
ಉದಯವಾಹಿನಿ ಯಾದಗಿರಿ : ಶ್ರೀಕೃಷ್ಣನ ಆದರ್ಶ ಸಂದೇಶಗಳು ಉತ್ತಮ ಜೀವನಕ್ಕೆ ದಾರಿ ದೀಪವಾಗಿವೆ ಎಂದು ಸರ್ಕಾರಿ ಪದವಿ ಕಾಲೇಜು ಉಪನ್ಯಾಸಕ ಶ್ರೀ ಬಸವರಾಜ ಅವರು ಹೇಳಿದರು. ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಇಂದು ಬುಧವಾರ ರಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಪಂಚಾಯತ, ಹಾಗೂ ಯಾದಗಿರಿ ನಗರಸಭೆ, ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ, ಶ್ರೀ ಕೃಷ್ಣ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ಶ್ರೀ ಕೃಷ್ಣನು ಭಗವದ್ಗೀತೆ ಮೂಲಕ ಧರ್ಮ ಪರಿಪಾಲನೆ, ಅನೈತಿಕತೆ ವಿರುದ್ಧ ಹೋರಾಟ, ಸತ್ಯ, ಪ್ರೀತಿ, ವಾತ್ಸಲ್ಯ, ಒಳ್ಳೆಯ ಜೀವನದ ಬಗ್ಗೆ ಆದರ್ಶ ಸಂದೇಶಗಳು ಸಮಾಜಕ್ಕೆ ಹಾಗೂ ವಿಶ್ವಕ್ಕೆ ಮಾದರಿಯಾಗಿವೆ ಎಂದು ಹೇಳಿದರು.ಶ್ರೀಕೃಷ್ಣನು ಯುದ್ಧ ಹಾಗೂ ಶಾಂತಿಯಲ್ಲಿ ಘನತೆ ಹಾಗೂ ಗೌರವವನ್ನು ಕಾಪಾಡಿಕೊಂಡಿದ್ದ. ಕಂಸ, ಜರಾಸಂಧ, ನರಕಾಸುರ ಹಾಗೂ ಕೌರವರ ಸಂವಹಾರಕ್ಕೆ ಕಾರಣಿಕರ್ತನು ಹಾಗೂ ಭಾರತಿಯರ ಪಾಲಿಗೆ ದೈವಿಸ್ವರೂಪಿಯಾಗಿದ್ದಾನೆ. ಶಿಷ್ಠರ ರಕ್ಷಕ ದೃಷ್ಠರ ಸಂವಹಾರಕನಾಗಿ ಜನ ಮಾನಸದಲ್ಲಿ ಉಳಿದಿದ್ದು, ಪಾಂಡವರಿಗೆ ಯುದ್ಧದಲ್ಲಿ ನೀಡಿದ ನೆರವು ಗೆಲವುಗೆ ಕಾರಣವಾಯಿತು. ಶ್ರೀಕೃಷ್ಣನ ಜೀವನವು ಎಲ್ಲರಿಗೆ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ತಹಸೀಲ್ದಾರ ಶ್ರೀ ಸುರೇಶ ಅಂಕಲಗಿ ಅವರು ಶ್ರೀ ಕೃಷ್ಣನು ವಿಷ್ಣುವಿನ ಅವತಾರ, ದೈವಸ್ವರೂಪಿ, ರಾಜನೀತಿಜ್ಞ, ಭಾರತೀಯರ ಪಾಲಿಗೆ ದೈವಿಸ್ವರೂಪಿಯಾಗಿದ್ದಾನೆ. ಶ್ರೀಕೃಷ್ಣನ ಜೀವನ, ತಾಳ್ಮೆ, ತತ್ವ ಆದರ್ಶಗಳು ಎಲ್ಲರಿಗೆ ದಾರಿ ದೀಪವಾಗಿವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು, ಯಾದಗಿರಿ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಜಹೀರುಲ್ಲ ಹುಸೇನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಉತ್ತರದೇವಿ ಉಪಸ್ಥಿತರಿದ್ದರು. ಆರೋಗ್ಯ ಇಲಾಖೆಯ ಮಾಳಪ್ಪ ಯಾದವ ಕಾರ್ಯಕ್ರಮ ನಿರೂಪಿಸಿದರು.
