ಉದಯವಾಹಿನಿ:  ಎಳನೀರು ಆರೋಗ್ಯಕ್ಕೆ ಅತ್ಯಂತ ಪೂರಕವಾಗಿದ್ದು ತೂಕ ಇಳಿಕೆಯ ಪ್ರಯತ್ನಗಳಿಗೆ ಅತಿ ಹೆಚ್ಚಿನ ನೆರವು ನೀಡುತ್ತದೆ. ಅಲ್ಲದೇ ಅಗತ್ಯವಿರುವ ಶಕ್ತಿಯನ್ನು ತಕ್ಷಣವೇ ಒದಗಿಸುವುದು, ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವುದು, ಸೂಕ್ಷ್ಮಜೀವಿಗಳಿಂದ ರಕ್ಷಣೆ ಒದಗಿಸುವುದು, ಮೂತ್ರದ ಪ್ರಮಾಣ ವರ್ಧಿಸಿ ದೇಹದಿಂದ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ನಿತ್ಯವೂ ಬೆಳಗ್ಗಿನ ಪ್ರಥಮ ಆಹಾರವಾಗಿ ಒಂದು ಭರ್ತಿ ಎಳನೀರನ್ನು ಕುಡಿದರೆ ದಿನದ ಅಗತ್ಯದ ಎಲೆಕ್ಟ್ರೋಲೈಟುಗಳು ಲಭಿಸುತ್ತವೆ. ಎಳನೀರು ಥೈರಾಯ್ಡ್ ಗ್ರಂಥಿಯ ಸ್ರವಿಕೆಗೆ ಪ್ರಚೋದನೆ ಒದಗಿಸುತ್ತದೆ. ಪೋಷಕಾಂಶಗಳಿಂದ ಸಮೃದ್ಧವಾಗಿದೆ ಅವಶ್ಯಕ ಎಲೆಕ್ಟ್ರೋಲೈಟುಗಳ ಹೊರತಾಗಿ ಕಾಲ್ಸಿಯಂ, ಮೆಗ್ನೇಶಿಯಂ, ಗಂಧಕ, ಪೊಟ್ಯಾಶಿಯಂ ಮತ್ತು ಸೋಡಿಯಂ ಅಂಶಗಳು ಪ್ರಮುಖವಾಗಿದ್ದು ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತವೆ. ತ್ವಚೆಯ ಆರೋಗ್ಯ ಉತ್ತಮವಾಗಿರಲು ದೇಹದಲ್ಲಿ ಸಾಕಷ್ಟು ಪ್ರಮಾಣದ ಆರ್ದ್ರತೆ ಇರಬೇಕು. ಎಳನೀರನ್ನು ಕುಡಿಯುವ ಹೊರತಾಗಿ ಎಳನೀರನ್ನು ತ್ಬೆಚೆಗೆ ಹಚ್ಚಿಕೊಳ್ಳುವ ಮೂಲಕವೂ ಅಗತ್ಯವಿರುವ ಪೋಷಣೆಯನ್ನು ಒದಗಿಸಬಹುದು. ಪರಿಣಾಮವಾಗಿ ಕ್ಷಿಪ್ರ ಸಮಯದಲ್ಲಿಯೇ ತ್ವಚೆ ಹೊಳೆಯಲಾರಂಭಿಸುತ್ತದೆ. ಎಳನೀರು ನೈಸರ್ಗಿಕ ಹಾಗೂ ಅತ್ಯುತ್ತಮವಾದ ತೇವಕಾರಕವಾಗಿದೆ ಹಾಗೂ ಈ ಗುಣ ಮೊಡವೆಗಳನ್ನು ದೂರವಿಡುತ್ತದೆ. ಎಳನೀರಿನಲ್ಲಿರುವ ಸೈಟೋಕಿನಿನ್ ಎಂಬ ಪೋಷಕಾಂಶಕ್ಕೆ ಚರ್ಮದ ಸೆಳೆತವನ್ನು ಹೆಚ್ಚಿಸುವ ಗುಣವಿದ್ದು ವೃದ್ದಾಪ್ಯದ ಚಿಹ್ನೆಗಳು ಆವರಿಸುವುದನ್ನು ತಡವಾಗಿಸಿ ವೃದ್ದಾಪ್ಯವನ್ನು ಮುಂದೂಡುತ್ತದೆ. ಅಲ್ಲದೇ ಎಕ್ಸಿಮಾ ಎಂಬ ಚರ್ಮರೋಗಕ್ಕೆ ಅತ್ಯುತ್ತಮ ಔಷಧಿಯೂ ಹೌದು. ಬಾಯಾರಿಕೆಗೆ ಎಳನೀರಿಗಿಂತ ಉತ್ತಮವಾದ ಜಲ ಈ ಜಗತ್ತಿನಲ್ಲಿಲ್ಲ. ವಿಶೇಷವಾಗಿ ಇದರಲ್ಲಿರುವ ಎಲೆಕ್ಟ್ರೋಲೈಟುಗಳು ದಣಿದ ದೇಹಕ್ಕೆ ಶಕ್ತಿಯನ್ನು ಒದಗಿಸುವ ಜೊತೆಗೇ ಬೆವರು, ಅತಿಸಾರ, ವಾಂತಿ ಮೊದಲಾದ ಕಾರಣಗಳಿಂದ ದೇಹದಿಂದ ನಷ್ಟವಾಗಿದ್ದ ನೀರಿನಂಶವನ್ನು ಮರುತುಂಬಿಸಿ ಕೊಡುತ್ತದೆ.

Leave a Reply

Your email address will not be published. Required fields are marked *

error: Content is protected !!