ಉದಯವಾಹಿನಿ, 2023ರ ಸೆಪ್ಟೆಂಬರ್‌ನಲ್ಲಿ ಆರ್ಕ್ಟಿಕ್ ಪ್ರದೇಶದಲ್ಲಿ ನಡೆದ ಒಂದು ಅಪರೂಪದ ಘಟನೆ ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದೆ. ಮೂರು ವರ್ಷದ ಹಿಂದಿನ ಈ ಘಟನೆ ಬಗ್ಗೆ ವಿವರಗಳನ್ನು ವಿಜ್ಞಾನಿಗಳು ಇದೀಗ ಬಿಚ್ಚಿಟ್ಟಿದ್ದು, ಅಚ್ಚರಿಗೆ ಕಾರಣವಾಗಿದೆ.
9 ದಿನಗಳವರೆಗೆ ಕಂಪಿಸಿದ ಭೂಮಿ
ಗ್ರೀನ್‌ಲ್ಯಾಂಡ್‌ನ ಡಿಕ್ಸನ್ ಫ್ಜೋರ್ಡ್‌ನಲ್ಲಿ ಸಂಭವಿಸಿದ ಬೃಹತ್ ಭೂಕುಸಿತದಿಂದ ಉಂಟಾದ ಮೆಗಾಸುನಾಮಿ ಪರಿಣಾಮವಾಗಿ, ಇಡೀ ಭೂಮಿ ಸುಮಾರು 9 ದಿನಗಳವರೆಗೆ ಪ್ರತಿ 90 ಸೆಕೆಂಡುಗಳಿಗೊಮ್ಮೆ ಕಂಪಿಸುತ್ತಿರುವಂತ ವಿಚಿತ್ರ ಸಂಕೇತವನ್ನು ವಿಜ್ಞಾನಿಗಳು ದಾಖಲಿಸಿದ್ದಾರೆ.ಈ ಅಪರೂಪದ ಭೂಕಂಪನ ಶಬ್ದವನ್ನು ಜಗತ್ತಿನ ವಿವಿಧ ಸೈಸ್ಮಿಕ್ ಕೇಂದ್ರಗಳು ಪತ್ತೆಹಚ್ಚಿದ್ದು, ಭೂಮಿಯು ಗಂಟೆಯಂತೆ ಮೊಳಗಿದ ವಿಚಿತ್ರವನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಮೆಗಾಸುನಾಮಿ ಉಂಟಾಗಿದ್ದು ಹೇಗೆ?
ವಿಜ್ಞಾನಿಗಳ ಅಧ್ಯಯನದ ಪ್ರಕಾರ, ಸುಮಾರು 25.5 ಮಿಲಿಯನ್ ಘನ ಮೀಟರ್ ಬಂಡೆಗಳು ಪರ್ವತ ಇಳಿಜಾರಿನಿಂದ ಜಾರಿಹೋಗಿ 540 ಮೀಟರ್ ಆಳದ ಫ್ಜೋರ್ಡ್‌ಗೆ ಅಪ್ಪಳಿಸಿದೆ. ಈ ವೇಳೆ ಭೂಕುಸಿತದಿಂದ ಸುಮಾರು 200 ಮೀಟರ್ ಎತ್ತರದ ಮೆಗಾಸುನಾಮಿ ಅಲೆ ಉಂಟಾಗಿದೆ. ಈ ಘಟನೆಗೆ ಪ್ರಮುಖ ಕಾರಣವೆಂದರೆ ಹವಾಮಾನ ಬದಲಾವಣೆಯಿಂದ ಉಂಟಾದ ಹಿಮನದಿ ಕರಗುವಿಕೆ. ಹಿಮನದಿಗಳು ಕರಗಿದಂತೆ ಪರ್ವತ ಇಳಿಜಾರಿನ ಸ್ಥಿರತೆ ಕಡಿಮೆಯಾಗಿದ್ದು, ದೊಡ್ಡ ಪ್ರಮಾಣದ ಬಂಡೆಗಳು ಕುಸಿಯಲು ಕಾರಣವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಗಂಟೆಯ ನಾದದ ಅನುಭವ ಆಗಿದ್ಹೇಗೆ?
ಡಿಕ್ಸನ್ ಫ್ಜೋರ್ಡ್ ಒಂದು ತುಂಬಾ ಕಿರಿದಾದ ಸಮುದ್ರ ಒಳಹರಿವು. ಇದರ ಎರಡೂ ಕಡೆ ತುಂಬಾ ಎತ್ತರದ ಕಲ್ಲುಬಂಡೆಗಳು ಇರುವುದರಿಂದ ನೀರು ಹೊರಗೆ ಬೇಗ ಹರಿದು ಹೋಗಲು ಸಾಧ್ಯವಾಗುವುದಿಲ್ಲ.

Leave a Reply

Your email address will not be published. Required fields are marked *

error: Content is protected !!