
ಉದಯವಾಹಿನಿ ತಾಳಿಕೋಟಿ : ಪಟ್ಟಣದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಇದರ ಆಡಳಿತ ಮಂಡಳಿ ಸದಸ್ಯರ ಚುನಾವಣೆ ಸಪ್ಟಂಬರ್ 24ರಂದು ನಡೆಯಲಿದೆ. ಸಂಘದ ಆಡಳಿತ ಮಂಡಳಿಯ ಒಟ್ಟು 12 ಸದಸ್ಯರ ಸ್ಥಾನಕ್ಕೆ ಜರುಗಲಿರುವ ಈ ಚುನಾವಣೆಯಲ್ಲಿ ಸಾಲಗಾರರ ಸಾಮಾನ್ಯ ಸ್ಥಾನಕ್ಕೆ 5. ಸಾಲಗಾರರ ಮಹಿಳಾ ಸ್ಥಾನಕ್ಕೆ 02. ಸಾಲಗಾರರ ಹಿಂದುಳಿದ ಅ ವರ್ಗಕ್ಕೆ01. ಸಾಲಗಾರ ಹಿಂದುಳಿದ ಬ ವರ್ಗಕ್ಕೆ01. ಸಾಲಗಾರರ ಪರಿಶಿಷ್ಟ ಜಾತಿಗೆ 01. ಸಾಲಗಾರ ಪರಿಶಿಷ್ಟ ಪಂಗಡಕ್ಕೆ01. ಹಾಗೂ ಸಾಲಗಾರರಲ್ಲದ 01 ಸ್ಥಾನ ಇದೆ. ದಿನಾಂಕ 10 -09-2023 ರಿಂದ16 -09-2023 ವರೆಗೆ ಪ್ರತಿದಿನ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ಸಲ್ಲಿಸಲು ಸಂಘದ ಕಚೇರಿಯಲ್ಲಿ ಅವಕಾಶವಿರುವುದು ದಿನ 17ರಂದು ನಾಮಪತ್ರ ಪರಿಶೀಲನೆ ನಡೆಯುವುದು ದಿನಾಂಕ್ 18ರಂದು ನಾಮಪತ್ರ ಹಿಂದಕ್ಕೆ ತೆಗೆದುಕೊಳ್ಳಲು ಅವಕಾಶ ವಿರುವುದು 18ರಂದೆ ಉಮೇದವಾರರ ಯಾದಿಯನ್ನು ಪ್ರಕಟಿಸಲಾಗುವುದು 18ರಂದೆ ಉಮೇದವರರಿಗೆ ಚಿಹ್ನೆಯನ್ನು ಹಂಚಿಕೆ ಮಾಡಲಾಗುವುದು ದಿನಾಂಕ 20 ರಂದು ಅಂತಿಮ ಕಣದಲ್ಲಿರುವ ಉಮೇದು ವಾರರ ಹೆಸರು ಮತ್ತು ಹಂಚಿಕೆ ಮಾಡಲಾದ ಚಿನ್ಹೆ ಒಳಗೊಂಡು ಪಟ್ಟಿಯನ್ನು ಸಂಘದ ನೋಟಿಸ್ ಬೋರ್ಡ್ ಗೆ ಪ್ರಕಟಿಸಲಾಗುವುದು ಸೆಪ್ಟೆಂಬರ್ 24ರಂದು ಬೆಳಿಗ್ಗೆ 9:00 ರಿಂದ ಸಂಜೆ 4ರ ವರೆಗೆ ಎಸ್ ಕೆ ಬಾಲಕಿಯರ ಪ್ರೌಢಶಾಲೆಯಲ್ಲಿ ಮತದಾನ ನಡೆಯುವುದು ಮತದಾನದ ನಂತರ ಅಲ್ಲಿಯೇ ಮತಗಳ ಎಣಿಕೆ ನಡೆದು ಚುನಾವಣೆಯ ಫಲಿತಾಂಶ ಪ್ರಕಟಿಸಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ
