ಉದಯವಾಹಿನಿ, ವೀಕೆಂಡ್ ಬಂದರೆ ಸಾಕು ಅನೇಕರಿಗೆ ಮಾಂಸಹಾರ ಖಾದ್ಯಗಳನ್ನು ಸೇವನೆ ಮಾಡಲು ತುಂಬಾ ಇಷ್ಟಪಡುತ್ತಾರೆ. ಹಲವರು ಮನೆಯಲ್ಲಿ ಅನೇಕ ಮಾಂಸಾಹಾರಿ ಭಕ್ಷ್ಯಗಳನ್ನು ತಯಾರಿಸುತ್ತಾರೆ. ಯಾವಾಗಲೂ ಒಂದೇ ರೀತಿಯಲ್ಲಿ ಅಡುಗೆಯನ್ನು ಮಾಡದೇ ಈ ಬಾರಿ ಮಟನ್ ಫ್ರೈ ಅನ್ನು ಹೊಸ ರೀತಿಯಲ್ಲಿ ಮಾಡಬಹುದು. ಮೃದುವಾದ ಮಟನ್ ಪೀಸ್ಗಳೊಂದಿಗೆ ಮಸಾಲ ರುಚಿಯನ್ನು ಹೆಚ್ಚಿಸುತ್ತದೆ.
ಈ ರೀತಿಯಲ್ಲಿ ಮಟನ್ ಪ್ರೈ ತಯಾರಿಸಿದರೆ ಅದು ತುಂಬಾ ಮೃದುವಾಗಿರುತ್ತದೆ ಹಾಗೂ ರುಚಿ ಅದ್ಭುತವಾಗಿರುತ್ತದೆ. ಅಡುಗೆ ಕಲಿಯುತ್ತಿರುವವರು, ಬ್ಯಾಚುಲರ್‌ಗಳು ಕೂಡ ಈ ರೆಸಿಪಿಯನ್ನು ಸರಳವಾಗಿ ಸಿದ್ಧಪಡಿಸಬಹುದು. ಇದೀಗ ತುಂಬಾ ರುಚಿಕರವಾದ ಮಟನ್ ಫ್ರೈ ರೆಸಿಪಿ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ಮಟನ್ ಫ್ರೈ ರೆಸಿಪಿಗಾಗಿ ಬೇಕಾಗುವ ಸಾಮಗ್ರಿಗಳೇನು?: ಮಟನ್ – ಅರ್ಧ ಕಿಲೋ (500 ಗ್ರಾಂ)
ಎಣ್ಣೆ – ಅರ್ಧ ಕಪ್ , ಕರಿಬೇವು – ಸ್ವಲ್ಪ, ಈರುಳ್ಳಿ – 1 , ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಅರಿಶಿನ – ಅರ್ಧ ಟೀಸ್ಪೂನ್, ಮೆಣಸಿನ ಪುಡಿ – 2 ಟೀಸ್ಪೂನ್, ಕೊತ್ತಂಬರಿ ಪುಡಿ – 1 ಟೀಸ್ಪೂನ್
ಗರಂ ಮಸಾಲ – 3 ಟೀಸ್ಪೂನ್, ಜೂಮಿನ್ ಪುಡಿ – ಅರ್ಧ ಟೀಸ್ಪೂನ್ ,ಕೊತ್ತಂಬರಿ ಸೊಪ್ಪು – ಸ್ವಲ್ಪ
ಖತ್ ಟೇಸ್ಟಿಯಾದ ಮಟನ್ ಫ್ರೈ ಸಿದ್ಧಪಡಿಸಲು ಮೊದಲಿಗೆ, ಒಂದು ಬಟ್ಟಲಿನಲ್ಲಿ ಅರ್ಧ ಕೆಜಿ ಮಟನ್ ಹಾಕಿ ಸ್ವಚ್ಛಗೊಳಿಸಿ.
ಇನ್ನೊಂದು ಕಡೆ, ಒಲೆ ಆನ್ ಮಾಡಿ ಅರ್ಧ ಕೆಜಿ ಮಟನ್ ಹಾಗೂ 750 ಮಿಲಿ ನೀರನ್ನು ಕುಕ್ಕರ್‌ನಲ್ಲಿ ಹಾಕಿ, ಕುಕ್ಕರ್ ಮುಚ್ಚಿ ಉರಿಯನ್ನು ಮಧ್ಯಮ ಉರಿಯಲ್ಲಿ ಇರಿಸಿ. ಆರು ಸೀಟಿಗಳು ಬರುವವರೆಗೆ ಬೇಯಿಸಿ ಆರು ಸೀಟಿಗಳು ಬಂದ ಬಳಿಕ ನೀರನ್ನು ಸೋಸಿಕೊಳ್ಳಿ.
ಮತ್ತೊಂದು ಕಡೆಯಲ್ಲಿ ಒಲೆ ಆನ್ ಮಾಡಿ ಹಾಗೂ ಅರ್ಧ ಕಪ್ ಎಣ್ಣೆಯನ್ನು ಕಡಾಯಿಯಲ್ಲಿ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಸ್ವಲ್ಪ ಕರಿಬೇವು, ಕತ್ತರಿಸಿದ ಈರುಳ್ಳಿ ತುಂಡುಗಳನ್ನು ಸೇರಿಸಿ ಹುರಿಯಿರಿ.
ಈರುಳ್ಳಿ ತಿಳಿ ಚಿನ್ನದ ಬಣ್ಣಕ್ಕೆ ತಿರುಗಿದಾಗ ಒಂದು ಟೀಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ.
ಅರ್ಧ ಟೀಸ್ಪೂನ್ ಅರಿಶಿನ, ಎರಡು ಟೀಸ್ಪೂನ್ ಮೆಣಸಿನ ಪುಡಿ, ಒಂದು ಟೀಸ್ಪೂನ್ ಧನಿಯಾ ಪುಡಿಯನ್ನು ಸೇರಿಸಿ ಚೆನ್ನಾಗಿ ಹುರಿಯಿರಿ. ಬಳಿಕ ಬೇಯಿಸಿದ ಮಟನ್ ಪೀಸ್ಗಳನ್ನು ಸೇರಿಸಿ. ಈಗ ಜ್ವಾಲೆಯನ್ನು ಮಧ್ಯಮ ಉರಿಯಲ್ಲಿ ಇರಿಸಿ. ಬೆರೆಸಿ 25 ನಿಮಿಷಗಳ ಕಾಲ ಬೇಯಿಸಿ.
