ಉದಯವಾಹಿನಿ ಕೊಲ್ಹಾರ: ಪುಣ್ಯ ಪುರುಷರ ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ತಾಲೂಕ ದಂಡಾಧಿಕಾರಿ ಎಸ್.ಎಸ್ ನಾಯಕಲಮಠ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ನೂಲಿ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರೂಜಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಯಕ ತತ್ವವನ್ನೇ ಉಸಿರಾಗಿಸಿಕೊಂಡು ಸಾಗಿದ ನೂಲಿ ಚಂದಯ್ಯ ಹಾಗೂ ಸಮಾಜ ಸುಧಾರಣೆಗಾಗಿ ಜೀವನ ಮುಡಿಪಾಗಿಟ್ಟ ನಾರಾಯಣ ಗುರೂಜಿ ಅವರ ತತ್ವಾದರ್ಶಗಳು ನಮಗೆ ಪ್ರೇರಣಾದಾಯಕ ಎಂದು ಅವರು ಹೇಳಿದರು.ಪ ಪಂ ಸದಸ್ಯ ಬಾಬು ಬಜಂತ್ರಿ ಮಾತನಾಡುತ್ತಾ ನೂಲಿ ಚಂದಯ್ಯನವರು ನಮ್ಮ ಸಮಾಜಕ್ಕೆ ಕಳಶಪ್ರಾಯ ಇದ್ದಂತೆ ಅವರ ಕಾಯಕ ತತ್ವದ ಪರಿಪಾಲನೆ, ಸೇವಾ ಮನೋಭಾವ ಸದಾಕಾಲಕ್ಕೂ ಪ್ರಸ್ತುತ ಎಂದು ಹೇಳಿದರು.
ಬಾಪು ಈಳಗೇರ ಮಾತನಾಡುತ್ತಾ ಮಹಾನ್ ವ್ಯಕ್ತಿಗಳ ಬದುಕು ಸರ್ವರಿಗೂ ಆದರ್ಶಪ್ರಾಯವಾದದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ನಾವುಗಳು ಕೂಡ ಸಮಾಜಕ್ಕೆ ಕೈಲಾದಷ್ಟು ಕಾಣಿಕೆ ನೀಡಿಬೇಕು ಎಂದು ಹೇಳಿದರು.ಕಾಯಕ ತತ್ವದಲ್ಲಿ ನಾರಾಯಣ ಗುರೂಜಿ ಹಾಗೂ ನೂಲಿ ಚಂದಯ್ಯನವರು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಇಂತಹ ಮಹಾನ್ ವ್ಯಕ್ತಿಗಳ ಜಯಂತಿ ಆಚರಿಸುವ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ ಎಂದು ಹೇಳಿದರು.ಈ ಸಂದರ್ಭದಲ್ಲಿ ಸುಭಾಸ್ ಬಜಂತ್ರಿ, ಲೊಕೇಶ್ ಪೂಜಾರಿ, ಮುದಕಪ್ಪ ಬಜಂತ್ರಿ, ಸಾಬು ಬಜಂತ್ರಿ, ಚಂದ್ರು ಬಜಂತ್ರಿ, ಚಂದ್ರಶೇಖರ ಈಟಿ, ಸದಾಶಿವ ಬಳೂತಿ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!