
ಉದಯವಾಹಿನಿ ಮಸ್ಕಿ: ತಾಲೂಕಿನ ದುರ್ಗಾ ಕ್ಯಾಂಪ ಗ್ರಾಮದ ಉನ್ನತೀಕರಿಸಿದ ಹಿರಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಂದನ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕಾರ್ಯಕ್ರಮವನ್ನು ಮಸ್ಕಿಯ ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಬಿತ್ತುವ ಮೂಲಕ ರಾಷ್ಟ್ರದ ಉತ್ತಮ ಪ್ರಜೆಯನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ, ಸಮಾಜದಲ್ಲಿ ಶಿಕ್ಷಕರ ಪಾತ್ರ ದೊಡ್ಡದು, ನಾವು ಮಾಡುವ ಸಾಧನೆಗೆ ಶಿಕ್ಷಕರೇ ಪ್ರೇರಣೆಯಾಗಿದ್ದರು, ಹೀಗಾಗಿ ಗುರುಗಳಿಗೆ ವಂದಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಖುಷಿಯ ಸಂಗತಿ ಎಂದರು. ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಹಿರಿಯ ಶಿಕ್ಷಕ ಹನುಮಂತಪ್ಪ ಬಂಡಿವಡ್ದರ, ಗಂಗಾಧರ, ಚನ್ನಪ್ಪ, ರಾಮಣ್ಣ ಹಂಪರಾಗುಂದಿ, ಪ್ರಶಾಂತ ಅವರು ಮಾತನಾಡಿದರು. 20 ತಂಡಗಳ ಹಳೆ ವಿದ್ಯಾರ್ಥಿಗಳಿಂದ ಶಾಲಾ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಉಸ್ತಾವರಿ ಸಮಿತಿ ಅಧ್ಯಕ್ಷ ವೆಂಕಟೇಶ, ಮುಖ್ಯ ಅತಿಥಿ ಶೋಭಾ ಸೇರಿದಂತೆ ವಿದ್ಯಾರ್ಥಿಗಳಿದ್ದರು.
