ಉದಯವಾಹಿನಿ ಶಹಾಪುರ: ಹೊರವಲಯದ ಭಿಮ ರಾಯನಗುಡಿ ಪೋಲೀಸ್ ಠಾಣೆಯಲ್ಲಿ ಅರ್ಥಪೂರ್ಣವಾಗಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಹಿಳಾ ಪೊಲೀಸ್ ಪೇದೆ ಸಹೋದರಿ ದೀಪಿಕಾ ಜಮಖಂಡಿ ಯವರು ತಮ್ಮ ಸಹೋದ್ಯೋಗಿ ಸಿಬ್ಬಂದಿಯವರಿಗೆ ರಕ್ಷೆಯನ್ನು ಕಟ್ಟುವ ಮೂಲಕ ಎಲ್ಲಾ ಪೋಲೀಸ್ ಸಹೋದರರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪಿಎಸ್ ಐ ಗಜಾನಂದ ಬಿರಾದಾರ, ಎಎಸ್ ಐ  ಗಳಾದ ಡಿ.ವಿ.ನಾಯಕ, ಹಾಗೂ ಚಂದ್ರಶೇಖರ, ಠಾಣಾ ಬರಹಗಾರಾದ ಜಿಂದಾವಲಿ  ಜಮಾದಾರ , ಹಾಗೂ ಮಲ್ಲಿಕಾರ್ಜುನ ಬಂಡಿ,ಪೇದೆ ಅರುಣ ಹೆಬ್ಬಾಳ,ಮಂಜುನಾಥ ಎಸ್ ಬಿ ಮಹಿಳಾ ಪೇದೆ ದೀಪಿಕಾ ಜಮಖಂಡಿ ಸೇರಿದಂತೆ ಠಾಣೆಯ ಎಲ್ಲಾ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!