ಪಡೆಯುವಂತೆ ತಿಳಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಆದರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸುನಂದಾ ರವರು ಕೆಲಸದ ಒತ್ತಡ ಇದ್ದಿದ್ದರಿಂದ ಕಾರ್ಯಕ್ರಮ ದ ಬಗ್ಗೆ ತಿಳಿಸಲು ಆಗಿಲ್ಲ.ಕಾರ್ಯಕ್ರಮ ದ ಭಾವಚಿತ್ರ ಕಳಿಸುತ್ತೆವೆ ಸುದ್ದಿ ಮಾಡಿ ಎನ್ನುತ್ತಾರೆ. ಗ್ರಾಮ ಪಂಚಾಯತ ನಲ್ಲಿ ಯಾವುದೇ ಸರ್ಕಾರದ ಕಾರ್ಯಕ್ರಮ ಗಳಿದ್ದರೆ ಸ್ಥಳಿಯ ಪತ್ರಕರ್ತರ ನ್ನ ಆಹ್ವಾನ ನೀಡದೆ ಬೆಜವ್ದಾರಿ ತೊರುತ್ತಾರೆ. ಪತ್ರಕರ್ತರೆ ಕರೆ ಮಾಡಿ ಕಾರ್ಯಕ್ರಮಕ್ಕೆ ಯಾಕೆ ಆಹ್ವಾನ ನೀಡಿಲ್ಲ ಎಂದಾಗ ನಮಗೆ ಎನೂ ಗೊತ್ತಾಗಿಲ್ಲ ಕೆಲಸದ ಒತ್ತಡದಲ್ಲಿ ಎಂದು ಉಢಾಫೆ ಉತ್ತರ ನೀಡುವುದು ಸಾಮಾನ್ಯ ಸಂಗತಿಯಾಗಿದೆ. ಜಿಲ್ಲಾಡಳಿತ ಇಂತಹ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕಟ್ಟು ನಿಟ್ಟಿನ ಸೂಕ್ತ ಕ್ರಮ ಜರುಗಿಸುವುದೆ ಕಾದು ನೋಡಬೇಕಿದೆ.

ಪತ್ರಕರ್ತರಿಗೆ ಆಹ್ವಾನ ನೀಡದ ಪಿಡಿಓ ಸರ್ಕಾರದ ಮಹತ್ವದ ಯೋಜನೆಗಳಲ್ಲೋಂದಾದ ಗೃಹಲಕ್ಷ್ಮಿ ಯೋಜೆನಯೂ ರಾಜ್ಯಾದ್ಯಂತ ಏಕಕಾಲದಲ್ಲಿ ಚಾಲನೆಯಾಗುತ್ತಿದ್ದರೂ ಪಿಡಿಓ ರವರು ಸ್ಥಳೀಯ ಪತ್ರಕರ್ತರನ್ನು ಆಹ್ವಾನ ನೀಡದೆ ನಿರ್ಲಕ್ಷ್ಯ ಧೋರಣೆ ತೋರಿದರು. ಒಂದು ಮೊಬೈಲ್ ಮೂಲಕ ಆಗಲಿ ಅಥವಾ ಆಹ್ವಾನ ಪತ್ರಿಕೆ ಕೂಡ ಸಹ ನೀಡಿಲ್ಲ. ಸರ್ಕಾರಿ ಕಾರ್ಯಕ್ರಮಕ್ಕೆ ಪತ್ರಕರ್ತರನ್ನೆ ಹೊರಗಿಟ್ಟಿದ್ದು ಶೋಚನೀಯ ಸಂಗತಿಯಾಗಿದೆ. ಸರ್ಕಾರಿ ಯೋಜನೆಗಳ ಮೂಲಕ ಜನರಿಗೆ ಅರಿವು ಮೂಡಿಸುವ ಈ ಅಧಿಕಾರಿಗಳು ಪತ್ರಕರ್ತರ ನ್ನ ದೂರವಿಟ್ಟಿದ್ದು ಕರ್ತವ್ಯ ಜವಾಬ್ದಾರಿ ಮರೆತಂತಾಗಿದೆ ಎಂದು ಎದ್ದು ಕಾಣಿಸುತ್ತದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕ ಪಂಚಾಯತ ಇಓ ರವರು ಗಮನ ಹರಿಸಬೇಕು. ಇಂತಹ ಬೇಜವಬ್ದಾರಿ ಪಿಡಿಓ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.

Leave a Reply

Your email address will not be published. Required fields are marked *

error: Content is protected !!