ಉದಯವಾಹಿನಿ ಕುಶಾಲನಗರ : ಪುರಸಭೆ ಸಾಮಾನ್ಯ ಸಭೆಗೆ ಸ್ಥಳೀಯ ಸರ್ಕಾರಿ ಇಲಾಖೆಯ ಎಲ್ಲಾ ಅಧಿಕಾರಿಗಳು ಪಾಲ್ಗೊಂಡು ಅವರ ಇಲಾಖೆಗೆ ಸಂಬಂಧಿಸಿದ ಕುಂದುಕೊರತೆಗಳು ಬಂದಾಗ ಸೂಕ್ತವಾದ ಮಾಹಿತಿಯನ್ನು ನೀಡಬೇಕು ಎಂದು ಶುಕ್ರವಾರ ಪುರಸಭಾ ಸಭಾಂಗಣದಲ್ಲಿ ಪುರಸಭೆ ಆಡಳಿತಾಧಿಕಾರಿ ಯತೀಶ್ ಉಲ್ಲಾಳ್ ಅಧ್ಯಕ್ಷತೆಯಲ್ಲಿ ನಡೆದ ಕುಶಾಲನಗರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕರು ಕುಶಾಲನಗರ ಭಾಗದಲ್ಲಿ ನಡೆಯುತ್ತಿರುವ ಯು.ಜಿ.ಡಿ .ಕಾಮಗಾರಿ ಮುಗಿಯದ ಅಧ್ಯಯನವಾಗಿದೆ .ಈಗಿನ ತಂತ್ರಜ್ಞಾನದಲ್ಲಿ ಚಂದ್ರಲೋಕ.ಸೂರ್ಯಲೋಕಕ್ಕೆ ತೆರಳುತ್ತಿದ್ದಾರೆ ಆದರೇ ನಿಮ್ಮ ಇಲಾಖೆಯ ವತಿಯಿಂದ ನಡೆಯುತ್ತಿರುವ ಯು.ಜಿ.ಡಿ.ಕಾಮಗಾರಿ 10 ವರ್ಷಗಳು ಸಾಗಿದೆ ಆದರೆ ಇನ್ನೂ ಮುಕ್ತಿ ಸಿಗಲಿಲ್ಲ ಎಂದು ಒಳಚರಂಡಿ ಅಧಿಕಾರಿಗಳ ಮೇಲೆ ಶಾಸಕರು ಗರಂ ಆದರೂ ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು ಇನ್ನೂ ಎರಡು ತಿಂಗಳುಗಳಲ್ಲಿ ಯು.ಜಿ .ಡಿ ಕಾಮಗಾರಿ ಸಂಪೂರ್ಣ ಪೂರ್ಣವಾಗಲಿದೆ ಎಂದರು .ಮುಳ್ಳುಸೋಗೆ ಗ್ರಾಮಕ್ಕೆ ಕುಡಿಯುವ ನೀರಿನ ಬಗ್ಗೆ. ಕೆರೆಗಳ ಅಭಿವೃದ್ಧಿ ಹಾಗೂ ತಾವರೆ ಕೆರೆಯನ್ನು ಪ್ರವಾಸೋದ್ಯಮಕ್ಕೆ ಅನುಗುಣವಾಗಿ ಅಭಿವೃದ್ಧಿ ಮಾಡುವ ಬಗ್ಗೆ .ನಗರದಲ್ಲಿ ಇಂದಿರಾ ಕ್ಯಾಂಟಿನ್ ತೆರೆಯುವ ಬಗ್ಗೆ ಹಾಗೂ ಕುಶಾಲನಗರ ಯೋಜನಾ ಪ್ರಾಧಿಕಾರದಲ್ಲಿ ಜನಸಾಮಾನ್ಯರ ಕೆಲಸಕ್ಕೆ ತೊಂದರೆ ಆಗುವ ಬಗ್ಗೆ ಶಾಸಕರು ಕುಡಾ ಅಧಿಕಾರಿಯ ಗಮನಕ್ಕೆ ತಂದು ಸರಿಪಡಿಸುವ ಬಗ್ಗೆ ತಾಕಿತ್ ಮಾಡಿದರು.ಸಭೆಯಲ್ಲಿ ಹಿಂದಿನ ಸಭೆಯ ನಡಾವಳಿಗಳನ್ನು ಓದಿ ಅಂಗೀಕರಿಸಿದ ನಂತರ ಪುರಸಭೆ ಆಡಳಿತಾಧಿಕಾರಿ ಯತೀಶ್ ಉಲ್ಲಾಳ್ ಅಧ್ಯಕ್ಷತೆಯಲ್ಲಿ ಕುಶಾಲನಗರ ಪುರಸಭೆಯ ಕಚೇರಿ ಕಟ್ಟಡದ ಮುಂದುವರೆದ ಕಾಮಗಾರಿಗೆ ಮೊತ್ತ ರೂ.160.00 ಲಕ್ಷಗಳ ಕ್ರಿಯಾಯೋಜನೆಗೆ.ನೈರ್ಮಲ್ಯ ಘನತ್ಯಾಜ ನಿರ್ವಹಣೆ ಮತ್ತು ವೀಲೆವಾರಿಗೆ ಟೆಂಡರ್ .ಆರ್.ಎಂ.ಸಿ.ಯಾರ್ಡ್ ನಲ್ಲಿ ನಡೆಯುತ್ತಿರುವ ಸಂತೆಯನ್ನು ಹಳೆಯ ಸಂತೆಗೆ ವರ್ಗಹಿಸುವ ಬಗ್ಗೆ. ನಗರದಲ್ಲಿ ಹೆಚ್ಚಾಗಿರುವ ಬೀದಿ ನಾಯಿಗಳ ನಿಯಂತ್ರಣ. ಪುರಸಭೆ ಅನುದಾನದ ಕಾಮಗಾರಿಗಳ ಕ್ರಿಯಾಯೋಜನೆಗೆ ಅನುಮೋದನೆ ಹಾಗೂ ಆಡಳಿತಾತ್ಮಕ ಮಂಜೂರಾತಿ. ಕುಶಾಲನಗರ ಪುರಸಭೆ ವ್ಯಾಪ್ತಿಯ ಬೀದಿ ದೀಪ ನಿರ್ವಹಣೆ ಕಾಮಗಾರಿಯ ಅಂದಾಜು ಮೊತ್ತ 30.00 ಲಕ್ಷಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವ ಕುರಿತು. ಕಚೇರಿಗೆ ಡಾಟಾ ಎಂಟ್ರಿ ಅಪರೇಟರನ್ನು ಹೊರಗುತ್ತಿಗೆ ಮೂಲಕ ನಿಯೋಜಿಸಲು ವಾರ್ಷಿಕ ಟೆಂಡರ್ ಕರೆದಿದ್ದು ಕಡಿಮೆ ದರ ನಮೂದಿಸಿ ಬಂದಿರುವ ಟೆಂಡರನ್ನು ಅನಮೋದಿಸುವ ಬಗ್ಗೆ ಹಾಗೂ ಊರಿನಲ್ಲಿ ನಡೆಯ ಬೇಕಾದ ಅಭಿವೃದ್ಧಿ ಹಾಗೂ ಇತರೆ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು .ಸಭೆಯಲ್ಲಿ ಪುರಸಭೆ ಸದಸ್ಯರು. ಮುಖ್ಯಾಧಿಕಾರಿ. ಸಿಬ್ಬಂದಿಗಳು .ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
