ಉದಯವಾಹಿನಿ, ಬೀಜಿಂಗ್: ಈ ವರ್ಷಾಂತ್ಯದಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನಡುವೆ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಸಭೆ ನಡೆಯುವುದು ಅಮೆರಿಕ ತೋರಿಸುವ ಪ್ರಾಮಾಣಿಕತೆಯನ್ನು ಅವಲಂಬಿಸಿದೆ ಎಂದು ಚೀನಾದ ರಾಷ್ಟ್ರೀಯ ಭದ್ರತಾ ಸಚಿವಾಲಯ ಹೇಳಿದೆ.
ನವೆಂಬರ್‌ನಲ್ಲಿ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆಯುವ ಏಶ್ಯಾ ಪೆಸಿಫಿಕ್ ಇಕನಾಮಿಕ್ ಕೋ-ಆಪರೇಷನ್ (ಅಪೆಕ್) ಶೃಂಗಸಭೆಯ ನೇಪಥ್ಯದಲ್ಲಿ ಜಿನ್‌ಪಿಂಗ್-ಬೈಡೆನ್ ನಡುವೆ ಮಾತುತಕೆ ನಡೆಯುವ ನಿರೀಕ್ಷೆಯಿದೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವಾಲಯ ‘ಉಭಯ ದೇಶಗಳ ನಡುವಿನ ಯಾವುದೇ ಸಭೆಯು ಅಮೆರಿಕ ತೋರಿಸುವ ಪ್ರಾಮಾಣಿಕತೆಯನ್ನು ಅವಲಂಬಿಸಿದೆ’ ಎಂದಿದೆ. ಬೈಡೆನ್ ಆಡಳಿತವು ಚೀನಾದ ವಿಷಯದಲ್ಲಿ ದ್ವಂದ್ವ ಸ್ವರೂಪದ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದ್ದು ಚೀನಾದೊಂದಿಗೆ ಸ್ಪರ್ಧೆಯನ್ನು ಆಹ್ವಾನಿಸುವ ಜತೆಗೆ ಸ್ಪರ್ಧೆಯನ್ನು ನಿಯಂತ್ರಿಸಲು ಬಯಸುತ್ತಿದೆ.
