
ಇಂಡಿ.ಗೋಳಸಾರದ ದಿಂದ ಹೋಗುವ ಸಿನ್ನೂರ ವಸತಿಯ ಜನರು ಕತ್ತಲೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ ರಾತ್ರಿಯಾದರೆ ವಿಷಜಂತುಗಳ ಉಪಟಹ ಹಾಗೂ ಕಳ್ಳಕಾಕರ ಅಂಜಿಕೆಯಿಂದ ಜನರು ನರಕಯಾಚನೆ ಅನುಭವಿಸುತ್ತಿದ್ದಾರೆ.ಇದರ ಬಗ್ಗೆ ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ.ಆದಕಾರಣ ಇಂದು ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರ ನೇತೃತ್ವದಲ್ಲಿ ಮಾನ್ಯ ಕಾರ್ಯಪಾಲಕ ಅಭಿಯಂತರಾದ ಬಿರಾದಾರ ಹಾಗೂ ಅಭಿಯಂತರರಾದ ಮೇಂಡೆಗಾರ ರವರಿಗೆ ದರಣಿ ನಡಸಿ ಮನವಿ ಸಲ್ಲಿಸಲಾಯಿತು ನಂತರ ಮಾತನಾಡುತ್ತಾ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಕಳೆದರೂ ಹಿಂತಾ ಕತ್ತಲೆಯಲ್ಲಿ ಜೀವನ ಸಾಗಿಸುವ ಪರಿಸ್ಥಿತಿಬಂದಿರುವದು ನಮ್ಮ ದುರ್ದೈವ, ಕೂಡಲೆ ಅಧಿಕಾರಿಗಳು ಈ ಅಸಹಾಯಕ ಜನರಿಗೆ ನ್ಯಾಯ ಒದಗಿಸಬೇಕು ಇಲ್ಲದಿದರೆ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಮನವಿ ಸ್ವಿಕರಿಸಿ ಸಾಹಾಯಕ ಕಾರ್ಯಪಾಲಕ ಅಭಿಯಂತರಾದ ಬಿರಾದಾರ ರವರು ಕೂಡಲೆ ಸಂಬಂಧಿಸಿದ ವಸತಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಭರವಸೆ ನೀಡಿದರು.ಇದೆ ಸಂದರ್ಭದಲ್ಲಿ ಶ್ರೀ ಶೈಲಗೌಡ ಪಾಟೀಲ ಸಿದ್ದು ಡಂಗಾ ಮಹಿಬೂಬ ಬೇವನೂರ ನಿಯಾಝ್ ಅಗರಖೇಡ ಬಾಳು ರಾಠೋಡ ರಮೇಶ್ ರಾಠೋಡ, ವಿಠ್ಠಲ ಪೂಜಾರಿ, ನಿಂಗಪ್ಪ ಸಿನ್ನೂರ,ಅಮೋಗಿ ಸಿನ್ನೂರ, ಶಿವಯೋಗಿ ಸಿನ್ನೂರ, ಸಿದ್ದು ಡೂಂಬಳ್ಳಿ,ಅಮೀನಬಿ ಮುಲ್ಲಾ, ಬೀರಪ್ಪ ಜಂಬಗಿ, ಮಾಳಪ್ಪ ಹಿರೇಕುರಬರ,ಬಾಬು ಪೂಜಾರಿ, ದಾವೂದ್ ಕಾಚೂರ,ನೂರಾರೂ ವಸತಿ ಜನರು ಉಪಸ್ಥಿತರಿದ್ದರು
ವರದಿ :- ಶಿವರಾಜಕುಮಾರ ವಾಲಿಕಾರ

Hi, this is a comment.
To get started with moderating, editing, and deleting comments, please visit the Comments screen in the dashboard.
Commenter avatars come from Gravatar.