ಉದಯವಾಹಿನಿ, ವರ್ಷದ ಸುಷ್ಮಾ (ಹೆಸರು ಬದಲಾಯಿಸಲಾಗಿದೆ) ಅವರು ಸಾಮಾನ್ಯ ಪ್ರಸೂತಿ ಸಂಬಂಧಿಸಿದ ತಪಾಸಣೆಗೆಂದು ಆಸ್ಪತ್ರೆಗೆ ಬಂದಿದ್ದರು. ಆ ವೇಳೆಯಲ್ಲಿ ಅವರಿಗೆ ಯಾರೂ ನಿರೀಕ್ಷಿಸದ ಒಂದು ದೊಡ್ಡ ಸಮಸ್ಯೆಯೊಂದು ಪತ್ತೆಯಾಯಿತು. ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಹಾಸ್ಪಿಟಲ್ ನಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ವೈದ್ಯರು ಒಂದು ದೊಡ್ಡ ಗಾತ್ರದ ಥೈರಾಯ್ಡ್ ಗೆಡ್ಡೆಯನ್ನು ಪತ್ತೆಹಚ್ಚಿದರು. ಅದಕ್ಕೆ ರೆಟ್ರೋಸ್ಟರ್ನಲ್ ಗಾಯಿಟರ್ ಎಂದು ಹೆಸರಿದ್ದು, ಇದು ಕ್ಲಿಷ್ಟಕರವಾದ ಮತ್ತು ಅಪಾಯಕಾರಿ ಸ್ಥಿತಿಯಾಗಿದೆ.
ತಕ್ಷಣವೇ ಕಾರ್ಯಪ್ರವೃತ್ತರಾದ ವೈದ್ಯಕೀಯ ತಂಡವು ಇ ಎನ್ ಟಿ, ಹೆಡ್ & ನೆಕ್ ಕ್ಯಾನ್ಸರ್ ಮತ್ತು ಕಾರ್ಡಿಯೋಥೊರಾಸಿಕ್ ಸರ್ಜರಿ ತಂಡಗಳು ಸೇರಿದಂತೆ ಬಹುವಿಭಾಗೀಯ ತಂಡದ ಸಹಕಾರ ದಿಂದ ಅತ್ಯಂತ ಕೌಶಲ್ಯಪೂರ್ವಕವಾಗಿ ಕನಿಷ್ಠ ಪ್ರವೇಶ ಶಸ್ತ್ರಚಿಕಿತ್ಸೆಯ ಮೂಲಕ ಈ ಗೆಡ್ಡೆಯನ್ನು ಯಶಸ್ವಿಯಾಗಿ, ಸಂಪೂರ್ಣವಾಗಿ ತೆಗೆದುಹಾಕಲಾಯಿತು. ಈ ಮೂಲಕ ಮಹತ್ವದ ಮೈಲುಗಲ್ಲು ಸಾಧಿಸಲಾಯಿತು.
ಈ ರೆಟ್ರೋಸ್ಟರ್ನಲ್ ಗಾಯಿಟರ್ ನಲ್ಲಿ ಸಾಮಾನ್ಯವಾಗಿ ಕಂಠದಲ್ಲಿ ಊತ ಮಾತ್ರ ಕಾಣುತ್ತದೆ ಯಾದರೂ, ಸ್ಕ್ಯಾನ್ ಮಾಡಿದಾಗ ಈ ಗಡ್ಡೆ ಕತ್ತಿನಿಂದ ಎದೆಗೂಡಿನ ಹಿಂಭಾಗಕ್ಕೆ (ಸ್ಟರ್ನಮ್ ನ ಹಿಂದೆ) ಆಳವಾಗಿ ಬೆಳೆದು ಎದೆಯ ಒಳಗೆ ಹರಡಿಕೊಂಡಿರುವುದು ಕಂಡುಬಂದಿತ್ತು. ರೋಗಿಗೆ ಕೇವಲ ಸ್ವಲ್ಪ ಕಂಠದ ಸಮಸ್ಯೆ ಮತ್ತು ಕೆಲವೊಮ್ಮೆ ನುಂಗಲು ತೊಂದರೆ ಕಂಡುಬಂದಿದ್ದರೂ ಗೆಡ್ಡೆಯು ಮುಖ್ಯವಾಗಿ ರಕ್ತನಾಳಗಳು ಮತ್ತು ಗಾಳಿಯ ಹರಿವಿನ ದಾರಿಗೆ ಹತ್ತಿರವಾಗಿರುವ ಅಪಾಯಕಾರಿ ಸ್ಥಿತಿಯನ್ನು ವೈದ್ಯರು ಪತ್ತೆ ಹಚ್ಚಿದ್ದರು.
