ಉದಯವಾಹಿನಿ ದೇವದುರ್ಗ: ವಿಧಾನಸಭಾ ಕ್ಷೇತ್ರದಲ್ಲಿ ಬರುವ ಪ್ರತಿಯೊಂದು ಗ್ರಾಮ ಪಂಚಾಯತ್ ಮಟ್ಟದಲ್ಲಿ ಬರುವ ಗ್ರಾಮೀಣ ಪ್ರದೇಶದ ಹಳ್ಳಿಯ ಜನರಿಗೆ ಸರಕಾರಿ ಸೌಲಭ್ಯಗಳನ್ನು ಸರಿಯಾದ ಸಮಯಕ್ಕೆ ದೊರಕಿಸಿ ಕೊಡುವುದು,ಜನ ಪ್ರತಿನಿಧಿಗಳಾದ ನಮ್ಮ ಕರ್ತವ್ಯವಾಗಿದ್ದು ,ಇದರ ಭಾಗವಾಗಿ ತಾಲೂಕ ಆಡಳಿತ ಯಂತ್ರವನ್ನು ಗ್ರಾಮೀಣ ಪ್ರದೇಶದ ಭಾಗಗಳಿಗೆ ಕೊಂಡೊಯ್ದು ಪ್ರತಿವಾರ, ಪ್ರತಿಯೊಂದು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ ಬೇಟಿ ನೀಡಿ ರಸ್ತೆ,ಚರಂಡಿ,ಕುಡಿಯುವ ನೀರು, ವೈದ್ಯಕೀಯ ಸೇವೆ,ಶಾಲೆ, ಅಂಗನವಾಡಿ , ಸ್ಮಶಾನ,ಪಹಣಿ,
ಮಾಶಾಸನ,ಹದ್ದುಬಸ್ತು,ಹೀಗೆ ಗ್ರಾಮದ  ಹಾಲವಾರು ಮೂಲಭೂತ ಸೌಲಭ್ಯಗಳು ಮತ್ತು ಇನ್ನಿತರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹರಿಸಲು ಪ್ರಪ್ರಥಮ ವಾಗಿ ಜಾಲಹಳ್ಳಿ ಹೋಬಳಿಯ ಪಲಕನಮರಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಂದಲಿ ಗ್ರಾಮದಲ್ಲಿ ಜನ ಸಂಪರ್ಕ ಸಭೆಯನ್ನು ನಿಯೋಜನೆ ಮಾಡಲಾಗಿದೆ ಎಂದು ದೇವದುರ್ಗ ವಿಧಾನಸಭಾ ಕ್ಷೇತ್ರದ ಶಾಸಕಿ ಕರೇಮ್ಮ ಜಿ ನಾಯಕ  ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದರು…

Leave a Reply

Your email address will not be published. Required fields are marked *

error: Content is protected !!