ಉದಯವಾಹಿನಿ,ಶಿಡ್ಲಘಟ್ಟ: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಕಲೆಯನ್ನು ಹೊರಹಾಕಲು ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆ ಎಂದು ಸಂಪನ್ಮೂಲ ಅಧಿಕಾರಿ ಮಂಜುನಾಥ್ ತಿಳಿಸಿದರು. ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಪಂ ಆನೆಮಡಗು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಪಲಿಚೇರ್ಲು ಸಮೂಹ ಸಂಪನ್ಮೂಲ ಕೇಂದ್ರವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾವು ಬಾಲ್ಯದಲ್ಲಿ ಇದ್ದಂತಹ ಸಂದರ್ಭದಲ್ಲಿ ನಮ್ಮ ಶಿಕ್ಷಕರು ನಮ್ಮನ್ನು ಇಂತಹ ವೇದಿಕೆಗಳಿಗೆ ಕರೆದೊಯ್ದು, ನಮ್ಮಲ್ಲಿರುವ ಪ್ರತಿಭೆಯನ್ನು ಗುರ್ತಿಸಿ ನಮ್ಮನ್ನು ಸತ್ಪ್ರಜೆಗಳನ್ನಾಗಿ ಮಾಡುವಲ್ಲಿ ಯಶಸ್ವಿಯಾದರು. ಆ ನಿಟ್ಟಿನಲ್ಲಿ ಗುರುವಿನ ಮಾತುಗಳನ್ನು ಪಾಲಿಸುವುದರಿಂದ ಉತ್ತಮ ಪ್ರಜೆಗಳಾಗಿ ಮುಂದೊಂದು ದಿನ ನೀವು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಗಳನ್ನು ರೂಪಿಸಬಹುದು ಎಂದರು. ಇನ್ನೂ ಪ್ರತಿಭಾ ಕಾರಂಜಿಯಲ್ಲಿ ಸುಮಾರು 500 ಮಕ್ಕಳು ಭಾಗವಹಿಸಿದ್ದು, ಕೋಲಾಟ, ಜಾನಪದ ಗೀತೆ, ಛದ್ಮ ವೇಷ , ಚಿತ್ರಕಲೆ, ಸಂಸ್ಕೃತ ಪಟಣ, ಅರೇಬಿಕ್ ,ಕಥೆ ಹೇಳುವುದು ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ಭಾಗವಹಿಸಿದ್ದರು. ಇನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಥಮ,ದ್ವಿತೀಯ, ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನವಾಗಿ ಪ್ರೋತ್ಸಾಹದನವನ್ನು ದೊಡ್ಡತೇಕಹಳ್ಳಿ ಗ್ರಾಮದ ಮುಖಂಡ ಮಾರಪ್ಪ ವಿತರಿಸಿದರು.ಈ ಸಂದರ್ಭದಲ್ಲಿ ಸಿಆರ್ ಪಿ ವೆಂಕಟೇಶ್,ಪ್ರೌಢಶಾಲಾ ಮುಖ್ಯೋಪಾಧ್ಯಾಯ ಇಮ್ರಾನ್ ಖಾನ್,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ರಾಮಮೂರ್ತಿ, ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಮ್ಮ,ಉಪಾಧ್ಯಕ್ಷ ಡಿಸಿ ಮಂಜುನಾಥ್, ಗ್ರಾಪಂ ಸದಸ್ಯರಾದ ಮುರಳಿ,ಸಿಕೆ ಮಂಜುನಾಥ್,ಸಿ ವೆಂಕಟೇಶಪ್ಪ,ಎಎಲ್ ಮಂಜುನಾಥ್,ಕೆ ಬೈರಾರೆಡ್ಡಿ,ಮುನಿಶಾಮಿ,ಎಸ್ ಡಿ ಎಂಸಿ ಅಧ್ಯಕ್ಷ,ಸದಸ್ಯರು ಶಾಲಾ ಸಿಬ್ಬಂದಿ,ಆನೆಮಡಗು ಗ್ರಾಮದ ಹಳೆಯ ವಿದ್ಯಾರ್ಥಿಗಳು ಹಾಗೂ ವಿವಿಧ ಶಾಲೆಗಳ ಮುಖ್ಯೋಪಾದ್ಯಾಯರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.
