ಉದಯವಾಹಿನಿ, ಮಾರುಕಟ್ಟೆಯಲ್ಲಿ ಗ್ರೀನ್ ಟೀ ಮತ್ತು ಹರ್ಬಲ್ ಟೀ ಬ್ಯಾಗ್‌ಗಳು ದೊರೆಯುತ್ತವೆ. ಒಂದಿಷ್ಟು ನಿಮಿಷ ಬಿಸಿ ನೀರಿನಲ್ಲಿ ಟೀ ಬ್ಯಾಗ್ ನೆನೆಸಿದರೆ ಸಾಕು ಬಿಸಿ ಚಹಾ ಸವಿಯಲು ಸಿದ್ಧ. ಹಲವರು ಸಾಮಾನ್ಯವಾಗಿ ಈ ಟೀ ಬ್ಯಾಗ್‌ಗಳನ್ನು ಬಳಸಿದ ಬಳಿಕ ಕಸದ ಡಬ್ಬಿಗೆಸೆಯುತ್ತಾರೆ. ಆದರೆ, ಇವುಗಳನ್ನು ಮರುಬಳಸುವುದರಿಂದ ವಿವಿಧ ಪ್ರಯೋಜನಗಳಿವೆ.
ಡಾರ್ಕ್ ಸರ್ಕಲ್ಸ್ ಹೋಗಲಾಡಿಸುತ್ತದೆ: ಕಣ್ಣಿನ ಕೆಳಗಿರುವ ಡಾರ್ಕ್ ಸರ್ಕಲ್ಸ್ ವಿವಿಧ ಕಾರಣಗಳಿಂದ ಉಂಟಾಗುವ ಸಾಮಾನ್ಯ ಸಮಸ್ಯೆ. ಇವುಗಳನ್ನು ಹೋಗಲಾಡಿಸಲು ಹಲವು ಪರಿಹಾರಗಳನ್ನು ಅನುಸರಿಸಲಾಗುತ್ತದೆ. ಬಳಸಿದ ಟೀ ಬ್ಯಾಗ್‌ಗಳು ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ಸ್ ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿವೆ. ಈ ಟೀ ಬ್ಯಾಗ್‌ಗಳನ್ನು ದಿನಕ್ಕೊಮ್ಮೆ 15 ನಿಮಿಷ ಕಣ್ಣುಗಳ ಕೆಳಗಿಟ್ಟುಕೊಳ್ಳುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.
ವಾಸನೆ ತಡೆಯುತ್ತೆ: ಸಾಮಾನ್ಯವಾಗಿ ಅನೇಕ ರೀತಿಯ ಆಹಾರಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುತ್ತೇವೆ. ಕೆಲವೊಮ್ಮೆ ಫ್ರಿಡ್ಜ್ ಬಾಗಿಲು ತೆರೆದರೆ ಈ ಆಹಾರಗಳಿಂದ ಬಲವಾದ ವಾಸನೆ ಹೊರಸೂಸುತ್ತದೆ. ಅಂತಹ ಸಂದರ್ಭಗಳಲ್ಲಿ ಬಳಸಿದ ಟೀ ಬ್ಯಾಗ್‌ಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ವಾಸನೆಯನ್ನು ಕಡಿಮೆ ಮಾಡಬಹುದು. ಹೀಗೆ ಮಾಡಲು ಎರಡು ಅಥವಾ ಮೂರು ಬಳಸಿದ ಒಣ ಟೀ ಬ್ಯಾಗ್‌ಗಳನ್ನು ಒಂದು ಕಪ್‌ನಲ್ಲಿಡಿ. ಈ ಕಪ್ ಅನ್ನು ರೆಫ್ರಿಜರೇಟರ್‌ನಲ್ಲಿಡಿ. ಇದು ಅಲ್ಲಿನ ಕೆಟ್ಟ ವಾಸನೆಯನ್ನು ಹೀರಿಕೊಳ್ಳುತ್ತದೆ.
ಗಾಜಿನ ಮೇಲ್ಮೈ ಸ್ವಚ್ಛಗೊಳಿಸಲು ಬಳಸಬಹುದು: ಮನೆಗಳಲ್ಲಿ ಅನೇಕ ಬಗೆಯ ಕನ್ನಡಿಗಳು, ಕಿಟಕಿಗಳು ಹಾಗೂ ಗಾಜಿನ ಸಾಮಾನುಗಳಂತಹ ಗಾಜಿನ ಮೇಲ್ಮೈಗಳಿವೆ. ಅನೇಕರು ಇವುಗಳನ್ನು ಸ್ವಚ್ಛಗೊಳಿಸಲು ಗ್ಲಾಸ್ ಕ್ಲೀನರ್ ಬಳಸುತ್ತಾರೆ. ಆದರೆ, ತಜ್ಞರು ಹೇಳುವಂತೆ ಈ ಗಾಜಿನ ಮೇಲ್ಮೈಗಳನ್ನು ಬಳಸಿದ ಟೀ ಬ್ಯಾಗ್‌ಗಳಿಂದ ಸ್ವಚ್ಛಗೊಳಿಸುವುದರಿಂದ ಎಲ್ಲ ಕಲೆಗಳು ಮತ್ತು ಕೊಳೆಯನ್ನು ಸುಲಭವಾಗಿ ತೆಗೆದುಹಾಕಬಹುದು.
ಪೀಠೋಪಕರಣಗಳಿಗೆ ಹೊಳಪು: ಕೆಲವು ಬಳಸಿದ ಟೀ ಬ್ಯಾಗ್‌ಗಳನ್ನು ಸ್ವಲ್ಪ ನೀರಿನಲ್ಲಿ ಎರಡು ನಿಮಿಷಗಳ ಕಾಲ ಕುದಿಸಿಕೊಳ್ಳಿ. ಬಳಿಕ ಈ ನೀರನ್ನು ತಣ್ಣಗಾಗಲು ಬಿಡಿಬೇಕು. ಈಗ ಸ್ವಚ್ಛವಾದ ಮೃದುವಾದ ಬಟ್ಟೆಯನ್ನು ನೀರಿನಲ್ಲಿ ಅದ್ದಿ ಹಾಗೂ ಪೀಠೋಪಕರಣಗಳನ್ನು ಒರೆಸಿ. ಬಳಿಕ ಅದನ್ನು ಒಣ ಬಟ್ಟೆಯಿಂದ ಒರೆಸಬೇಕಾಗುತ್ತದೆ. ಪೀಠೋಪಕರಣಗಳು ಹೊಸದರಂತೆ ಹೊಳೆಯುತ್ತವೆ.
ಆರೋಗ್ಯ ಪ್ರಯೋಜನಗಳು: ಬಾಲ್ಕನಿಯಲ್ಲಿ ಮತ್ತು ಮನೆಯ ಸುತ್ತಲೂ ಬೆಳೆಯುವ ಸಸ್ಯಗಳು ಚೆನ್ನಾಗಿ ಬೆಳೆಯಲು ಫಲವತ್ತಾದ ಮಣ್ಣು ಬೇಕು. ಅವುಗಳಿಗೆ ಸಕಾಲಿಕ ಗೊಬ್ಬರವೂ ಬೇಕು. ಆಗ ಮಾತ್ರ ಅವು ಚೆನ್ನಾಗಿ ಬೆಳೆಯುತ್ತವೆ. ಈ ಹಿನ್ನೆಲೆಯಲ್ಲಿ ಟೀ ಬ್ಯಾಗ್ ಪುಡಿಯನ್ನು ಸಸ್ಯಗಳಿಗೆ ಗೊಬ್ಬರವಾಗಿ ಬಳಸಬಹುದು. ಟೀ ಬ್ಯಾಗ್ ಅನ್ನು ಕತ್ತರಿಸಿ ಅದರಲ್ಲಿರುವ ಪದಾರ್ಥವನ್ನು ಸಸ್ಯದ ಬೇರುಗಳಿಗೆ ಹಾಕಬೇಕು. ಇದರಿಂದ ಸಸ್ಯಗಳ ಬೆಳವಣಿಗೆಯು ಉತ್ತೇಜನ ಲಭಿಸುತ್ತದೆ.
