ಉದಯವಾಹಿನಿ ಕೊಲ್ಹಾರ: ವಚನ ಸಾಹಿತ್ಯ ಜಗತ್ತಿನ ಶ್ರೇಷ್ಠ ಸಾಹಿತ್ಯವಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ನಾಗರಾಜ ಬನಸೋಡೆ ಹೇಳಿದರು. ಪಟ್ಟಣದ ಸರಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಚನ ದಿನ ಹಾಗೂ ಕದಳಿ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು ವಚನ ಸಾರ ಅಪಾರವಾದದ್ದು ವಚನ ಸಾಹಿತ್ಯ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಅವರು ಹೇಳಿದರು.ರುದ್ರಮ್ಮ ಗಿಡ್ಡಪ್ಪಗೋಳ ಉಪನ್ಯಾಸ ನೀಥಡುತ್ತಾ ಶರಣ ಸಾಹಿತ್ಯ ಪರಿಷತ್ತು ಜನಮನಕ್ಕೆ ತಲುಪಲು ಸುತ್ತೂರು ದೇಶಿ ಕೇಂದ್ರದ ಡಾ‌.ರಾಜೇಂದ್ರ ಮಹಾಸ್ವಾಮಿಗಳು ಶರಣ ಸಾಹಿತ್ಯ ಪರಿಷತ್ತು ಹುಟ್ಟುಹಾಕಿ ಅವಿರತವಾಗಿ ಶ್ರಮಿಸಿದ್ದಾರೆ ಎಂದರು. ಪ್ರದಾನ ಕಾರ್ಯದರ್ಶಿ ಕೆ.ಎಸ್ ಬಾಲಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರಿಗೆ ಸನ್ಮಾನ: ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಈರಯ್ಯ ಗಣಕುಮಾರ ಹಾಗೂ ಮಶಾಕ ಬಳಗಾರ ಅವರನ್ನು ಇದೆ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕದಳಿ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ:
ಕದಳಿ ವೇದಿಕೆಯ ಅಧ್ಯಕ್ಷರಾಗಿ ಭುವನೇಶ್ವರಿ ಹಿರೇಮಠ, ಕಾರ್ಯದರ್ಶಿಗಳಾಗಿ ಶೋಭಾ ಬಾಟಿ, ಕೋಶಾಧ್ಯಕ್ಷರಾಗಿ ಗೀತಾ ಕುಲಕರ್ಣಿ, ಉಪಾಧ್ಯಕ್ಷರಾಗಿ ರೇಖಾ ಕುಬಕಡ್ಡಿ, ಸದಸ್ಯರುಗಳಾಗಿ ಸೌಮ್ಯ ಗಿಡ್ಡಪ್ಪಗೋಳ, ರೇವತಿ ಪಾಟೀಲ್, ರೂಪಾ ಗಿಡ್ಡಪ್ಪಗೋಳ, ಡಾ‌.ಲಕ್ಷ್ಮೀ ಗಾಣಿಗೇರ ಪದಗ್ರಹಣ ಮಾಡಿದರು.
ಈ ಸಂದರ್ಭದಲ್ಲಿ ಬಿ‌.ಹೆಚ್ ಕೆಳಗೇರಿ, ರಾಜೇಂದ್ರ ನಾವಿ, ಗಂಗಾಧರ ಏಳಗಂಟಿ, ಶಾಂತನಗೌಡ ಪಾಟೀಲ್, ಶ್ರೀಮತಿ ಬಿ‌.ಸಿ ಹಿರೇಮಠ, ಎಸ್‌.ಬಿ ವಂದಾಲ, ಉಮೇಶ ಪೂಜಾರಿ ಇತರರು ಇದ್ದರು
ಸಿ‌‌.ಎಸ್ ಕಾಂಬಳೆ, ಕೆ.ಯು ಗಿಡ್ಡಪ್ಪಗೋಳ, ಗಂಗಾಧರ ಏಳಗಂಟಿ, ಆರ್‌.ಎಸ್ ಜತ್ತಿ, ಸಿ.ಹೆಚ್ ಗೌಡರ ಇದ್ದರು.
ಶ್ವೇತಾ ಬಾಟಿ ನಿರೂಪಿಸಿದರು, ಸಿ‌.ಹೆಚ್ ಗೌಡರ ಸ್ವಾಗತಿಸಿದರು, ಆರ್.ಹೆಚ್ ನಾವಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!