
ಉದಯವಾಹಿನಿ,ವಿಜಯಪುರ: ಜಿಲ್ಲೆಯ ಕೇಂದ್ರ ಸರ್ಕಾರದ ಮಾರ್ಗಸುಚಿ ಅನ್ವಯ ಬರ ಅಧ್ಯಯನ ನಡೆಸಲು ರಾಜ್ಯ ಸರ್ಕಾರ ನೀಡಿರುವ ಸೂಚನೆ ಅನ್ವಯ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಜೂನ್ 1 ರಿಂದ ಅಗಸ್ಟ್ 19ರ ಅವಧಿಯಲ್ಲಿ 1 ನೇ ಹಂತದ ಮಾನ ದಂಡ ಅನ್ವಯ ಅಧ್ಯಯನ ನಡೆಸಿ ರಾಜ್ಯ ಸರ್ಕಾರ ಕಂದಾಯ ಇಲಾಖೆಯ ಅಗಸ್ಟ್ 22 ರಂದು ವರದಿ ನೀಡಿದೆ ಈ ವಾರದಿಯಲಿ 38 ತೀವ್ರ ಬರಪೀಡಿತ ತಾಲೂಕುಗಳು ಹಾಗೂ ಮಾಧ್ಯಮ ಬರಪೀಡಿತ ತಾಲೂಕುಗಳ ಒಟ್ಟು 113 ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಸಲ್ಲಿಸಿದೆ 3 ನೇ ಹಂತದ ಜಂಟಿ ಸಮೀಕ್ಷೆ ಕೈಗೊಳುವಂತೆ ಗುರುವಾರ ಸುತೋಲೆ ಹೊರಡಿಸಿದೆ ಇದರ ಅನ್ವಯ ಬರಪೀಡಿತ ತಾಲ್ಲೂಕುಗಳ ಪರಿಸ್ಥಿತಿ ಪರಿಶೀಲಸಿ ತಾಲೂಕುಗಳ ಶೇಕಡಾ 22 ರಷ್ಟು ಹಳ್ಳಿಗಳು ಐದು ಗುರುತಿಸಿ ಮಾಹಿತಿ ನೀಡಲು ತಿಳಿಸಿದೆ ಆದರೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ರೈತರ ಬಾಳಲಿ ಕರಾಳ ಆವರಿಸಿತು. ಮಳೆಯ ಕೊರತೆಯಿಂದ ಸಾಲ ಸುಲ ಮಾಡಿ ಭೀಜ ಗೊಬ್ಬರ ಹಾಕಿ ಉಳಿಮೆ ಮಾಡಿದ ರೈತರ ಬೆಳೆಗಳು ಒಣಗಿ ನಿಲ್ಲುತ್ತಿವೆ ದಿಕ್ಕು ತೋಚದಂತಾಗಿದೆ ಹೊಟ್ಟೆ ಪಾಡಿಗಾಗಿ ಹೊರ ರಾಜ್ಯ ಮತ್ತು ಜಿಲ್ಲೆಗಳಿಗೆ ಕೆಲಸಕ್ಕಾಗಿ ಹೋಗುತ್ತಿರುವುದು ಸರ್ವೇಸಾಮಾನ್ಯವಾಗಿದೆ ಆದ್ದರಿಂದಾಗಿ ರಾಜ್ಯ ಸರ್ಕಾರವು ವಿಜಯಪುರ ಜಿಲ್ಲೆಯ ಬಬಲೇಶ್ವರ ಮತ್ತು ನಿಡಗುಂದಿ ತಾಲ್ಲೂಕುಗಳನ್ನು ಈಗಾಗಲೇ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ತೆಗೆದುಕೊಳಲಾಗಿದೆ ಅವುಗಳ ಜೋತೆ ಇಂಡಿ ತಾಲೂಕನ್ನು ಬರಪೀಡಿತ ತಾಲೂಕಗಳ ಪಟ್ಟಿಯಲ್ಲಿ ಸೇರಿಸುವಂತೆ ಕ ರ ವೇ ಇಂಡಿ ತಾಲೂಕಾ ಅಧ್ಯಕ್ಷ ಬಾಳು ಮುಳಜಿ ಆಗ್ರಹ.
( ರಾಜ್ಯ ಸರ್ಕಾರ ನಮ್ಮ ಇಂಡಿ ತಾಲೂಕನ್ನು ಬರಪೀಡಿತ ತಾಲೂಕನ್ನಾಗಿ ಘೋಷಣೆ ಮಾಡದಿದ್ದರೆ ಇಂಡಿ ಬಂದ ಮಾಡಿ ಕರವೇ ಹೋರಾಟ ಮಾಡಲಾಗುವದು )
ಈ ಸಂದರ್ಭದಲ್ಲಿ ಬಾಳು ಮುಳಜಿ. ಸುನಿಲ ಗೌಡ ಬಿರಾದಾರ್. ರಾಜು ಕುಲಕರ್ಣಿ. ಮಹೇಶ್ ಹೋಗಾರ್. ರಾಜು ಪಡಗನೂರ್. ಮೈಹಿಬುಬ್ ಬೆನೂರ್.ಅರವಿಂದ್ ಪಾಟೀಲ್.ಸಾಬನ ನಾವಿ. ಶಿವಾನಂದ ಮಡಿವಾಳ. ಇನ್ನು ಹಲವರು ಉಪಸ್ಥಿತರಿದ್ದರು.
