
ಉದಯವಾಹಿನಿ,ಚಿಂಚೋಳಿ: ಪಟ್ಟಣದ ಹಾರಕೂಡ ಕಲ್ಯಾಣ ಮಂಟಪದಲ್ಲಿ ಶಿಶು ಅಭಿವೃದ್ಧಿ ಕಲ್ಯಾಣ ಇಲಾಖೆ ಹಾಗೂ ಪುರಸಭೆ ಸಂಯುಕ್ತ ಆಶ್ರಯದಲ್ಲಿ ಮೈಸೂರಿನಲ್ಲಿ ರಾಜ್ಯ ಸರ್ಕಾರ ಮಹಾತ್ವಕಾಂಕ್ಷಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮವು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯನವರು ಉಧ್ಘಾಟಿಸಲ್ಲಿರುವ ಕಾರ್ಯಕ್ರಮವನ್ನು ನೇರ ಪ್ರಸಾರವನ್ನು ವಿಕ್ಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಸಿಡಿಪಿಒ ಗುರುಪ್ರಸಾದ ಕವಿತಾಳ,ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ,ಕಾಂಗ್ರೆಸ್ ಹಿರಿಯ ಮುಖಂಡರು ಜಿಲ್ಲಾ ವಕ್ತಾರರು ಸುಭಾಷ್ ರಾಠೋಡ್,ಆನಂದ ಟೈಗರ,ಲಕ್ಷ್ಮಣ ಆವುಂಟಿ,ಜಗನ್ನಾಥ ಕಟ್ಟಿ,ಶರಣುಪಾಟೀಲ ಮೋತಕಪಳ್ಳಿ,ಅಬ್ದುಲ್ ಬಾಷೀದ್,ಜಗನ್ನಾಥ ಗುತ್ತೇದಾರ,ನರಸಮ್ಮಾ ಆವುಂಟಿ,ಅಂಕೀತಾ,ಅನೇಕ ಮಹಿಳೆಯರು ಫಲಾನುಭವಿಗಳು ಇದ್ದರು.
ಕಲ್ಯಾಣ ರಾಜ್ಯ ಸ್ಥಾಪನೆಯಲ್ಲಿ ಗೃಹಲಕ್ಷ್ಮಿ ಕಾರ್ಯಕ್ರಮ ಒಂದು ಮಹತ್ವದ ಮೈಲಿಗಲ್ಲು,ಭಾರತದ ಆರ್ಥಿಕತೆಯ ಬೆನ್ನಲುಬು ನಾರಿಶಕ್ತಿ,ಮಹಿಳೆಯರಿಗೆ ಶಕ್ತಿ ತುಂಬುವ ಮೂಲಕ ಸದೃಢ ಸಮಾನತೆಯ ಸಮಾಜ ಕಟ್ಟುವ ಪ್ರಯತ್ನ ಕಾಂಗ್ರೆಸ್ ಪಕ್ಷ ಮಾಡುತ್ತಿದೆ :- ಸುಭಾಷ್ ರಾಠೋಡ್ ಕಾಂಗ್ರೆಸ್ ಹಿರಿಯ ಮುಖಂಡರು ಚಿಂಚೋಳಿ.
