ಉದಯವಾಹಿನಿ, ಖರ್ಜೂರ : ಒಂದು ರುಚಿಕರ ಹಾಗೂ ಶಕ್ತಿವರ್ಧಕ ಆಹಾರ. ಇದರಲ್ಲಿ ಕಬ್ಬಿಣದ ಅಂಶ ಜಾಸ್ತಿ ಇರುತ್ತದೆ. ಇದು ರುಚಿಯಲ್ಲಿ ಸಿಹಿಯಾಗಿದ್ದು ಹಾಗೂ ಪುಷ್ಠಿಕರವಾದದ್ದು, ರಕ್ತಪಿತ್ತವನ್ನು ನಿವಾರಿಸುತ್ತದೆ. ಆಮಶಂಕೆ, ಅತಿಸಾರ, ನರಗಳ ದೌರ್ಬಲ್ಯ ನಿವಾರಣೆ, ರಕ್ತವೃದ್ಧಿಗೆ, ಮಕ್ಕಳಿಗೆ ಎಲ್ಲರಿಗೂ ಒಳ್ಳೆಯದು.
೧. ನರಗಳ ದೌರ್ಬಲ್ಯಕ್ಕೆ: ನರಗಳ ದೌರ್ಬಲ್ಯಕ್ಕಾಗಿ, ಖರ್ಜೂರದ ಬೀಜ ತೆಗೆದು ರಾತ್ರಿ ಹಾಲಿನಲ್ಲಿ ನೆನೆಹಾಕಿ. ಬೆಳಿಗ್ಗೆ ಅದೇ ಹಾಲಿನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿ ಹಾಗೂ ಸ್ವಲ್ಪ ಜೇನುತುಪ್ಪ ಸೇರಿಸಿ ಇದನ್ನು ಬೆಳಿಗ್ಗೆ ಹಾಗೂ ಸಂಜೆ ಊಟದ ನಂತರ ಒಂದು ಚಮಚದಷ್ಟ ಸೇವಿಸುತ್ತಾ ಬಂದರೆ, ನರಗಳ ದೌರ್ಬಲ್ಯ ನಿವಾರಣೆಯಾಗುವುದು. ಗರ್ಭಿಣಿಯರು ಇದನ್ನು ಸೇವಿಸುವುದರಿಂದ ಟಾನಿಕ್ ರೀತಿಯಲ್ಲಿ ಕೆಲಸ ಮಾಡುತ್ತದೆ. ರಕ್ತ ಕಡಿಮೆಯಾಗಿರುವವರಿಗೆ ರಕ್ತವೃದ್ಧಿಯಾಗಲು ಸಹಾಯವಾಗುತ್ತದೆ. ಕಡಿಮೆ ಬೆಳವಣಿಗೆ ಇರುವ ಮಕ್ಕಳಿಗೆ ಇದು ಉತ್ತಮವಾದ ಆಹಾರ.
೨. ಮಧುಮೇಹಿಗಳಿಗೆ: ಮಧುಮೇಹಿಗಳು ಸಿಹಿಪದಾರ್ಥವನ್ನು ತ್ಯಜಿಸಬೇಕು. ಅವರು ಸಿಹಿಪದಾರ್ಥವನ್ನು ತಿನ್ನಬೇಕೆನಿಸಿದಾಗ ಖರ್ಜೂರವನ್ನು ಸೇವಿಸಬಹುದು. ಬಹುಮೂತ್ರ ವಿಸರ್ಜನೆಯಾಗುವವರೂ ಕೂಡ ಖರ್ಜೂರ ಸೇವಿಸಬಹುದು ಅಥವಾ ಖರ್ಜೂರದ ಬೀಜವನ್ನು ತೆಗೆದು ಶುದ್ಧವಾದ ನೀರಿನಿಂದ ತೊಳೆದು, ಜಜ್ಜಿಕೊಳ್ಳಿ. ಇದಕ್ಕೆ ಎರಡರಷ್ಟು ನೀರನ್ನು ಸೇರಿಸಿ, ಚೆನ್ನಾಗಿ ಕುದಿಸಿ ಬೇಯಿಸಿಕೊಂಡು, ಅರ್ಧದಷ್ಟು ನೀರು ಇಂಗಿದ ಮೇಲೆ ಆರಲು ಬಿಡಿ. ನಂತರ ಚೆನ್ನಾಗಿ ಕಿವುಚಿ ಶೋಧಿಸಿಕೊಂಡು, ಒಲೆಯ ಮೇಲಿಟ್ಟು ಚೆನ್ನಾಗಿ ಕಾಯಿಸಬೇಕು. ಆರಿದ ಮೇಲೆ ಗಾಜಿನ ಶೀಷೆಗೆ ಹಾಕಿಟ್ಟುಕೊಂಡು ಪ್ರತಿದಿನ ಎರಡು ಚಮಚದಷ್ಟ ಸೇವಿಸಬೇಕು. ಈ ಷರಬತ್ತನ್ನು ಮಧುಮೇಹಿಗಳು ಸೇವಿಸಬಹುದು. ಮಧುಮೇಹಿಗಳಿಗೆ ಪುಷ್ಠಿದಾಯಕ ಆಹಾರ ಸಿಕ್ಕಂತಾಗುತ್ತದೆ. ಇದನ್ನು ಮಕ್ಕಳಿಗೆ ಹಾಲಿನ ಜೊತೆ ಬೆರೆಸಿ ಕುಡಿಯಲು ಕೊಟ್ಟರೆ, ಪೌಷ್ಠಿಕಾಂಶದ ಕೊರತೆ ಉಂಟಾಗುವುದಿಲ್ಲ ಹಾಗೂ ರಕ್ತವೃದ್ಧಿಯಾಗುತ್ತದೆ.
೩. ರಾತ್ರಿವೇಳೆ ಮೂತ್ರವಿಸರ್ಜನೆ ಮಾಡುವ ಮಕ್ಕಳಿಗೆ: ಖರ್ಜೂರದ ಬೀಜವನ್ನು ತೆಗೆದು ಸಾಣೆಕಲ್ಲಿನ ಮೇಲೆ ತೇಯ್ದು, ಆ ರಸವನ್ನು ರಾತ್ರಿ ಮಲಗುವ ಮುನ್ನ ಮಕ್ಕಳಿಗೆ ಕೊಟ್ಟರೆ (ಕೆಲದಿನಗಳ ಕಾಲ) ಆ ಅಭ್ಯಾಸ ತಪ್ಪುತ್ತದೆ. ೪. ಋತುಚಕ್ರದ ಸಮಸ್ಯೆಗೆ: ಖರ್ಜೂರದ ಬೀಜಗಳನ್ನು ಕುಟ್ಟಿ ಪುಡಿಮಾಡಿ, ತುಪ್ಪದಲ್ಲಿ ಹುರಿದು ಅಕ್ಕಿ ತೊಳೆದ ನೀರಿನಲ್ಲಿ ಬೆರೆಸಿ ಸೇವಿಸಿದರೆ ರಕ್ತ ಪ್ರದರ, ಶ್ವೇತ ಪ್ರದರ ಸiಸ್ಯೆಗಳಿಗೆ ಪರಿಹಾರ ಸಿಗುವುದು.
