
ಉದಯವಾಹಿನಿ ರಾಮನಗರ: ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾಗಿ ನೇಮಕಗೊಂಡಿರುವ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಷ ಅವರನ್ನು ರಾಮನಗರ ತಾಲ್ಲೂಕಿನ ಸುಗ್ಗನಹಳ್ಳಿ ಗ್ರಾಪಂ ಅಧ್ಯಕ್ಷೆ ಹಾಗೂ ವಕೀಲರಾದ ಅರ್ಪಿತಾ ಮತ್ತು ವಕೀಲ ಹರೀಶ್ ಕುಮಾರ್ ಅವರುಗಳು ವಿಧಾನಸೌಧದ ಅವರ ಕಚೇರಿಗೆ ತೆರಳಿ ಅಭಿನಂದಿಸಿ ಶುಭ ಹಾರೈಸಿದರು.ಇದೆ ಸಂಧರ್ಭದಲ್ಲಿ ವಕೀಲರಾದ ಹರಿಉಶ್ ಕುಮಾರ್ ಅವರು ಮಾತನಾಡಿ, ಸಜ್ಜನ ರಾಜಕಾರಣಿ ಮತ್ತು ಹಿರಿಯರಾದ ಎ.ಎಸ್.ಪೊನ್ನಣ್ಣ. ಅವರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾನೂನು ಸಲಹೆಗಾರರನ್ನಾಗಿ ನೇಮಕ ಮಾಡಿರುವುದು ಪೊನ್ನಣ್ಣ ಅವರ ಪಾರದರ್ಶಕ ಬದುಕಿಗೆ ದೊರೆತ ಮನ್ನಣೆಯಾಗಿದೆ. ಇವರನ್ನು ವೃತ್ತಿ ಬಾಂದವರೆಂದು ಹೇಳಿಕೊಳ್ಳಲು ಸಂತಸವಾಗುತ್ತದೆ ಎಂದರು.
