ಉದಯವಾಹಿನಿ ದೇವದುರ್ಗ: ಪಟ್ಟಣದ ತಾಲೂಕ ವ್ಯವಸಾಯೋತ್ಪನ್ನ ಸಹಕಾರಿ ಮಾರಾಟ ಸಂಘದ ಅನುದಾನದ 33 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಐದು ಮಳಿಗೆಗಳು ಆರ್‍ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಗುರುವಾರ ಉದ್ಘಾಟಿಸಿದರು. ಬಳಿಕ ಮಾತನಾಡಿ, ಮಳಿಗೆಗಳಿಂದ ವ್ಯಾಪಾರ ವಹಿವಾಟು ಸೂಸೈಟಿಗೆ ಆದಾಯ ಕ್ರೋಡಿಕರಣ ಆಗಲಿದೆ ಎಂದು ಹೇಳಿದರು. ಹರಾಜ ಮೂಲಕ ಮಳಿಗೆಗಳು ಟೆಂಡರ್ ಮಾಡಲಾಗುತ್ತದೆ. ಈಗಾಗಲೇ 150ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಒಂದರೆಡು ದಿನದಲ್ಲಿ ಹರಾಜ ಪ್ರಕ್ರಿಯೆ ನಡೆಯಲಿದೆ. ಮಳಿಗೆಗಳಿಂದ ತಿಂಗಳಿಗೆ ಬರುವಂತ ಬಾಡಿಗೆ ಹಣ ಸದ್ಬಳಿಕೆ ಮಾಡಿಕೊಳ್ಳಬೇಕು. ಇತರೆ ಮಳಿಗೆಗಳು ಕಟ್ಟಿಸಿಲು ಆಡಳಿತ ಮಂಡಳಿ ನಿಗಾವಹಿಸಬೇಕು ಎಂದು ಹೇಳಿದರು. ವ್ಯಾಪಾರ ವಹಿವಾಟಕ್ಕೆ ಕಟ್ಟಿರುವಂತ ಮಳಿಗೆಗಳು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವ ಜವಬ್ದಾರಿ ಆಡಳಿತ ಮಂಡಳಿ ಮೇಲೆ ಹೆಚ್ಚಿದೆ. ಟಿಎಪಿಎಂಸಿ ಅಧ್ಯಕ್ಷ ಶರಣಗೌಡ ಕಮತಿಗಿ ಮಾತನಾಡಿ, ಮಳಿಗೆಗಳಿಂದ ಬರುವಂತ ಆದಾಯ ಮತ್ತಷ್ಟು ಅಭಿವೃದ್ಧಿ ಮಾಡುವ ಸಂಕಲ್ಪ ಹೊಂದಿವೆ. ಹಂತ ಹಂತವಾಗಿ ಮಳಿಗೆಗಳು ನಿರ್ಮಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದರು. ಒಂದು ಮಳಿಗೆ ಬಾಡಿಗೆ 10ಸಾವಿರ ರೂ. ದರ ನಿಗದಿ ಮಾಡಿದ್ದು, ಹರಾಜ ಮೂಲಕ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಅರ್ಜಿ ಸಲ್ಲಿಸಿದ ವ್ಯಾಪಾರಸ್ಥರು ಹರಾಜನಲ್ಲಿ ಪಾಲ್ಗೊಳ್ಳಲು 1ಲಕ್ಷ 5000ರೂ. ಮೊತ್ತ ಕಟ್ಟಬೇಕು. ಹೆಚ್ಚಿನ ಮಾಹಿತಿಗೆ ವ್ಯವಸ್ಥಾಪಕರನ್ನು ಸಂಪರ್ಕಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಶರಣಗೌಡ ಗೌರಂಪೇಟೆ, ಚನ್ನವೀರಯ್ಯಸ್ವಾಮಿ ಅರಕೇರಾ, ಬುಳ್ಳ ನಿಂಗಣ್ಣಗೌಡ, ಚಂದ್ರಶೇಖರ ಹೇರೂರು, ಸತೀಶ ಬಂಡೇಗುಡ್ಡ, ಗುಲಾಂ ಮಹಿಬೂಬು, ಮಲ್ಲಿಕಾರ್ಜನ ಪಾಟೀಲ್, ಲಿಂಗನಗೌಡ ಗಲಗ, ಸುರೇಶ ನಾಯಕ, ಪ್ರಕಾಶ ಪಾಟೀಲ್, ಮಲ್ಲನಗೌಡ ವಕೀಲ, ಬಸವರಾಜಪ್ಪ ಬಂಡೇಗುಡ್ಡ, ವ್ಯವಸ್ಥಾಪಕಿ ಸರಸ್ವತಿ ಸೇರಿ ಇತರರು ಇದ್ದರು.
