ಉದಯವಾಹಿನಿ, ತಮಿಳು ಸಿನಿರಂಗದ ಜನಪ್ರಿಯ ನಟಿ ತ್ರಿಷಾ ಕೃಷ್ಣನ್ ಇದೀಗ ಎಲ್ಲೆಡೆ ಸುದ್ದಿಯಲ್ಲಿದ್ದಾರೆ. ಜೊತೆಗೆ ಇತ್ತೀಚೆಗೆ ನಡೆದ ಒಂದು ಮದುವೆ ಸಮಾರಂಭದಲ್ಲಿ ತ್ರಿಷಾ ಹಾಗೂ ನಟ ವಿಜಯ್ ಒಟ್ಟಿಗೆ ಕಾಣಿಸಿಕೊಂಡಿದ್ದ ಬಳಿಕ ಹೇಳೋದೇ ಬೇಡ, ತ್ರಿಷಾ ಹಾಗೂ ವಿಜಯ್ ಬಗ್ಗೆ ಇದ್ದ ಎಲ್ಲಾ ಊಹಾಪೋಹಗಳು ನಿಜ ಆಗಿರಬಹುದು ಎಂದು ಅಭಿಮಾನಿಗಳು ಮಾತನಾಡಲು ಶುರು ಮಾಡಿದರು. ಅಷ್ಟೇ ಅಲ್ಲದೆ ಇತ್ತೀಚೆಗೆ ಚೆನ್ನೈ ಏರ್ ಪೋರ್ಟ್ ನಲ್ಲಿ ವರದಿಗಾರರು ಕೇಳಿದ ಪ್ರಶ್ನೆಗೆ ತ್ರಿಷಾ ನೀಡಿದ ಪ್ರತಿಕ್ರಿಯೆ ಇದೀಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಜೊತೆ ಜೊತೆಯಾಗಿ ವಿಜಯ್ ಮತ್ತು ತ್ರಿಷಾ
ಇತ್ತೀಚೆಗೆ ನಡೆದ ಒಂದು ಖಾಸಗಿ ವಿವಾಹ ಸಮಾರಂಭದಲ್ಲಿ ತಮಿಳು ನಟ ವಿಜಯ್ ಮತ್ತು ನಟಿ ತ್ರಿಷಾ ಕೃಷ್ಣನ್ ಇಬ್ಬರೂ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಇಬ್ಬರೂ ಒಂದೇ ಕಾರಿನಲ್ಲಿ, ಒಂದೇ ರೀತಿಯ ಬಟ್ಟೆ ಧರಿಸಿ ಎಲ್ಲರ ಗಮನ ಸೆಳೆದಿದ್ದರು. ಆ ಬಳಿಕ ಸಮಾರಂಭದ ಕೆಲವು ಫೋಟೋಗಳು ಮತ್ತು ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಲು ಶುರು ಆದವು.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಹೆಚ್ಚು ಚರ್ಚೆಯಾಗುತ್ತಿದ್ದ ಸಮಯದಲ್ಲೇ ನಟಿ ತ್ರಿಷಾ ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಗಮನಕ್ಕೆ ಬಂದರು. ಅಲ್ಲಿ ಇದ್ದ ವರದಿಗಾರರು ಮದುವೆ ಸಮಾರಂಭದಲ್ಲಿ ವಿಜಯ್ ಜೊತೆ ಅವರ ಭೇಟಿಯ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಆದರೆ ತ್ರಿಷಾ ಈ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮುಂದಕ್ಕೆ ನಡೆದು ಹೋಗಿದ್ದಾರೆ.

ವಿಡಿಯೋ ವೈರಲ್
ಇನ್ನು ಏರ್ಪೋರ್ಟ್ ನಲ್ಲಿ ತ್ರಿಷಾ ನಡೆದುಕೊಂಡ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಹಲವಾರು ಪ್ಲಾಟ್‌ಫಾರ್ಮ್‌ಗಳಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗುತ್ತಿದ್ದು ಅಭಿಮಾನಿಗಳು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ಮಾಡುತ್ತಿದ್ದಾರೆ.
ವಿಜಯ್ ಮತ್ತು ತ್ರಿಷಾ ಒಡನಾಟ
ವಿಜಯ್ ಮತ್ತು ತ್ರಿಷಾ ತಮಿಳು ಸಿನಿರಂಗದಲ್ಲಿ ಬಹಳ ವರ್ಷಗಳಿಂದ ಜನಪ್ರಿಯ ಜೋಡಿಯಾಗಿ ಗುರುತಿಸಿಕೊಂಡಿದ್ದಾರೆ. ಇಬ್ಬರೂ ಹಲವು ಹಿಟ್ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಗಿಲ್ಲಿ, ತಿರುಪಾಚಿ, ಆತಿ ಮತ್ತು ಕುರುವಿ ಸೇರಿದಂತೆ ಹಲವು ಚಿತ್ರಗಳಲ್ಲಿ ಇವರ ಜೋಡಿ ಕಾಣಿಸಿಕೊಂಡಿದೆ. ಈ ಚಿತ್ರಗಳು ತಮಿಳು ಸಿನಿರಂಗದಲ್ಲಿ ದೊಡ್ಡ ಯಶಸ್ಸು ಗಳಿಸಿದ್ದವು. ಈ ಕಾರಣದಿಂದ ಅಭಿಮಾನಿಗಳು ಇವರನ್ನು ಅತ್ಯಂತ ಪ್ರಿಯವಾದ ಆನ್ ಸ್ಕ್ರೀನ್ ಜೋಡಿಯಾಗಿ ನೋಡುತ್ತಾರೆ.

Leave a Reply

Your email address will not be published. Required fields are marked *

error: Content is protected !!