
ಉದಯವಾಹಿನಿ,ಚಿಂಚೋಳಿ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಗೆ ಆಡಳಿತ ಮಂಡಳಿ ನಿರ್ದೇಶಕರ ಚಿಂಚೋಳಿ ಸಾಲಗಾರರಲ್ಲದ ಮತಕ್ಷೇತ್ರದ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಶ್ರೀಹರಿ ಕಿಶನರಾವ ಕಾಟಾಪೂರ 90ಮತಗಳು ಪಡೆದು ಪ್ರತಿಸ್ವರ್ಧಿ ಎದುರು 33ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಚುನಾವಣೆ ಪ್ರಕ್ರಿಯೆ ನಂತರ ಬಿಜೆಪಿ ಮುಖಂಡರು,ಬೆಂಬಲಿಗರು ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಜಯಘೋಷಗಳು ಕೂಗಿ ಚಂದಾಪೂರದಿಂದ ಚಿಂಚೋಳಿವರೆಗೆ ಮೆರವಣಿಗೆ ಮೂಲಕ ವಿಜಯೋತ್ಸವ ಆಚರಿಸಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ,ನಿರ್ದೇಶಕ ಜಗದೀಶಸಿಂಗ್ ಠಾಕೂರ್,ಸುಭಾಷ್ ಸೀಳಿನ,ಗೋಪಾಲರಾವ ಕಟ್ಟಿಮನಿ,ಬಿಜೆಪಿ ಯುಥ್ ಅಧ್ಯಕ್ಷ ಸತೀಶರೆಡ್ಡಿ,ಶಿವಯೋಗಿ ರುಸ್ತಾಂಪೂರ,ಗೌತಮ ಪಾಟೀಲ,ಶಾಮರಾವ ಕೊರವಿ,ಕೆಎಂ ಬಾರಿ,ಗಣಪತರಾವ,ಭವಾನಿಸಿಂಗ್ ಠಾಕೂರ್,ಶರಣುಗೌಡ ಮುದ್ದಾ,ಗಿರಿರಾಜ ನಾಟೀಕಾರ,ಚಂದ್ರಶೇಟ್ಟಿ ಜಾಧವ,ಅನೀಲಕುಮಾರ ಜಮಾದಾರ,ಶ್ರೀಕಾಂತ ಪಿತ್ತಲ್,ಅನೇಕರಿದ್ದರು.
