ಉದಯವಾಹಿನಿ, ಇರಾನ್: ಇರಾನ್ ತನ್ನ ಬದ್ದ ವೈರಿ ಇಸ್ರೇಲಿ ವೇಟ್‌ಲಿಫ್ಟರ್‌ಗೆ ಹಸ್ತಲಾಘವ ಮಾಡಿದ್ದಕ್ಕಾಗಿ ಇರಾನ್‌ನ ವೇಟ್‌ಲಿಫ್ಟರ್‌ಗೆ ಆ ದೇಶವು ಆಜೀವ ನಿಷೇಧ ಹೇರಿದೆ. ಪೋಲೆಂಡ್‌ನಲ್ಲಿ ನಡೆಯುತ್ತಿರುವ ವಿಶ್ವ ಮಾಸ್ಟರ್ಸ್ ಚಾಂಪಿಯನ್‌ಶಿಪ್‌ನಲ್ಲಿ ಈ ಘಟನೆ ನಡೆದಿದೆ.
ಇರಾನ್‌ನ ಮೊಸ್ತಫಾ ರಾಜೇಯ್ (೪೦) ಶನಿವಾರ ಪೋಲೆಂಡ್‌ನ ವೈಲಿಕ್ಜ್ಕಾದಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸಹ ಇಸ್ರೇಲಿ ವೇಟ್‌ಲಿಫ್ಟರ್ ಮ್ಯಾಕ್ಸಿಮ್ ಸ್ವಿರ್ಸ್ಕಿ ಅವರೊಂದಿಗೆ ಕೈ ಜೋಡಿಸಿದರು. ಶತ್ರು ಆಟಗಾರನಿಗೆ ಕೈ ಕುಲುಕಿದ ಕಾರಣಕ್ಕೆ ಇರಾನ್ ಸರ್ಕಾರ ತಮ್ಮ ದೇಶದ ಆಟಗಾರನಿಗೆ ಜೀವಮಾನ ನಿಷೇಧ ಹೇರಿದೆ.
ದೇಶದ ಯಾವುದೇ ಕ್ರೀಡೆಯಿಂದ ಮೊಸ್ತಫಾ ರಾಜೇಯ್‌ಗೆ ಜೀವಾವಧಿ ನಿಷೇಧ ಹೇರಲಾಗಿದೆ ಎಂದು ವೇಟ್‌ಲಿಫ್ಟಿಂಗ್ ಫೆಡರೇಶನ್ ತಿಳಿಸಿದೆ.
ಅಲ್ಲದೆ, ಸ್ಪರ್ಧೆಯ ನಿಯೋಗದ ಮುಖ್ಯಸ್ಥ ಹಮೀದ್ ಸಲೇಹಿನಿಯಾ ಅವರನ್ನು ಸಹ ತೆಗೆದುಹಾಕಲಾಯಿತು. ಇಸ್ರೇಲ್ ಅನ್ನು ಬದ್ಧ ವೈರಿ ಎಂದು ಪರಿಗಣಿಸಿರುವ ಇರಾನ್ ಆ ದೇಶದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದೆ. ಈ ಹಿನ್ನೆಲೆಯಲ್ಲಿ ಹೊಸ ನಿರ್ಧಾರ ಕೈಗೊಳ್ಳಲಾಗಿದೆ.
