ಉದಯವಾಹಿನಿ, ಸಂಡೂರು : ಸಹೋದರ ಭಾಂಧ್ಯವ್ಯವನ್ನು ಮೆರೆದಂತಹ ಎಲ್ಲಾ ಅಕ್ಕ ತಂಗಿಯರಿಗೆ ನನ್ನ ಹಾರ್ದಿಕ ಶುಭಾಷಯಗಳು, ಇದು ನನ್ನ ಬದುಕಿನ ಮರೆಯಲಾರದ ಕ್ಷಣವಾಗಿದೆ ಎಂದು  ತುಕರಾಂ ತಿಳಿಸಿದರು.
ಅವರು ಪಟ್ಟಣದ ಆದರ್ಶ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಅಂಗನವಾಡಿಯ ಕಾರ್ಯಕರ್ತೆಯರು ಸಹಾಯಕಿಯರು ವಿಶೇಷವಾಗಿ ಶಾಸಕರಿಗೆ ರಕ್ಷಾಬಂಧವನ್ನು ನೆರವೇರಿಸಿದರು ಈ ಸಂದರ್ಭದಲ್ಲಿ ಅವರು ಮಾತನಾಡಿ ಪ್ರತಿ ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ದಿ ಪಡಿಸುವುದರ ಜೊತೆಗೆ ಈಗಾಗಲೇ ರೆಫ್ರಿಜಿರೇಟರ್, ಮಿಕ್ಸಿಯನ್ನು ಸಹ ನೀಡಲಾಗುವುದು, ಅಲ್ಲದೆ ಅವರಿಗೆ ಸಿಗಬೇಕಾದ ಸೌಲಭ್ಯಗಳಿಗೆ ಪ್ರಾಮಾಣಿಕವಾದ ಪ್ರಯತ್ನವನ್ನು ನಾನು ಮಾಡುತ್ತೇನೆ, ಬಹಳಷ್ಟು ತಾಯಂದಿರ ಅಶೀರ್ವಾದ ಇಂದು ನನ್ನನ್ನು ಈ ಹಂತಕ್ಕೆ ಬೆಳೆಸಿದೆ ಎಂದು ಅಭಿನಂದಿಸಿದರು.
ಈ ಸಂದರ್ಬದಲ್ಲಿ ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!