ಉದಯವಾಹಿನಿ ಇಂಡಿ : ಇಂಡಿ ತಾಲೂಕಿನಲ್ಲಿ ಇಂದು ದಿ: 01.09.2023 ರಂದು ಮುಂಜಾನೆ 07.00 ಗಂಟೆಯ ಸುಮಾರಿಗೆ ಇಂಡಿ ಗ್ರಾಮೀಣ ಪೊಲೀಸ ಠಾಣೆಯ ಪಿ.ಎಸ್.ಐ, ಸೋಮೇಶ ಗೆಜ್ಜಿ ಇವರಿಗೆ ಮಾಹಿತಿ ಬಂದಿದ್ದರಲ್ಲಿ ಪ್ರಶಾಂತ ತಂ. ಸಿದ್ದಾರಾಮ ನಾವಿ ವಯಾ 29 ವರ್ಷ ದೇವರ ನಿಂಬರಗಿ ತಾಲೂಕ ಚಡಚಣ ಈತನು ತನ್ನ ತಾಬಾದಲ್ಲಿ ಅನಧೀಕೃತವಾಗಿ ಸರಕಾರದಿಂದಾಗಲಿ ಅಥವಾ ಸಂಬಂಧ ಪಟ್ಟ ಇಲಾಖೆಯಿಂದಾಗಿ ಯಾವುದೇ ಅನುಮತಿಯನ್ನು ಪಡೆದುಕೊಳ್ಳದೇ ಕಂಟ್ರಿ ಪಿಸ್ತೂಲ್ ಮತ್ತು ಜೀವಂತ ಗುಂಡುಗಳನ್ನು ಇಟ್ಟುಕೊಂಡು ಇಂಡಿಯಿಂದ ಚಿಕ್ಕಬೇವನೂರ ಮಾರ್ಗವಾಗಿ ತನ್ನೂರಿಗೆ ಹೊರಟಿರುವ ಬಗ್ಗೆ ಮಾಹಿತಿ ಬಂದಿದ್ದು ಕೂಡಲೇ ಪಿ.ಎಸ್.ಐ. ಈ ವಿಷಯವನ್ನು ತಮ್ಮ ಮೇಲಾಧಿಕಾರಿಗಳಾದ ಮಾನ್ಯ ಹೆಚ್.ಡಿ, ಆನಂದ ಕುಮಾರ ಎಸ್.ಪಿ.  ವಿಜಯಪುರ ಮತ್ತು ಶಂಕರ ಮಾರಿಹಾಳ ಹೆಚ್ಚುವರಿ ಎಸ್.ಪಿ. ಮತ್ತು ಮಾನ್ಯ ಜಗದೇಶ, ಹೆಚ್.ಎಸ್. ಡಿ.ಎಸ್.ಪಿ  ಇಂಡಿ ಹಾಗೂ  ಮಲ್ಲಿಕಾರ್ಜುನ ಡಪ್ಪಿನ ಸಿ.ಪಿ.ಐ ಇಂಡಿ ಗ್ರಾಮಾಂತರ ರವರಿಗೆ ಪೋನ್ ಮುಖಾಂತರ ಮಾಹಿತಿ ಬಂದ ವಿಷಯ ತಿಳಿಸಿ ದಾಳಿ ಮಾಡುವ ಕುರಿತು ಮೇಲಾಧಿಕಾರಿಗಳ ಸೂಕ್ತ ಮಾರ್ಗದರ್ಶನ ಪಡೆದುಕೊಂಡು ಪಿ.ಎಸ್.ಐ. ಸೋಮೇಶ ಗೆಜ್ಜಿ ಇವರು ತಮ್ಮ ಸಿಬ್ಬಂದಿಯಾದ ಐ..ಎ. ಕೋಟ್ಯಾಳ , ಎಸ್.ಎಸ್. ಶಿರಶ್ಯಾಡ . ಎಸ್.ವೈ.ಜೇರಟಗಿ . ಆರ್.ಪಿ. ಗಡೇದ  ಎಂ.ಎಸ್. ಕೂಡಿಗನೂರ ಇವರನ್ನು ಮತ್ತು ಇಬ್ಬರು ಪಂಚ ಜನರೊಂದಿಗೆ ದಿ: 01.09.2023 ರಂದು ಮುಂಜಾನೆ 08.15 ಗಂಟೆಯ ಸುಮಾರಿಗೆ ಚಿಕ್ಕಬೇವನೂರ ಹತ್ತಿರ ಇರುವ ಸರಕಾರಿ ಆಸ್ಪತ್ರೆಯ ಹತ್ತಿರ ರಸ್ತೆಯ ಮೇಲೆ ಹೊರಟಿದ್ದ ಆರೋಪಿನಾದ ಪ್ರಶಾಂತ ತಂ. ಸಿದ್ದಾರಾಮ ನಾವಿ ವಯಾ 29 ವರ್ಷ  ದೇವರ ನಿಂಬರಗಿ ತಾಲೂಕ ಚಡಚಣ ಈತನ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಆರೋಪಿತನ ತಾಬಾದಲಿದ ಕಂಟ್ರಿ ಪಿಸ್ತೂಲ ಒಂದು ಅದು ಸ್ಟೀಲ್ ಬಾಡಿ ಹೊಂದಿದ ಮತ್ತು ಕಪ್ಪು ಬಣ್ಣದ ಪೈಬರ್ ಹಿಡಕಿ ಹೊಂದಿದ್ದು ಮತ್ತು ಅದರಲ್ಲಿ ಸ್ಟೀಲ್ ಮ್ಯಾಗ್ನಿನ್ ಇದ್ದದ್ದು ಅದರ ಅಂದಾಜ ಕೀ  20,000.00 ರೂಪಾಯಿಗಳಾಗಬಹುದು. ಜೀವಂತ ಗುಂಡುಗಳು ಒಟ್ಟು 7 ಇದ್ದು, ಅವುಗಳ ಅಂದಾಜ ಕಿಮ್ಮತ್ತು 3500.00 ರೂಗಳಾಗಬಹುದು.
ಒಂದು ಎಕ್ಸಟ್ರಾ ಮ್ಯಾಗ್ನೆನ್ ಖಾಲಿ ಇದ್ದದ್ದು ಕೀ  500.00 ರೂಗಳು ಈ ಪ್ರಕಾರ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿತನಿಗೆ ವಿಜಾರಣೆಗೆ ಇಂಡಿ ಗ್ರಾಮೀಣ ಪೊಲೀಸ ಠಾಣೆಯಲಿ   ಭಾರತೀಯ ಆಯುಧ ಕಾಯ್ದೆ ನೇದ್ದರ ಅಡಿಯಲ್ಲಿ ಪ್ರಕರಣವನ್ನು ಎ.ಎಸ್.ಐ ಎನ್.ಡಿ, ಅವಟಿ ರವರು ದಾಖಅಸಿಕೊಂಡು ತನಿಖೆ ಕೈಕೊಂಡಿದಾರೆ

Leave a Reply

Your email address will not be published. Required fields are marked *

error: Content is protected !!